Thursday, April 3, 2025
Homeಜಿಲ್ಲಾ ಸುದ್ದಿಗಳು | District Newsಸಿಎಂ ಭದ್ರತಾ ವಾಹನಕ್ಕೆ ಅಡ್ಡಿಪಡಿಸಿದ ಬೈಕ್‌ ಸವಾರನ ವಿರುದ್ಧ ದೂರು

ಸಿಎಂ ಭದ್ರತಾ ವಾಹನಕ್ಕೆ ಅಡ್ಡಿಪಡಿಸಿದ ಬೈಕ್‌ ಸವಾರನ ವಿರುದ್ಧ ದೂರು

ಮೈಸೂರು,ಜೂ. 26-ಮುಖ್ಯಮಂತ್ರಿಗಳ ಕಾನ್‌ವೇ ಸಾಗಲು ಅಡಚಣೆ ಮಾಡಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬೈಕ್‌ ಸವಾರನ ವಿರುದ್ಧ ಮೈಸೂರಿನ ಕೆಆರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರುಣ ಗ್ರಾಮದ ಕುಂಬ್ರಳ್ಳಿ ನಿವಾಸಿ ಶಿವು(30) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.ಜೂ.23ರಂದು ಮುಖ್ಯಮಂತ್ರಿಗಳ ಕಾನ್‌ವೇ ಏರ್‌ಪೋರ್ಟ್‌ನಿಂದ ನಜರ್‌ಬಾದ್‌ನಲ್ಲಿರುವ ರಿಫ್ರೆಷ್‌ ಮೆಂಟ್‌ ಕಡೆಗೆ ಸಾಗುತ್ತಿತ್ತು.

ಕಾನ್‌ವೇ ಸಾಗುವ ಹಾದಿಯಾದ ಮೈಸೂರು-ನಂಜನಗೂಡು ಹೆದ್ದಾರಿಯ ರಾಜಹಂಸ ಜಂಕ್ಷನ್‌ ಬಳಿ ಬ್ಯಾರಿಕೇಡ್‌ಗಳಮ್ಮಿ ಅಳವಡಿಸಿ ಗನ್‌ಹೌಸ್‌ ರಸ್ತೆಯಿಂದ ಬರುವ ವಾಹನಗಳನ್ನ ನಿಯಂತ್ರಿಸುವ ಕರ್ತವ್ಯದಲ್ಲಿ ಸಂಚಾರಿ ಸಿಬ್ಬಂದಿಗಳಾದ ಅಣ್ಣಯ್ಯ ಹಾಗೂ ಉಪೇಂದ್ರ ಅವರು ನಿರತರಾಗಿದ್ದರು.

ಈ ವೇಳೆ ಶಿವು ತನ್ನ ಯಮಹಾ ಬೈಕ್‌ನಲ್ಲಿ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಬರುತ್ತಿದ್ದ. ಇದನ್ನು ಗಮನಿಸಿದ ಅಣ್ಣಯ್ಯ ಹಾಗೂ ಉಪೇಂದ್ರ ಅವರು ಬೈಕ್‌ ನಿಲ್ಲಿಸುವಂತೆ ಸೂಚನೆ ನೀಡಿದರು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಶಿವು ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಉಪೇಂದ್ರ ಅವರಿಗೆ ಡಿಕ್ಕಿ ಹೊಡೆದು ನಂತರ ಬ್ಯಾರಿಕೇಡ್‌ಗಳನ್ನು ಭೇದಿಸಿ ಸಿಎಂ ಕಾನ್‌ವಾಯ್‌ ಬರುತ್ತಿದ್ದ ವಿರುದ್ಧ ದಿಕ್ಕಿನಲ್ಲಿ ಅತಿವೇಗವಾಗಿ ಚಲಿಸಿ ನಂತರ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ.

ಇದರಿಂದಾಗಿ ಸಿಎಂ ಕಾನ್‌ವೇ ಸುಗಮವಾಗಿ ಸಾಗಲು ಕೆಲಕಾಲ ಅಡಚಣೆಯಾಗಿದೆ. ಬೈಕ್‌ನಿಂದ ಬಿದ್ದು ಗಾಯಗೊಂಡ ಶಿವುನನ್ನು ಕಾನ್‌ವೇ ಜೊತೆ ಬರುತ್ತಿದ್ದ ಅಂಬ್ಯುಲ್ಸೆ್‌ ಮೂಲಕ ಗೋಪಾಲಗೌಡ ಆಸ್ಪತ್ರೆಗೆ ಸಾಗಿಸಲಾಗಿದೆ.

ಸಿಎಂ ಕಾನ್‌ವೇಗೆ ಅಡ್ಡಿಪಡಿಸಿ ಕರ್ತವ್ಯ ನಿರತ ಪೊಲೀಸ್‌ಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶಿವು ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸಂಚಾರಿ ಪೇದೆ ಅಣ್ಣಯ್ಯ ಕೆಆರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Latest News