Thursday, April 3, 2025
Homeರಾಷ್ಟ್ರೀಯ | Nationalವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಪ್ರತಿ ಸಿಲಿಂಡರ್‌ಗೆ 16.5 ರೂ.ಏರಿಕೆ

ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಪ್ರತಿ ಸಿಲಿಂಡರ್‌ಗೆ 16.5 ರೂ.ಏರಿಕೆ

Commercial LPG Cylinder Price Up By Rs 16.5, ATF Price Hiked 1.45%

ನವದೆಹಲಿ, ಡಿ.1-ವಿಮನಕ್ಕೆ ಬಳಸುವ ಇಂಧನ (ಎಟಿಎಫ್‌)ದರವನ್ನು ಶೇ.1.45 ರಷ್ಟು ಏರಿಕೆಯಾಗಿದೆ ಮತ್ತು ವಾಣಿಜ್ಯಬಳಕೆಯ ವಾಣಿಜ್ಯ ಎಲ್‌ಪಿಜಿ ದರಗಳು (19 ಕೆಜಿ) ಸಿಲಿಂಡರ್‌ಗೆ 16.5 ರೂ.ಗಳಷ್ಟು ಏರಿಕೆಯಾಗಿದೆ. ವಿಮಾನಯಾನ ಟರ್ಬೈನ್‌ ಇಂಧನದರವನ್ನು ಪ್ರತಿ ಕಿಲೋಲೀಟರ್‌ಗೆ ರೂ 1,318.12 ಹೆಚ್ಚಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕಿಲೋಗೆ ರೂ 91,856.84 ಕ್ಕೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ತೈಲ ಬೆಲೆ ಅನುಗುಣವಾಗಿ ದರ ಪರಿಷ್ಖರಣೆಯಾಗಿದೆ.

ಈ ವಲಯದ ಇಂಧನ ಬೆಲೆಯು 1 ತಿಂಗಳ ಎರಡನೇ ಭರಿಗೆ ಹೆಚ್ಚಳವಾಗಿದೆ. ಕಳೆದ ನ. 1 ರಂದು ಪ್ರತಿ ಕಿಲೋಗೆ ರೂ 2,941.5 (ಶೇಕಡಾ 3.3) ರಷ್ಟು ಹೆಚ್ಚಿಸಲಾಗಿತ್ತು ಆದರೆ ಅಧಕ್ಕೂ ಮುನ್ನ ಅ.1 ರಂದು ಎಟಿಎಫ್‌ ಬೆಲೆಯನ್ನು ಶೇಕಡಾ 6.3 ರಷ್ಟು (ಪ್ರತಿ ಕೆಎಲ್‌ಗೆ ರೂ 5,883) ಮತ್ತು ಪ್ರತಿ ಕಿಲೋಗೆ ರೂ 4,495.5 ಮತತು ಸೆಪ್ಟೆಂಬರ್‌ 1 ರಂದು ಶೇಕಡಾ 4.58 ರಷ್ಟು ಕಡಿತಗೊಳಿಸಲಾಗಿತ್ತು.

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಎಟಿಎಫ್‌ ಬೆಲೆ ಇಂದು ಪ್ರತಿ ಕಿಲೋಗೆ 84,642.91 ರಿಂದ 85,861.02 ರೂ.ಗೆ ಹೆಚ್ಚಿಸಲಾಗಿದೆ. ತೈಲ ಸಂಸ್ಥೆಗಳು ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು 19 ಕೆಜಿ ಸಿಲಿಂಡರ್‌ಗೆ 16.5 ರೂ.ನಿಂದ 1818.50 ರೂ.ಗೆ ಹೆಚ್ಚಿಸಿವೆ. ಇದು ವಾಣಿಜ್ಯಎಲ್‌ಪಿಜಿ ಬೆಲೆಯಲ್ಲಿ ಸತತ ಐದನೇ ಭಾರಿಗೆ ಏರಿಕೆಯಾಗಿದೆ.1 ತಿಂಗಳಲ್ಲಿ 62 ರೂಪಾಯಿಗಳಷ್ಟು ದರವನ್ನು ಹೆಚ್ಚಿಸಲಾಗಿದೆ. ದರಗಳು ಈಗ ಒಂದು ವರ್ಷದ ಗರಿಷ್ಠ ಮಟ್ಟದಲ್ಲಿವೆ.

ವ್ಯಾಟ್‌ ಸೇರಿದಂತೆ ಸ್ಥಳೀಯ ತೆರಿಗೆಗಳ ಅವಲಂಬಿಸಿ ಮತ್ತು ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಗೃಹಬಳಕೆಯ ಮನೆಗಳಲ್ಲಿ ಬಳಸುವ ಅಡುಗೆ ಅನಿಲದ ದರವು 14.2 ಕೆಜಿ ಸಿಲಿಂಡರ್‌ಗೆ 803 ರೂ.ಗಳಲ್ಲಿ ಬದಲಾಗದೆ ಉಳಿದಿದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ , ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ , ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ಗಳು ಅಂತರಾಷ್ಟ್ರೀಯ ಇಂಧನ ಮತ್ತು ವಿದೇಶಿ ಸರಾಸರಿ ಬೆಲೆಯನ್ನು ಆಧರಿಸಿ ಪ್ರತಿ ತಿಂಗಳ ಮೊದಲನೆಯ ದಿನದಲ್ಲಿಬೆಲೆಗಳನ್ನು ಪರಿಷ್ಕರಿಸುತ್ತದೆ.

RELATED ARTICLES

Latest News