ಕೊಚ್ಚಿ,ಆ.20- ಇಲ್ಲಿನ ಎಲ್ಲೂರಿನಲ್ಲಿರುವ ಸಿಪಿಐ(ಎಂ) ಶಾಖೆ ಸಮಿತಿಯು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜದ ಬದಲು ಕಾಂಗ್ರೆಸ್ ಪಕ್ಷದ ಧ್ವಜ ಹಾರಿಸಿದೆ. ಎಡ ಪಕ್ಷದ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ನಾಯಕರೊಬ್ಬರು ತಪ್ಪಾಗಿ ಕಾಂಗ್ರೆಸ್ ಧ್ವಜವನ್ನು ಹಾರಿಸಿ ಅಪಮಾನಿಸಿದ್ದಾರೆ.
ಹಲವಾರು ಸ್ಥಳೀಯ ನಾಯಕರು ಮತ್ತು ಸದಸ್ಯರ ಮಧ್ಯ ಇದು ನಡೆದಿದ್ದು ಭಾರಿ ಮುಜುಗರಕ್ಕೀಡು ಮಾಡಿದೆ.ಕಾಂಗ್ರೆಸ್ ಪಕ್ಷದ ಧ್ವಜವನ್ನು ಕೇವಲ 10 ನಿಮಿಷಗಳ ಕಾಲ ಹಾರಿಸಲಾಗಿತ್ತು ನಂತರ ಅದನ್ನು ತಕ್ಷಣವೇ ತೆಗೆದುಹಾಕಲಾಯಿತು ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ಘಟನೆಯ ಫೋಟೋಗಳು ಮತ್ತು ವೀಡಿಯೊಗ ಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.ತಪ್ಪಾಗಿದೆ ಇದಕ್ಕೆ ಕಾರಣರಾದವರ ವಯಸು ಮತ್ತು ಸಂದರ್ಭಗಳನ್ನು ಪರಿಗಣಿಸಿ, ಪಕ್ಷವು ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ಸಿಪಿಐ(ಎಂ) ಜಿಲ್ಲಾ ಹಿರಿಯ ನಾಯಕರೊಬ್ಬರು ಹೇಳಿದರು.