Saturday, August 9, 2025
Homeರಾಜ್ಯಕ್ವಿಟ್‌ ಇಂಡಿಯಾ ಚಳವಳಿಯ ಹುತಾತ್ಮರನ್ನು ಸ್ಮರಿಸಿದ ಕಾಂಗ್ರೆಸ್‌‍

ಕ್ವಿಟ್‌ ಇಂಡಿಯಾ ಚಳವಳಿಯ ಹುತಾತ್ಮರನ್ನು ಸ್ಮರಿಸಿದ ಕಾಂಗ್ರೆಸ್‌‍

Congress commemorates martyrs of Quit India Movement

ನವದೆಹಲಿ,ಆ.9– ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಜನರಿಗೆ ಕಾಂಗ್ರೆಸ್‌‍ ಶ್ರದ್ಧಾಂಜಲಿ ಸಲ್ಲಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ತಮ ಪ್ರಾಣವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಸರಿಸಿದೆ.

ಕ್ವಿಟ್‌ ಇಂಡಿಯಾ ಚಳುವಳಿಯ 83 ನೇ ವಾರ್ಷಿಕೋತ್ಸವದಂದು, ಆ ಸಮಯದಲ್ಲಿ ಕಾಂಗ್ರೆಸ್‌‍ ನಾಯಕರನ್ನು ಜೈಲುಗಳಲ್ಲಿ ಕೊಳೆಯುತ್ತಿದ್ದರೆ, ಆರ್‌ಎಸ್‌‍ಎಸ್‌‍ ಚಳುವಳಿಯನ್ನು ವಿರೋಧಿಸಿತು ಎಂದು ಕಾಂಗ್ರೆಸ್‌‍ ಆರೋಪಿಸಿದೆ.

1942ರಲ್ಲಿ ರಾಷ್ಟ್ರಪಿತ ಮಹಾತ ಗಾಂಧೀಜಿಯವರ ಮಾಡು ಇಲ್ಲವೇ ಮಡಿ ಎಂಬ ಅಮೂಲ್ಯ ಮಂತ್ರದೊಂದಿಗೆ ಬ್ರಿಟಿಷರ ಆಡಳಿತದ ವಿರುದ್ಧ ಕ್ವಿಟ್‌ ಇಂಡಿಯಾ ಚಳವಳಿ ಆರಂಭಿಸಿದ್ದು, ಇದು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಉತ್ಸಾಹ ನೀಡಿತು ಎಂದು ಕಾಂಗ್ರೆಸ್‌‍ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌‍ನ ನಾಯಕತ್ವದಲ್ಲಿ ಅಸಂಖ್ಯಾತ ಭಾರತೀಯರು ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಬೀದಿಗಿಳಿದಿದ್ದರು. ಈ ಅವಿಸರಣೀಯ ಇತಿಹಾಸದ ಕಥೆಯನ್ನು ಬರೆದಿದ್ದಾರೆ. ಆಗಸ್ಟ್‌ ಕ್ರಾಂತಿ ದಿವಸ್‌‍ ದಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌‍ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಮಾತನಾಡಿ, ಆಗಸ್ಟ್‌ 8, 1942 ರಂದು ತಡರಾತ್ರಿ ಅಖಿಲ ಭಾರತ ಕಾಂಗ್ರೆಸ್‌‍ ಸಮಿತಿಯು ಐತಿಹಾಸಿಕ ಕ್ವಿಟ್‌ ಇಂಡಿಯಾ ನಿರ್ಣಯವನ್ನು ಅಂಗೀಕರಿಸಿತು. ಇದಾದ ನಂತರ ಮಹಾತ ಗಾಂಧಿಯವರು ತಮ್ಮ ಅಪ್ರತಿಮ- ಮಾಡು ಇಲ್ಲವೇ ಮಡಿ ಭಾಷಣವನ್ನು ಕ್ವಿಟ್‌ ಇಂಡಿಯಾ ಚಳುವಳಿಯ ಪ್ರಾರಂಭವನ್ನು ಘೋಷಿಸಿದರು.

ಆಗಸ್ಟ್‌ 9, 1942 ರ ಮುಂಜಾನೆ, ಕಾಂಗ್ರೆಸ್‌‍ನ ಉನ್ನತ ನಾಯಕರನ್ನು ಜೈಲಿಗೆ ಹಾಕಲಾಯಿತು. ಗಾಂಧೀಜಿಯವರನ್ನು ಮೇ 6, 1944 ರವರೆಗೆ ಪುಣೆಯ ಆಗಾಖಾನ್‌ ಸೆರೆಮನೆಯಲ್ಲಿ ಇರಿಸಲಾಯಿತು. ನೆಹರು, ಪಟೇಲ್‌‍, ಆಜಾದ್‌, ಪಂತ್‌ ಮತ್ತು ಇತರರನ್ನು ಅಹದ್‌ನಗರ ಕೋಟೆ ಜೈಲಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮಾರ್ಚ್‌ 28, 1945 ರವರೆಗೆ ಇದ್ದರು ಎಂದು ರಮೇಶ್‌ ಹೇಳಿದರು. ನೆಹರೂ ಅವರಿಗೆ ಇದು ಒಂಬತ್ತನೇ ಸೆರೆವಾಸ ಎಂದು ಅವರು ಹೇಳಿದರು ಮತ್ತು 1921 ಮತ್ತು 1945 ರ ನಡುವೆ ಅವರು ಒಟ್ಟು ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿ ಕಳೆದರು. ಅಹದ್‌ನಗರದ ಜೈಲಿನಲ್ಲಿಯೇ ಅವರು ತಮ ದಿ ಡಿಸ್ಕವರಿ ಆಫ್‌ ಇಂಡಿಯಾವನ್ನು ಬರೆದರು ಎಂದು ಸರಿಸಿದ್ದಾರೆ.

ಇಡೀ ಕಾಂಗ್ರೆಸ್‌‍ ನಾಯಕರು ಜೈಲಿನಲ್ಲಿ ಕೊಳೆಯುತ್ತಿರುವಾಗ ಮತ್ತು ಇಡೀ ರಾಷ್ಟ್ರವನ್ನು ಕಲಕುತ್ತಿರುವಾಗ, ಆರ್‌ಎಸ್‌‍ಎಸ್‌‍ ಸಹೋದರತ್ವವು ಕ್ವಿಟ್‌ ಇಂಡಿಯಾ ಚಳುವಳಿಯನ್ನು ಸಕ್ರಿಯವಾಗಿ ವಿರೋಧಿಸಿತು. ಏಳು ವರ್ಷಗಳ ನಂತರ ಅದು ಭಾರತದ ಸಂವಿಧಾನವನ್ನು ವಿರೋಧಿಸಲು ಅವಕಾಶವಾಯಿತು ಎಂದು ರಮೇಶ್‌ ಆರೋಪಿಸಿದರು.

RELATED ARTICLES

Latest News