ಬೆಂಗಳೂರು, ಮಾ.29- ಪ್ರಸಕ್ತ ಆರ್ಥಿಕ ಸಾಲಿನ ವರ್ಷಾಂತ್ಯದ ಸಾರ್ವತ್ರಿಕ ದಿನಗಳಾದ ನಾಳೆ ಹಾಗೂ ಸೋಮವಾರ ವಾಣಿಜ್ಯ ತೆರಿಗೆಗಳ ಇಲಾಖೆಯ ಎಲ್ಲಾ ಕಛೇರಿಗಳು ಕಾರ್ಯನಿರ್ವಹಿಸಲಿವೆ.
2024-25ನೇ ಆರ್ಥಿಕ ವರ್ಷಾಂತ್ಯದ ದಿನಗಳಾದ ಮಾ.30ರ ಭಾನುವಾರ ಮತ್ತು ಚಾಂದ್ರಮಾನ ಯುಗಾದಿ) ಹಾಗೂ ಮಾ. 31ರಂದು ರಂಜಾನ್ ಹಬ್ಬದ ಸಾರ್ವತ್ರಿಕ ರಜಾ ದಿನಗಳಾಗಿವೆ.
ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಎರಡೂ ದಿನಗಳಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಎಲ್ಲಾ ಕಛೇರಿಗಳು ಕಾರ್ಯನಿರ್ವಹಿಸಲಿವೆ. ತೆರಿಗೆ ಪಾವತಿದಾರರು ಈ ಸದಾವಕಾಶವನ್ನು ಬಳಸಿಕೊಂಡು ತೆರಿಗೆ ಪಾವತಿಸಬಹುದು ಎಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಆಯುಕ್ತ ವಿಪುಲ್ ಬನ್ಸಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.