Saturday, January 25, 2025
Homeರಾಜಕೀಯ | Politicsರೆಡ್ಡಿಗೆ ಕಾಂಗ್ರೆಸ್ ಮುಚ್ಚಿದ ಬಾಗಿಲು : ಸಚಿವ ಎಂ.ಬಿ.ಪಾಟೀಲ್

ರೆಡ್ಡಿಗೆ ಕಾಂಗ್ರೆಸ್ ಮುಚ್ಚಿದ ಬಾಗಿಲು : ಸಚಿವ ಎಂ.ಬಿ.ಪಾಟೀಲ್

Congress closes door to Reddy: Minister M.B. Patil

ಬೆಂಗಳೂರು,ಜ.24- ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್ ಸೇರಲು ಸಿದ್ಧರಾಗಿರಬಹುದು. ಇದಕ್ಕಾಗಿ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಅವರನ್ನು ಕಾಂಗ್ರೆಸ್ಗೆ ಕರೆತರುವ ವಿಚಾರವಾಗಿ ತಮಗೆ ಮಾಹಿತಿ ಇಲ್ಲ. ನಮ ಪಕ್ಷದಲ್ಲಿ ಸತೀಶ್ ಜಾರಕಿಹೊಳಿ ಹಿರಿಯ ನಾಯಕರು. ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಶ್ರೀರಾಮುಲು ಕಾಂಗ್ರೆಸ್ ಸೇರುವುದು, ಬಿಡುವುದು ಅವರಿಗೆ ಸೇರಿದ ವಿಚಾರ. ಈ ಬಗ್ಗೆ ನಮ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವುದು. ರಾಜ್ಯಮಟ್ಟದಲ್ಲಿ ಇಂಥ ಚರ್ಚೆಗಳು ನಡೆಯುವುದಿಲ್ಲ. ಆದರೆ ಜನಾರ್ದನ ರೆಡ್ಡಿ ತಮ ಪಕ್ಷದ ಒಳ ಜಗಳಕ್ಕಾಗಿ ಅನಗತ್ಯವಾಗಿ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಎಳೆದು ತಂದಿದ್ದಾರೆ ಎಂದು ಆಕ್ಷೇಪಿಸಿದರು.

ಜನಾರ್ಧನ ರೆಡ್ಡಿ ಅವರದು ರಾಜಕೀಯ ಪ್ರೇರಿತ ಹೇಳಿಕೆ. ಬಹುಶಃ ಅವರೇ ಕಾಂಗ್ರೆಸ್ ಸೇರುತ್ತಿರಬಹುದು. ಈ ಹಿಂದೆ ಅವರು ಕಾಂಗ್ರೆಸ್ ಪರವಾಗಿ ಮತ ಹಾಕಿರಬಹುದು. ನಮಗೆ ಮಾಹಿತಿ ಇಲ್ಲ. ಆದರೆ ಕಾಂಗ್ರೆಸ್ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹೋರಾಟ ನಡೆಸಿತ್ತು. ಹೀಗಾಗಿ ಅವರು ಕಾಂಗ್ರೆಸ್ಗೆ ಬಂದರೂ ಸೇರಿಸಿಕೊಳ್ಳುವುದಿಲ್ಲ ಎಂದರು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಜಾಸ್ತಿಯಾಗುತ್ತಿವೆ. ಈ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಬಲವಾದ ಕಾನೂನು ತಂದು ಕಠಿಣ ಹೆಜ್ಜೆ ಇಡಬೇಕಾಗುತ್ತದೆ ಎಂದರು.

ಕರ್ನಾಟಕ ಸರ್ಕಾರದಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ. ಈ ಕಾರಣಕ್ಕೆ ದಾವೋಸ್ನಲ್ಲಿ ನಡೆಯುತ್ತಿರುವ ಶೃಂಗಸಭೆಗೆ ತಾವು ಹೋಗುತ್ತಿಲ್ಲ. ಅಲ್ಲೊಮೆ ಇಲ್ಲೊಮೆ ಎರಡೆರಡು ಬಾರಿ ಹೂಡಿಕೆ ಒಪ್ಪಂದ ಮಾಡಿಕೊಳ್ಳುವುದು ಬೇಡ ಎಂಬ ಕಾರಣಕ್ಕಾಗಿಯೇ ಸಭೆಯಿಂದ ದೂರ ಉಳಿಯುತ್ತಿರುವುದಾಗಿ ಹೇಳಿದರು.

ಫೆ.11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಕಂಪನಿಗಳು ಭಾಗಿಯಾಗುತ್ತಿದ್ದು, ಸುಮಾರು 8ರಿಂದ 10 ಲಕ್ಷ ಕೋಟಿ ಹೂಡಿಕೆಯ ನಿರೀಕ್ಷೆಯಿದೆ. ಒಡಂಬಡಿಕೆಗೆ ಸಹಿ ಹಾಕಿದ ಮೇಲೆ ಕನಿಷ್ಠ ಶೇ.80ರಷ್ಟಾದರೂ ಬಂಡವಾಳ ಬರಬೇಕು. ಇಲ್ಲದಿದ್ದರೆ ಮಾಡಿದ್ದೆಲ್ಲ ವ್ಯರ್ಥವಾಗುತ್ತದೆ ಎಂದರು.

ಈ ಹಿಂದೆ 2022ರಲ್ಲಿ ಬಿಜೆಪಿ ಸರ್ಕಾರ ಹೂಡಿಕೆದಾರರ ಸಮಾವೇಶ ಮಾಡಿ 50 ಲಕ್ಷ ಕೋಟಿ ರೂ. ಹರಿದುಬರಲಿದೆ ಎಂದಿತ್ತು. ಅದರಲ್ಲೂ ಹಸಿರು ಇಂಧನ ವಲಯಕ್ಕೆ 2.40 ಲಕ್ಷ ಕೋಟಿ ಹೂಡಿಕೆಯಾಗಲಿದೆ ಎಂಬ ಚರ್ಚೆಗಳಿದ್ದವು. ವಾಸ್ತವವಾಗಿ ಒಂದು ರೂಪಾಯಿ ಕೂಡ ಬಂದಿಲ್ಲ ಎಂದು ಪಾಟೀಲ್ ಹೇಳಿದರು.

RELATED ARTICLES

Latest News