ನವದೆಹಲಿ, ಜುಲೈ.1: ವಾಣಿಜ್ಯ ಬಳಕೆ 19 ಕೆಜಿ ಅನಿಲ ಸಿಲಿಂಡರ್ ಬೆಲೆ ಸುಮಾರು 60 ರೂ.ಕಡಿಮೆ ಮಾಡಲಾಗಿದೆ.ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದ್ದು,ಗೃಹ ಬಳಕೆ 14 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್ ಪಿಜಿ ಸಿಲಿಂಡರ್ 1723.50 ರೂ.ಗಳ ಬದಲಿಗೆ 1665 ರೂ.ಗಳಿಗೆ ಲಭ್ಯವಿರುತ್ತದೆ. ಅಂದರೆ, ಇಲ್ಲಿ 58.50 ರೂ.ಗಳ ಇಳಿಕೆ
ಕಂಡುಬಂದಿದೆ. ಕೋಲ್ಕತ್ತಾದಲ್ಲಿ, ಇಂದಿನಿಂದ ವಾಣಿಜ್ಯ ಸಿಲಿಂಡರ್ 1769 ರೂ.ಗಳಿಗೆ ಲಭ್ಯವಿರುತ್ತದೆ.
ಮೊದಲು ಇದು 1826 ರೂ.ಗಳಿಗೆ ಲಭ್ಯವಿತ್ತು, ಈಗ ಅದು 57 ರೂ.ಗಳಷ್ಟು ಅಗ್ಗವಾಗಿದೆ. ಈಗ ಮುಂಬೈನಲ್ಲಿ ಈ ಸಿಲಿಂಡರ್ ದರ 1616 ರೂ. ಆಗಿದೆ. ಜೂನ್ ನಲ್ಲಿ ಇದು 1674.50 ರೂ. ಇತ್ತು. ಇದಕ್ಕೂ ಮೊದಲು, ಅಂದರೆ ಮೇ ತಿಂಗಳಲ್ಲಿ ಇದು 1699 ರೂ.ಗೆ ಲಭ್ಯ ವಿತ್ತು.
ಇಲ್ಲಿ, ಪ್ರತಿ ಸಿಲಿಂಡರ್ ಗೆ 58.50 ರೂ. ಕಡಿತ ಮಾಡಲಾಗಿದೆ. ಚೆನ್ನೈ ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1823.50 ರೂ. ಆಗಿದೆ. ಜೂನ್ ನಲ್ಲಿ ಇದು 1881 ರೂ.ಗೆ ಲಭ್ಯವಿತ್ತು. ಜೂನ್ 2025, ಮೇ 2025, ಏಪ್ರಿಲ್ 2025 ರಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳನ್ನು ಸಹ ಕಡಿಮೆ ಮಾಡಲಾಗಿತ್ತು.ಕಳೆದ ಜೂನ್ ತಿಂಗಳಲ್ಲಿ 24 ರೂ. ಇಳಿಕೆ ಮಾಡಲಾಗಿತ್ತು ಮೇ ತಿಂಗಳಲ್ಲಿ 14.50 ರೂ. ಮತ್ತು ಏಪ್ರಿಲ್ ತಿಂಗಳಲ್ಲಿ 41 ರೂ. ಇಳಿಕೆ ಮಾಡಲಾಗಿತ್ತು.
14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಇಂದಿನ ದರ ದೆಹಲಿ 853 ರೂ., ಗುರುಗ್ರಾಮ 861.5 ರೂ., ಅಹಮದಾಬಾದ್ 860 ರೂ., ಪಾಟ್ನಾ 942.5 ರೂ., ಆಗ್ರಾ 865.5 ರೂ., ಬೆಂಗಳೂರು 855.5 ರೂ., ಹೈದರಾಬಾದ್ 905 ರೂ., ಪುಣೆಯಲ್ಲಿ 856 ರೂ., ಮುಂಬೈ 852.50 ರೂ., ಲಕ್ಷ್ಮೀ 890.5 ರೂ ಇದೆ.
- ಐದು ರಾಷ್ಟ್ರಗಳ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ, ಟೀಕಿಸಿದ ಕಾಂಗ್ರೆಸ್
- ರಾಜ್ಯದಲ್ಲಿ ಮೂರು ದಿನಗಳ ಕಾಲ ಸಾಧಾರಣ ಮಳೆ ನಿರೀಕ್ಷೆ
- ಬಿಎಸ್ಎಫ್ ಯೋಧನ ಪತ್ನಿ ಮೇಲೆ ಅತ್ಯಾಚಾರ
- ನನಗೆ ಮಂತ್ರಿಗಿರಿಯ ಆಸೆಯಿಲ್ಲ : ರಾಜುಕಾಗೆ
- ಕೋಲಾರದಲ್ಲಿ ರಾಜಕೀಯ ಕಾದಾಟ, ಶಾಸಕರ ನಡುವೆ ಬಹಿರಂಗ ವಾಕ್ಸಮರ