Friday, November 22, 2024
Homeರಾಜಕೀಯ | Politicsಭಾರೀ ಚರ್ಚೆಗೆ ಕಾರಣವಾಯ್ತು ರಾವಣನಿಗೆ ರಾಹುಲ್ ಗಾಂಧಿ ಹೋಲಿಕೆ

ಭಾರೀ ಚರ್ಚೆಗೆ ಕಾರಣವಾಯ್ತು ರಾವಣನಿಗೆ ರಾಹುಲ್ ಗಾಂಧಿ ಹೋಲಿಕೆ

ನವದೆಹಲಿ,ಅ.6- ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಕೆಸರೆರಚಾಟಗಳು ಜೋರಾಗುತ್ತಿದ್ದು, ಬಿಜೆಪಿ ತನ್ನ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ರಾಹುಲ್ ಗಾಂಧಿಯನ್ನು ರಾಮಾಯಣದ ಖಳನಾಯಕ ರಾವಣನಿಗೆ ಹೋಲಿಕೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿಯ ಅಧಿಕೃತ ಎಕ್ಸ್ ಮಾಧ್ಯಮದಲ್ಲಿ ಪ್ರಕಟಿಸಲಾಗಿರುವ ಪೋಸ್ಟರ್‍ನಲ್ಲಿ ರಾಹುಲ್‍ಗಾಂಧಿಯ ಮುಖಕ್ಕೆ ಹತ್ತು ತಲೆಗಳನ್ನು ಜೋಡಿಸಲಾಗಿದ್ದು, ಹೊಸ ತಲೆಮಾರಿನ ರಾವಣ, ಆತ ದುಷ್ಟ, ಧರ್ಮ ವಿರೋಧಿ, ರಾಮನ ವಿರೋಧಿ, ಆತನ ಗುರಿಯೇ ಭಾರತವನ್ನು ಧ್ವಂಸ ಮಾಡುವುದು ಎಂದು ಅಡಿಬರಹ ನೀಡಲಾಗಿದೆ. ಇದನ್ನು ಖಂಡಿಸಿ ಬಿಜೆಪಿಯೇತರ ರಾಜಕೀಯ ನಾಯಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಏಕಕಾಲದಲ್ಲಿ ಈ ಹಿಂದೆ ಮಹಾತ್ಮಗಾಂಧಿಜಿಯವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಜವಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಾಬಾಯಿ ಪಟೇಲ್, ಮೌಲಾನ ಆಜಾದ್ ಸೇರಿದಂತೆ 10 ಮಂದಿ ಮಹಾತ್ಮರ ತಲೆಗಳನ್ನು ಅಂಟಿಸಿ, ಅದಕ್ಕೆ ಆರ್‍ಎಸ್‍ಎಸ್ ನ ಸಾವರ್ಕರ್ ಹಾಗೂ ಇತರ ಪ್ರಮುಖರು, ಅಖಂಡ ಭಾರತ ಎಂಬ ಸೂಚ್ಯದ ಬಾಣ ಹೊಡೆಯುವಂತಹ ವ್ಯಂಗ್ಯ ಚಿತ್ರ ರಚನೆಯಾಗಿತ್ತು. ಈಗ ಅದು ವ್ಯಾಪಕ ವೈರಲ್ ಆಗುತ್ತಿದೆ.

ವಿವೇಕ್ ರಾಮಸ್ವಾಮಿಗೆ ಮಧ್ಯದ ಬೆರಳು ತೋರಿಸಿದ ಪ್ರತಿಭಟನಾಕಾರರು

ಜೊತೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ನರೇಂದ್ರ ಮೋದಿಯವರನ್ನು ರಾವಣನಿಗೆ ಹೋಲಿಸಿ ಹತ್ತು ತಲೆಗಳನ್ನು ಜೋಡಿಸಿರುವ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆರೋಪ, ಪ್ರತ್ಯಾರೋಪ, ಕೆಸರೆರಚಾಟಗಳು ವ್ಯಾಪಕವಾಗಿದೆ.

ಈ ಮೊದಲಿನ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿತ ಸಂಘಟನೆಗಳು ರಾಹುಲ್‍ಗಾಂಧಿಯವರನ್ನು ಪಪ್ಪು ಎಂದು ಬಿಂಬಿಸಿದ್ದವು. ಆದರೆ ಇತ್ತೀಚೆಗೆ ರಾಹುಲ್‍ಗಾಂಯವರ ನಡೆಗಳು, ಅಂತಾರಾಷ್ಟ್ರೀಯ ಗಡಿ ವಿವಾದ ಮತ್ತು ಕರೋನ ಸಂದರ್ಭದಲ್ಲಿನ ಅವರ ಹೇಳಿಕೆಗಳು, ಭಾರತ ಜೋಡೊ ಯಾತ್ರೆಗಳು ರಾಹುಲ್‍ಗಾಂಧಿಯವರ ವಾಸ್ತವ ಪ್ರಬುದ್ಧತೆಯನ್ನು ಅನಾವರಣಗೊಳಿಸಿವೆ ಎಂದು ಕಾಂಗ್ರೆಸ್ ನಾಯಕರು ವಿಶ್ಲೇಷಿಸಿದ್ದಾರೆ.

2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಈವರೆಗೂ ಪಪ್ಪು ಎಂದು ಬಿಂಬಿಸಿದ ರಾಹುಲ್‍ಗಾಂಧಿಯವರನ್ನು, ಹೊಸದಾಗಿ ರಾವಣ, ದುಷ್ಟ ಎಂದು ನಂಬಿಸುವ ಸಂಚನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್‍ನ ಸಂಸದ ಮಾಣಿಕಂ ಠಾಕೂರ್ ಟೀಕಿಸಿದ್ದಾರೆ.

ಇಂಡಿಯಾ ಘಟಬಂಧನ್‍ನ ಸಹಪಾಠಿಯಾಗಿರುವ ಶಿವಸೇನೆ ಉದ್ಧವ್‍ಠಾಕ್ರೆ ಬಣದ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಪೋಸ್ಟರ್‍ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯವರು ಜನಮನ್ನಣೆ ಕಳೆದುಕೊಂಡಿದ್ದಾರೆ. ಹೀಗಾಗಿ 2024 ರಲ್ಲಿ ಸೋಲುವ ಭಯ ಕಾಡುತ್ತಿದೆ. ರಾವಣ ಪೋಸ್ಟರ್ ಬಿಜೆಪಿಯವರಿಗೆ ರಾಹುಲ್ ಗಾಂಧಿ ಕುರಿತಾದ ಭಯದ ಸಂಕೇತ ಎಂದು ಹೇಳಿದ್ದಾರೆ.

ತಮಿಳುನಾಡಿನ ಕಾಂಗ್ರೆಸ್ ರಾಹುಲ್ ಗಾಂಧಿ ಭಾರತ್ ಜೋಡೊ ಸಂದರ್ಭದಲ್ಲಿ ಟ್ರೋಲರ್‍ಗಳ ಕುರಿತು ನೀಡಿದ್ದ ಹೇಳಿಕೆಯನ್ನು ಪೋಸ್ಟ್ ಮಾಡಿದೆ. ಟ್ರೋಲರ್‍ಗಳು ಹೆಚ್ಚು ಶ್ರಮ ಹಾಕಬೇಕು, ಬುದ್ಧಿವಂತರಾಗಬೇಕು, ಸ್ಮಾರ್ಟ್ ಆಗಿ ಎಡಿಟಿಂಗ್ ಮಾಡುವುದನ್ನು ಕಲಿಯಬೇಕು. ಏಕೆಂದರೆ ಅದು ನನಗೆ ಅನುಕೂಲವಾಗಲಿದೆ ಎಂದು ಆ ವೇಳೆ ರಾಹುಲ್‍ಗಾಂಧಿ ಹೇಳಿದ್ದರು. ಪ್ರಸ್ತುತ ಅದು ಈ ಸಂದರ್ಭದಲ್ಲಿ ನೆಟ್ಟಿಗರಿಗೆ ಅಸ್ತ್ರವಾಗಿ ಬಳಕೆಯಾಗುತ್ತಿದೆ.

ಕಾಂಗ್ರೆಸ್‍ನ ನಾಯಕ ಬಿಹಾರದ ಅಂಕುರ್‍ಸಿಂಗ್ ಅವರು, ಪ್ರಿಯಾಂಕ ಗಾಂಧಿ ವಾದ್ರ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಲವು ಗ್ರಾಮೀಣ ಭಾಗದ ಮಕ್ಕಳು ಪ್ರಿಯಾಂಕ ಅವರನ್ನು ಭೇಟಿ ಮಾಡಿದ ವೇಳೆ ರಾಹುಲ್‍ಗಾಂಧಿಯವರಿಗೆ ಜೈಕಾರ ಕೂಗುವ ಜೊತೆಗೆ ಪ್ರಧಾನಿಯವರಿಗೆ ಧಿಕ್ಕಾರ ಕೂಗಿದ್ದಾರೆ.

ವಿಮಾನ ಸಿಬ್ಬಂದಿಗಳನ್ನು ನಿಂದಿಸಿದವನ ವಿರುದ್ಧ ಎಫ್ಐಆರ್

ಆದರೆ ಪ್ರಿಯಾಂಕ ಮಕ್ಕಳಿಗೆ ಆ ರೀತಿ ಮಾಡಬಾರದು. ಒಳ್ಳೆಯದನ್ನು ಕಲಿಯಬೇಕು. ಮತ್ತೊಬ್ಬರನ್ನು ಟೀಕಿಸಬಾರದು ಎಂದು ತಿಳಿ ಹೇಳಿರುವುದು ವೈರಲ್ ಆಗುತ್ತಿದೆ. ಕಾಂಗ್ರೆಸ್‍ನವರಿಗಿರುವ ಸಂಸ್ಕøತಿ, ಬಿಜೆಪಿಯವರಿಗೆ ಇಲ್ಲ ಎಂಬ ಅಭಿಪ್ರಾಯವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

ಅಸ್ಸಾಂನ ಕಾಂಗ್ರೆಸ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಆಕ್ಷೇಪಾರ್ಹ ಪೋಸ್ಟರ್ ಹಂಚಿಕೊಂಡಿದೆ. ರಾಜ್ಯಸರ್ಕಾರದ ಸಚಿವ ದಿನೇಶ್‍ಗುಂಡೂರಾವ್ ಬಿಜೆಪಿಯ ಪೋಸ್ಟರ್ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್‍ಗಾಂಧಿಯವರನ್ನು ರಾವಣನಂತೆ ಬಿಂಬಿಸಿರುವ ಪೋಸ್ಟರ್ ಬಿಡುಗಡೆ ಮಾಡಿರುವ ಬಿಜೆಪಿ ತನ್ನ ಮಾನಸಿಕ ವಿಕಾರತೆಯನ್ನು ಕಾರಿಕೊಂಡಿದೆ.

ಹೈಸ್ಪೀಡ್ ರೈಲು ಸಂಚರಿಸುವ ಸುರಂಗ ಮಾರ್ಗ ಪೂರ್ಣ

ಗೋಡ್ಸೆ ಆರಾಧಕರಾದ ಬಿಜೆಪಿಯವರಿಂದ ಇಂತಹ ವಿಕೃತಿಗಳನ್ನಲ್ಲದೆ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಕೀಚಕ ಮಾರೀಚನಂತಹ ಸಂತತಿಯೇ ತುಂಬಿಕೊಂಡಿರುವ ಬಿಜೆಪಿಯಿಂದ ರಾಹುಲ್‍ಗಾಂಧಿಯವರನ್ನು ರಾವಣನಿಗೆ ಹೋಲಿಸಿರುವುದು ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿ ಸೃಷ್ಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಧ್ವನಿ ಮಾದರಿಯ ಕೆಲವು ಯುಗಳ ಗೀತೆಗಳು ವೈರಲ್ ಆಗಿದ್ದವು. ಈಗ ಅದೇ ತಂತ್ರಜ್ಞಾನದಲ್ಲಿ ರೂಪಿಸಲಾದ ರಾವಣ ಪೋಸ್ಟರ್ ಭಾರೀ ವೈರಲ್ ಆಗಿದೆ.

RELATED ARTICLES

Latest News