Sunday, September 8, 2024
Homeಜಿಲ್ಲಾ ಸುದ್ದಿಗಳು | District Newsಗೃಹಸಚಿವರ ಹೆಸರು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿದ್ದ ಝಬೇರ್‌ನನ್ನ ಉಚ್ಚಾಟಿಸಿದ ಕಾಂಗ್ರೆಸ್‌‍

ಗೃಹಸಚಿವರ ಹೆಸರು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿದ್ದ ಝಬೇರ್‌ನನ್ನ ಉಚ್ಚಾಟಿಸಿದ ಕಾಂಗ್ರೆಸ್‌‍

ಕೊರಟಗೆರೆ, ಮೇ 18- ಗೃಹ ಸಚಿವ ಡಾ.ಜಿ. ಪರಮೇಶ್ವರ ಹೆಸರನ್ನು ದುರ್ಬಳಿಕೆ ಮಾಡಿಕೊಂಡು ಅಮಾಯಕರಿಗೆ ವಂಚನೆ ಮಾಡಿರುವ ಮಹಮದ್‌ ಝಬೇರ್‌ ರನ್ನು ಸಚಿವರ ಆದೇಶದಂತೆ ಕಾಂಗ್ರೆಸ್‌‍ ಪಕ್ಷದಿಂದ ಉಚ್ಚಾಟಿಸಿ ಪದವಿಯನ್ನು ವಜಾಗೊಳಿಸಲಾಗಿದೆ ಎಂದು ನಗರ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್‌ ತಿಳಿಸಿದರು.

ಪಟ್ಟಣದ ರಾಜೀವ್‌ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರಟಗೆರೆ ಪಟ್ಟಣದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮದ್‌ ಝಬೇರ್‌ ಬೆಂಗಳೂರು ಸೇರಿದಂತೆ ಹಲವು ಕಡೆ ಗೃಹ ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಅವರ ಜೊತೆಯಲ್ಲಿ ಹಿಂದೆ ಅವರು ಶಾಸಕರಾಗಿದ್ದ ಕಾಲದಲ್ಲಿ ತೆಗೆಸಿಕೊಂಡಿದ್ದ ಪೋಟೋವನ್ನು ತೋರಿಸಿ ವಂಚಿಸಿರುವುದಾಗಿ ತಿಳಿದುಬಂದಿದೆ.

ಇಂತಹ ವಂಚಕರನ್ನು ಗೃಹ ಸಚಿವರು ಎಂದೂ ಕ್ಷಮಿಸುವುದಿಲ್ಲಾ. ಆರೋಪಿ ಝಬೇರ್‌ ರಾಜ್ಯಪಾಲರ ಲೆಟರ್‌, ಅಧಿಕಾರಿಗಳ ಸಹಿ ಮತ್ತು ಹೆಸರುಗಳನ್ನು ಸಹ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದ್ದು ಆದ್ದರಿಂದ ಈ ಕೂಡಲೆ ಅವನನ್ನು ಪಕ್ಷದಿಂದ ವಜಾಗೊಳಿಸಿ ಉಚ್ಚಾಟಿಸಲಾಗಿದೆ ಎಂದರು.

ತಾಲೂಕು ಅಲ್ಪಸಂಖ್ಯಾತ ಮುಖಂಡ ಮಹಮದ್‌ ಮಕ್ತಿಯಾರ್‌ ಮಾತನಾಡಿ ಝಬೇರ್‌ನ ಮಾಡಿರುವ ವಂಚನೆ ಅಪರಾಧಗಳನ್ನು ನಮ್ಮ ಧರ್ಮದವರು ಸೇರಿದಂತೆ ಪಕ್ಷದವರು ಸಹಿಸುವುದಿಲ್ಲ ಎಂದರು. ಮಹಿಳಾ ಘಟಕದ ಅಧ್ಯಕ್ಷೆ ಜಯಮ ಮತ್ತು ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌‍ ಆಧ್ಯಕ್ಷ ಅರಕೆರೆ ಶಂಕರ್‌ ಮಾತನಾಡಿದರು.

ಗೋಷ್ಠಿಯಲ್ಲಿ ಪ.ಪಂ.ಸದಸ್ಯರಾದ ಎ.ಡಿ. ಬಲರಾಮಯ್ಯ, ಕೆ.ಆರ್‌.ಓಬಳರಾಜು, ನಾಗರಾಜು, ನಂದೀಶ್‌, ಪಕ್ಷದ ಮುಖಂಡರಾದ ಮಹಾಲಿಂಗಪ್ಪ, ಗಣೇಶ್‌, ನಾಜೀರ್‌ ಅಹಮದ್‌, ಕವಿತಾ, ಲಕ್ಷೀದೇವಮ, ಸುಮಾ, ನಾಸೀರ್‌, ಇಸಾಯಿಲ್‌, ಇರ್ಷಾದ್‌, ಜಮೀರ್‌, ಮುರಳಿ, ಯುವಕಾಂಗ್ರೆಸ್‌‍ನ ವಿನಯ್‌ಕುಮಾರ್‌, ಅರವಿಂದ್‌, ದೀಪಕ್‌, ರಘುವೀರ್‌, ಎರ್‌ಟೆಲ್‌ ಗೋಪಿ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES

Latest News