Saturday, July 5, 2025
Homeರಾಜ್ಯತುಮಕೂರು ಜಿಲ್ಲೆಗೆ ಸಂಪೂರ್ಣ ನೀರಾವರಿ : ಡಿ.ಕೆ.ಶಿವಕುಮಾರ್‌

ತುಮಕೂರು ಜಿಲ್ಲೆಗೆ ಸಂಪೂರ್ಣ ನೀರಾವರಿ : ಡಿ.ಕೆ.ಶಿವಕುಮಾರ್‌

Complete irrigation for Tumkur district: D.K. Shivakumar

ಬೆಂಗಳೂರು,ಜು.5- ಕುಣಿಗಲ್‌ ತಾಲ್ಲೂಕಿಗೊಂದೇ ಅಲ್ಲ, ಇಡೀ ತುಮಕೂರು ಜಿಲ್ಲೆಗೆ ನೀರು ಕಲ್ಪಿಸುವ ಯೋಜನೆ ರೂಪಿಸಲಾ ಗುತ್ತಿದೆ ಎಂದು ಜಲಸಂಪನೂಲ ಸಚಿವರಾದ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ತುಮಕೂರು ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಲಿಂಕ್‌ ಕೆನಾಲ್‌ ಯೋಜನೆಯ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಮೊದಲು ಶಾಸಕರು, ತಜ್ಞರ ಸಮಿತಿ ರಚನೆ ಮಾಡಿ ಎಂದು ಹೇಳಿದ್ದರು. ಅದರಂತೆ ಸಮಿತಿ ರಚಿಸಿ ವರದಿ ಪಡೆದು ಕೆಲಸ ಆರಂಭಿಸಿದ್ದೇವೆ. ಈಗ ಮತ್ತೊಂದು ರೀತಿಯ ಆರೋಪಗಳು ಕೇಳಿಬರುತ್ತಿವೆ.

ನಿನ್ನೆ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸೋಮಣ್ಣ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಿಂದ ವರದಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಆ ರೀತಿಯ ವರದಿಯನ್ನು ತೆಗೆದುಕೊಳ್ಳುತ್ತೇವೆ ಎಂದರು.

ಶಾಸಕರ ವಿಚಾರದಲ್ಲಿ ಬಹಳ ಗೌರವಪೂರ್ವಕವಾಗಿ ಅವರು ಹೇಳಿದ್ದನ್ನು ಕೇಳಿದ್ದೇವೆ. ತಜ್ಞರ ಸಮಿತಿ ವರದಿ ಬಳಿಕ ಮತ್ತೆ ಪ್ರತಿಭಟನೆ ಮಾಡುವುದು ಸರಿಯಲ್ಲ. ಈಗ ಪೈಪ್‌ಲೈನ್‌ ಬದಲಾಗಿ ತೆರೆದ ಕಾಲುವೆಗಳ ಮೂಲಕ ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗುವಂತೆ ಕೇಳುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದಾಗಿದೆ. ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಆಯಾ ಸರ್ಕಾರ ಬೇರೆಬೇರೆ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆ ಆರಂಭಿಸಿದ್ದು ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ. 600 ಕೋಟಿ ರೂ.ನಷ್ಟಿದ್ದ ಯೋಜನಾ ವೆಚ್ಚ ಈಗ 900 ಕೋಟಿ ರೂ.ಗಳಾಗಿವೆ. ಅದಕ್ಕೆ ಯಾರು ಹೊಣೆ?, ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ, ತುರುವೇಕೆರೆಯ ಕೃಷ್ಣಪ್ಪ ಅವರನ್ನು ಕೇಳಲು ಸಾಧ್ಯವೇ? ಎಂದರು.

ತಮ ಕ್ಷೇತ್ರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಬಿಜೆಪಿ ಸರ್ಕಾರ ಸ್ಥಳಾಂತರ ಮಾಡಿತ್ತು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಭರವಸೆ ಕೊಟ್ಟು ಬಜೆಟ್‌ನಲ್ಲಿ ಪ್ರಕಟಿಸಿದ ಹೊರತಾಗಿಯೂ ಕನಕಪುರದ ಬದಲಾಗಿ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್‌ ಕಾಲೇಜು ಸ್ಥಳಾಂತರಗೊಂಡಿತ್ತು. ಆಯಾ ಸರ್ಕಾರದ ನಿಲುವುಗಳು ಬೇರೆಬೇರೆಯಾಗಿರುತ್ತವೆ ಎಂದು ಹೇಳಿದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಮಂಡ್ಯದಲ್ಲಿ ನಡೆಸಿದ ದಿಶಾ ಸಭೆಗೆ ಶಾಸಕರು ಗೈರುಹಾಜರಾದ ಬಗ್ಗೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್‌ ನಿರಾಕರಿಸಿದರು.

RELATED ARTICLES

Latest News