ಮೈಸೂರು,ಅ.28- ಮುಡಾದಲ್ಲಿ ನಟೇಶ್ ಮತ್ತು ಗಿರೀಶ್ ಕುಮಾರ್ ಅವರು ಆಯುಕ್ತರಾಗಿದ್ದ ಅವಧಿಯಲ್ಲಿ 928 ನಿವೇಶನಗಳನ್ನು 50:50 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದ್ದು, ಇದರ ಸಮಗ್ರ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ಮೈಸೂರು ಲೋಕಾಯುಕ್ತ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಿರುವ ಅವರು, 50:50 ಅನುಪಾತವನ್ನು ನಿಯಮಬಾಹಿರವಾಗಿ ಜಾರಿಗೊಳಿಸಿ ಪ್ರಭಾವಿಗಳಿಗೆ ನಿವೇಶನ ಹಂಚಲಾಗಿದೆ. ಇದರಲ್ಲಿ ಭಾರಿ ಪ್ರಮಾಣದ ಆರ್ಥಿಕ ವಹಿವಾಟು ನಡೆದಿದೆ. ಇದರ ವಿರುದ್ಧ ತನಿಖೆ ನಡೆಸುವುದರ ಜೊತೆಗೆ ಹಿಂದಿನ ಮುಡಾ ಆಯುಕ್ತರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ನಿವೇಶನ ಹಂಚಿಕೆಯಲ್ಲಿ ಮಂಜುನಾಥ್, ಜಿ.ಟಿ.ದೇವೇಗೌಡರ ಸಂಬಂಧಿಕರು ಸೇರಿದಂತೆ ಹಲವರು ಫಲಾನುಭವಿಗಳಿದ್ದಾರೆ ಎಂದು 59 ಪುಟಗಳ ದಾಖಲೆಗಳನ್ನು ಇಂದು ಲೋಕಾಯುಕ್ತ ಕಚೇರಿಗೆ ಸಲ್ಲಿಸಿದ್ದಾರೆ.