Sunday, December 29, 2024
Homeರಾಜ್ಯಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಸಂತಾಪ ಸೂಚನೆ

ಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಸಂತಾಪ ಸೂಚನೆ

Condolences expressed in the Upper House

ಬೆಳಗಾವಿ,ಡಿ.9- ಇತ್ತೀಚೆಗೆ ಅಗಲಿದ ಖ್ಯಾತ ಕೈಗಾರಿಕೋದ್ಯಮಿ ರತನ್‌ ಟಾಟಾ, ಮಾಜಿ ಸಚಿವ ಮನೋಹರ್‌ ತಹಸೀಲ್ದಾರ್‌ ಸೇರಿದಂತೆ ಮತ್ತಿತರ ಅಗಲಿದ ಗಣ್ಯರಿಗೆ ವಿಧಾನಪರಿಷತ್‌ನಲ್ಲಿ ಸಂತಾಪ ಸೂಚಿಸಲಾಯಿತು. ದಿನದ ಕಲಾಪ ಬೆಳಗ್ಗೆ 11 ಗಂಟೆಗೆ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿದರು.

ಸದನವು ಇತ್ತೀಚೆಗೆ ಅಗಲಿದ ವಿಧಾನಪರಿಷತ್‌ ಮಾಜಿ ಸದಸ್ಯರಾದ ಕೆ.ಎಚ್‌.ಶ್ರೀನಿವಾಸ್‌‍, ಸುಮಲತಾ ವಸಂತ್‌ ಆಸ್ನೋಟಿಕರ್‌, ಕಾಲೇಗುಡ್ಡೇ ಇಸಾಯಿಲ್‌ ಸಾಬ್‌, ನರೇಂದ್ರ ಕೇಣಿ, ಕೆ.ನಿರಂಜನ ನಾಯ್ಡು, ಸಾವಿತ್ರಮ ಎಂ.ಗುಂಡಿ, ಮಾಜಿ ಸಚಿವ ಮನಹೋರ್‌ ತಹಸೀಲ್ದಾರ್‌, ರಾಷ್ಟ್ರ ಕಂಡ ಶ್ರೇಷ್ಠ ಕೈಗಾರಿಕೋದ್ಯಮಿ ರತನ್‌ ಟಾಟಾ, ಕಲಬುರಗಿ ಜಿಲ್ಲೆಯ ಕಾಜಾಬಂದ ನವಾಜ್‌ ವಿವಿಯ ಕುಲಪತಿ ಹಾಗೂ ಶಿಕ್ಷಣ ತಜ್ಞ ಡಾ.ಸಯ್ಯದ್‌ ಷಹಾ ಕುಸ್ರೋ ಉಸೇನಿ ಹಾಗೂ ಖ್ಯಾತ ಸಾಹಿತಿ ರಾಜೇಶೇಖರ್‌ ನೀರಾ ಮಾನ್ವಿ ಅವರಿಗೆ ಸಂತಾಪ ಸೂಚಿಸಿತು.

ಸಂತಾಪ ನಿರ್ಣಯದ ಪರವಾಗಿ ಮಾತನಾಡಿದ ಸಭಾಪತಿ, ವಿಧಾನಪರಿಷತ್‌ ಸದಸ್ಯರಾಗಿದ್ದ ಕೆ.ಎಚ್‌.ಶ್ರೀನಿವಾಸ್‌‍ ಅವರು ಓರ್ವ ಉತ್ತಮ ಸಂಸದೀಯ ಪಟು, ಸಾಹಿತಿ, ಬರಗಾರ, ಸಂಗೀತ ಪ್ರಿಯರಾಗಿದ್ದ ಅವರು ಬಹುಮುಖ ಪ್ರತಿಭೆಯಾಗಿದ್ದರು ಎಂದು ಬಣ್ಣಿಸಿದರು.

ಸಂತಾಪ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಸಭಾನಾಯಕ ಹಾಗೂ ಸಚಿವ ಎನ್‌.ಎಸ್‌‍.ಬೋಸರಾಜು, ಕೆ.ಎಚ್‌.ಶ್ರೀನಿವಾಸ್‌‍, ಸುಮಲತಾ ಅಸ್ನೋಟಿಕರ್‌, ಮನೋಹರ್‌ ತಹಸೀಲ್ದಾರ್‌ ಸೇರಿದಂತೆ ಅನೇಕರು ಈ ಸದನಕ್ಕೆ ತಮದೇ ಆದ ಕೊಡುಗೆ ನೀಡಿದ್ದರು.
ವಿಧಾನಸಭೆಯ ಮಾಜಿ ಉಪಸಭಾಧ್ಯಕ್ಷರಾಗಿದ್ದ ಮನೋಹರ್‌ ತಹಸೀಲ್ದಾರ್‌ 4 ಬಾರಿ ಶಾಸಕರಾಗಿ ಅಬಕಾರಿ ಮತ್ತು ಮುಜರಾಯಿ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು ಎಂದು ಸರಿಸಿದರು.

ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಗಲಿದ ಗಣ್ಯರ ಕೊಡುಗೆಯನ್ನು ಸರಿಸಿದರು. ಭಾರತೀಯ ಕೈಗಾರಿಕೋದ್ಯಮಿ ಟಾಟಾ ಸಮೂಹದ ಪ್ರೇರಕ ಶಕ್ತಿ ಮಹಾನ್‌ ಮಾನವತಾವಾದಿಯಾಗಿದ್ದ ರತನ್‌ ಟಾಟಾ ಕೋಟ್ಯಂತ ಜನರ ಪ್ರೇರಣಾ ಶಕ್ತಿಯಾಗಿದ್ದರು.

ಟಾಟಾ ಸ್ಟೀಲ್‌, ಟಾಟಾ ಮೋಟಾರ್‌ರ‍ಸ, ಟಾಟಾ ಕನ್ಸಲ್ಟೆಂನ್ಸಿ ಸರ್ವೀಸಸ್‌‍, ಟಾಟಾ ತಂತ್ರಜ್ಞಾನ, ಟಾಟಾ ಟೆಲಿ ಸರ್ವೀಸಸ್‌‍, ಟಾಟಾ ಫೈನಾನ್ಸ್ ಸೇರಿದಂತೆ ಹಲವು ಉದ್ಯಮಗಳನ್ನು ಕಟ್ಟಿ ಭಾರತೀಯರಿಗೆ ಮಾದರಿಯಾಗಿದ್ದಾರೆ. ಅವರ ಅಗಲಿಕೆ ರಾಷ್ಟ್ರಕ್ಕೆ ನುಂಗಲಾರದ ತುತ್ತು ಎಂದು ಕಂಬನಿ ಮಿಡಿದರು. ಸಂತಾಪ ನಿರ್ಣಯದ ಪರವಾಗಿ ಜೆಡಿಎಸ್‌‍ನ ಬೋಜೇಗೌಡ ಮಾತನಾಡಿದರು. ಮೃತರ ಗೌರವಾರ್ಥವಾಗಿ ಸದನದ ಸದಸ್ಯರೆಲ್ಲರೂ ಒಂದು ನಿಮಿಷ ಮೌನ ಆಚರಿಸಿದರು.

RELATED ARTICLES

Latest News