Monday, September 1, 2025
Homeರಾಷ್ಟ್ರೀಯ | Nationalವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 51.50 ರೂ. ಇಳಿಕೆ

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 51.50 ರೂ. ಇಳಿಕೆ

Commercial LPG cylinder prices reduced by Rs 51.50

ನವದೆಹಲಿ, ಸೆ.1: ದೇಶೀಯ ತೈಲ ಕಂಪನಿಗಳು ವಾಣಿಜ್ಯ ಬಳಕೆ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 51.50 ರೂ. ಇಳಿಕೆ ಮಾಡಿವೆ. ಂದಿನಿಒಂದಲೆ ಇದು ಜಾರಿಯಾಗಿದ್ದು,ಇದರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರೋದ್ಯಮಗಳಿಗೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಕ್ಕಂತಾಗಿದೆ.

ಪರಿಷ್ಕೃತ ಬೆಲೆಯ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ 1,580 ರೂ. ಆಗಿದ್ದು, ಜಾಗತಿಕ ಇಂಧನ ದರ ಲೆಕ್ಕಾಚಾರ ಮಾಡಿ ನಿಯಮಿತ ಮಾಸಿಕ ಪರಿಷ್ಕರಣೆಗಳ ಭಾಗವಾಗಿ ಈ ದರ ಇಳಿಕೆ ಕಡಿತ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನ ಬೆಂಗಳೂರಿನಲ್ಲೂ 51.50 ರೂ. ಇಳಿಕೆಯೊಂದಿಗೆ ಪ್ರತಿ ಸಿಲೆಂಡರ್‌ ಬಲೆ 1,653 ರೂ ಇಳಿದಿದೆ ಇದರಿಂದ ನಗರ ಕೇಂದ್ರಗಳಲ್ಲಿ ಕಾರ್ಯಾಚರಣೆಯ ವೆಚ್ಚವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ನ್ನು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಈಗಿರುವ 855.50 ರೂ. ಮುಂದುವರಿದಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ 5 ಕೆಜಿಗೆ 318.50 ರೂ.ಸಿಗುತ್ತಿದೆ.

RELATED ARTICLES

Latest News