Thursday, August 7, 2025
Homeಇದೀಗ ಬಂದ ಸುದ್ದಿಕಾಂಗ್ರೆಸ್‌‍ನಿಂದಲೂ ಮತಗಳ್ಳತನ : ಸಿಎಂ-ಡಿಸಿಎಂಗೆ ಎನ್‌.ಆರ್‌.ರಮೇಶ್‌ ಪತ್ರ

ಕಾಂಗ್ರೆಸ್‌‍ನಿಂದಲೂ ಮತಗಳ್ಳತನ : ಸಿಎಂ-ಡಿಸಿಎಂಗೆ ಎನ್‌.ಆರ್‌.ರಮೇಶ್‌ ಪತ್ರ

Congress also involved in vote rigging: N.R. Ramesh

ಬೆಂಗಳೂರು, ಆ.4- ಮತಗಳ್ಳತನಕ್ಕೆ ಸಂಬಂಧಿಸಿದಂತೆ ರಾಹುಲ್‌ಗಾಂಧಿ ನಗರದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವ ಸಂದರ್ಭದಲ್ಲೇ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಕಾಂಗ್ರೆಸ್‌‍ ಮಾಡಿರುವ ಅಕ್ರಮ ಮತದಾರರ ಸೇರ್ಪಡೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

2013 ರಿಂದ 2018 ರ ಅವಧಿಯಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕೇವಲ ಬೆಂಗಳೂರು ಮಹಾನಗರದ ಭಾರತೀಯ ಜನತಾ ಪಾರ್ಟಿಯ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍(ಐ) ಪಕ್ಷದ ಮುಖಂಡರುಗಳು ಭಾರಿ ಅಕ್ರಮ ಮತದಾರರ ಸೇರ್ಪಡೆ ಕಾರ್ಯ ನಡೆಸಿರುವ ಸಂಬಂಧ ಮುಖ್ಯಮಂತ್ರಿಗಳಿಗೆ ಹಾಗೂ ಚುನಾವಣಾ ಆಯೋಗಕ್ಕೆ ದಾಖಲೆಗಳ ಸಹಿತ ದೂರುಗಳನ್ನು ಸಲ್ಲಿಸಲಾಗಿತ್ತು.

2013 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿ ವಾರ್ಡ್‌ ಮತ್ತು ಕುಮಾರಸ್ವಾಮಿ ಬಡಾವಣೆ ವಾರ್ಡ್‌ ಗಳ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ತಮಿಳುನಾಡಿನ ಡೆಂಕಣಿಕೋಟೆ ಪ್ರದೇಶದ ನಿವಾಸಿಗಳಾಗಿರುವ 9,000 ಕ್ಕೂ ಹೆಚ್ಚು ಅಲ್ಪಸಂಖ್ಯಾತರ ಹೆಸರುಗಳನ್ನು ಸೇರ್ಪಡೆ ಮಾಡಲು ತಯಾರಿ ನಡೆಸಿದ್ದು, ಈ ಸಂಬಂಧ ದಾಖಲೆಗಳ ಸಹಿತ ನಾನು ನೀಡಿದ ದೂರಿನನ್ವಯ 9,000 ಕ್ಕೂ ಹೆಚ್ಚು ಫಾರಂ- 6 ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತಲ್ಲದೇ, ಈ ಸಂಬಂಧ 14 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.

ಮಾರತ್ತಹಳ್ಳಿ ರಿಂಗ್‌ ರಸ್ತೆಯಲ್ಲಿರುವ ಕಾಡು ಬೀಸನಹಳ್ಳಿ, ದೇವರ ಬೀಸನಹಳ್ಳಿ, ಮುನ್ನೆಕೊಳಲು ಮತ್ತು ಕುಂದಲಹಳ್ಳಿ ಗೇಟ್‌ ಪ್ರದೇಶಗಳಲ್ಲಿ ಸುಮಾರು 10,500 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ನುಸುಳುಕೋರರ ಹೆಸರುಗಳನ್ನು ಕೆ. ಆರ್‌. ಪುರ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರ ಪಟ್ಟಿಗಳಲ್ಲಿ ಸೇರಿಸಲೆಂದು ಕಾಂಗ್ರೆಸ್‌‍(ಐ) ಪಕ್ಷದ ನಾಯಕರುಗಳು 10,500 ಕ್ಕೂ ಹೆಚ್ಚು ಫಾರಂ – 6 ಗಳನ್ನು ಮಹದೇವಪುರ ವಲಯದ ಕಂದಾಯ ಅಧಿಕಾರಿಯ ಕಛೇರಿಯಲ್ಲಿ ಎರಡು ಮೂಟೆಗಳಲ್ಲಿ ಸಂಗ್ರಹಿಸಿದ್ದ ಬಗ್ಗೆ ದಾಖಲೆಗಳ ಸಹಿತ ಚುನಾವಣಾ ಆಯೋಗಕ್ಕೆ ಮತ್ತು ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯನವರಿಗೆ ದೂರುಗಳನ್ನು ನೀಡಲಾಗಿತ್ತು.

ಈ ಸಂಬಂಧ ರಾಜ್ಯ ಚುನಾವಣಾ ಆಯೋಗವು ತನಿಖೆಗೆ ಆದೇಶಿಸಿತ್ತಲ್ಲದೆ, ಆ ಪೈಕಿ ಸುಮಾರು 4,000 ಅಕ್ರಮ ಬಾಂಗ್ಲಾ ನುಸುಳುಕೋರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿತ್ತು. 2023 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸುಮಾರು 4,500 ರಷ್ಟು ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯದವರನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದ್ದ ಬಗ್ಗೆ ದಾಖಲೆಗಳ ಸಹಿತ ಚುನಾವಣಾ ಆಯೋಗಕ್ಕೆ ದೂರನ್ನು ಸಲ್ಲಿಸಲಾಗಿತ್ತು.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ತಮಿಳುನಾಡು ರಾಜ್ಯದ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ನಿವಾಸಿಗಳಾಗಿದ್ದ 7,000 ಕ್ಕೂ ಹೆಚ್ಚು ಮಂದಿ ಅಲ್ಪಸಂಖ್ಯಾತ ಮತದಾರರನ್ನು ಸೇರ್ಪಡೆ ಮಾಡಿದ್ದರ ಬಗ್ಗೆ ದಾಖಲೆಗಳ ಸಹಿತ ದೂರುಗಳನ್ನು ನೀಡಲಾಗಿತ್ತು.ಈ ರೀತಿ ಚುನಾವಣೆಗಳನ್ನು ವಾಮ ಮಾರ್ಗದಲ್ಲಿಯಾದರೂ ಗೆಲ್ಲಲೇಬೇಕೆಂಬ ಏಕೈಕ ದುರುದ್ದೇಶದಿಂದ ಕಾಂಗ್ರೆಸ್‌‍ ಪಕ್ಷದ ಅಭ್ಯರ್ಥಿಗಳು ಬೇರೆ ರಾಜ್ಯಗಳ ಅಲ್ಪಸಂಖ್ಯಾತ ಮತದಾರರನ್ನು ಇಲ್ಲಿಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ಕಾನೂನು ಬಾಹಿರ ಕಾರ್ಯಗಳ ಬಗ್ಗೆ ದಾಖಲೆಗಳ ಸಹಿತ ಹಲವಾರು ದೂರುಗಳನ್ನು ನೀಡಲಾಗಿತ್ತು.

ಇದು ಕಾಂಗ್ರೆಸ್‌‍ ಪಕ್ಷ ಅಂದಿನಿಂದಲೂ ಅನುಸರಿಸಿಕೊಂಡು ಬರುತ್ತಿರುವ ರೀತಿಯಾಗಿದ್ದು, ಕಾಂಗ್ರೆಸ್‌‍ ಪಕ್ಷದಿಂದ ಹಿಂದೂ ಧರ್ಮೀಯ ಮತದಾರರು ಬಹುತೇಕ ದೂರ ಸರಿಯುತ್ತಿರುವ ಹಿನ್ನೆಲೆಯಲ್ಲಿ ದಾರಿ ಕಾಣದಂತಾಗಿರುವ ಕಾಂಗ್ರೆಸ್‌‍ ಪಕ್ಷದ ನಾಯಕರುಗಳು ಅವರ ಪಕ್ಷದ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿರುವ ಅಕ್ಕ ಪಕ್ಕ ರಾಜ್ಯಗಳ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಇಲ್ಲಿಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಂಡಿರುವುದು ಈಗಾಗಲೇ ದಾಖಲೆಗಳಿಂದ ರುಜುವಾತಾಗಿರುತ್ತದೆ.

ಆದ್ದರಿಂದ, ಚುನಾವಣಾ ಅಕ್ರಮಗಳಲ್ಲಿ ಮತ್ತು ಅಕ್ರಮ ಮತದಾರರ ಪಟ್ಟಿ ತಯಾರಿಕೆಯಲ್ಲಿ ಕುಖ್ಯಾತಿ ಪಡೆದಿರುವ ತಾವಾಗಲೀ ಅಥವಾ ಕಾಂಗ್ರೆಸ್‌‍ ಪಕ್ಷದ ನಾಯಕರುಗಳಾಗಲೀ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿ ಎತ್ತಲು ಹೊರಟಿರುವುದು ನಗೆಪಾಟಲಿಗೀಡಾಗುವ ಸಂಗತಿಯಾಗಿದೆ ಎಂಬ ವಿಷಯವನ್ನು ನೀವು ಮರೆಯಬಾರದು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

RELATED ARTICLES

Latest News