Friday, July 18, 2025
Homeರಾಜ್ಯಸ್ಮಾರ್ಟ್ ಮೀಟರ್‌ನಲ್ಲಿ ಕಮಿಷನ್‌ ಹೊಡೆಯುವ ಹುನ್ನಾರ : ಬಸವರಾಜ ಬೊಮ್ಮಾಯಿ

ಸ್ಮಾರ್ಟ್ ಮೀಟರ್‌ನಲ್ಲಿ ಕಮಿಷನ್‌ ಹೊಡೆಯುವ ಹುನ್ನಾರ : ಬಸವರಾಜ ಬೊಮ್ಮಾಯಿ

commission on smart meters: Basavaraja Bommai

ಹಾವೇರಿ,ಜು.17- ರಾಜ್ಯಕ್ಕೆ ಹೆಚ್ಚಿನ ರಸಗೊಬ್ಬರ ಬೇಡಿಕೆ ಇದ್ದರೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಅಗತ್ಯ ರಸಗೊಬ್ಬರ ಸರಬರಾಜು ಮಾಡುತ್ತದೆ. ಕೇಂದದಿಂದ ರಸಗೊಬ್ಬರ ಕೊಡಿಸಲು ಪಯತ್ನಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್ಚಿನ ರಸಗೊಬ್ಬರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಸರ್ಕಾರ ರಸಗೊಬ್ಬರ ಪೂರೈಕೆ ಮಾಡುತ್ತದೆ. ಆ ಕೆಲಸ ಮಾಡುವುದು ಕೃಷಿ ಇಲಾಖೆಯ ಕರ್ತವ್ಯ ಎಂದು ಹೇಳಿದರು.

ಮನೆಗಳಿಗೆ ಸಾರ್ಟ್‌ ಮೀಟರ್‌ ಅಳವಡಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾರ್ಟ್‌ ಮೀಟರ್‌ ವಿಚಾರ ಕೋರ್ಟ್‌ನಲ್ಲಿ ಇದೆ. ಇದಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಲೋಕಾಯುಕ್ತಕ್ಕೂ ದೂರು ಹೋಗಿದೆ. ಬೇರೆ ರಾಜ್ಯಗಳಲ್ಲಿ ಕಡಿಮೆ ದರದಲ್ಲಿ ಸಾರ್ಟ್‌ ಮೀಟರ್‌ ಅಳವಡಿಕೆ ಆಗಿದೆ.

ಕೆಲವು ಕಡೆಗಳಲ್ಲಿ ಲೀಜ್‌ ಮೇಲೆ ನೀಡಲಾಗಿದೆ. ರಾಜ್ಯ ಸರ್ಕಾರ ಗ್ರಾಹಕರಿಂದ ಹೆಚ್ಚಿನ ದರ ಪಡೆದು ಅದರಲ್ಲಿಯೂ ಕಮಿಷನ್‌ ಪಡೆಯುವ ಹುನ್ನಾರ ಇದೆ ಎಂದು ಜನರಿಗೆ ಸಂಶಯ ಬರುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು. ಪ್ರಕರಣ ಕೋರ್ಟ್‌ನಲ್ಲಿ ಇದೆ ಎಂದರು. ಹಾವೇರಿ ಮೆಡಿಕಲ್‌ ಕಾಲೇಜು ಉದ್ಘಾಟನೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಸಚಿವರು ಹಾಗೂ ಮುಖ್ಯಮಂತಿಯವನ್ನು ಕರೆಯಿಸಿ ಉದ್ಘಾಟನೆ ಮಾಡಿಸಲು ಕ್ರಮ ವಹಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.

RELATED ARTICLES

Latest News