ಬೆಂಗಳೂರು, ಮೇ20– ಹೊಸಪೇಟೆಯ ಕಾಂಗ್ರೆಸ್ ಸರ್ಕಾರದ ಸಮಾವೇಶವು ಮಳೆ ನೀರಿನಲ್ಲಿ ತೇಲುತ್ತಿದೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ. ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇತ್ತ ಬೆಂಗಳೂರು ನೀರಿನಲ್ಲಿ ಮುಳುಗಿದ್ದರೆ ಅತ್ತ ಬಳ್ಳಾರಿಯ ಕಾಂಗ್ರೆಸ್ ಸಮಾವೇಶವು ಮಳೆ ನೀರಿನಲ್ಲಿ ತೇಲುತ್ತಿದೆ ಎಂದು ಆರೋಪಿಸಿದೆ. ಹೊರಗೆ ತಳಕು, ಒಳಗೆ ಹುಳುಕು ಎಂಬ ಹ್ಯಾಶ್ ಟ್ಯಾಗ್ ಮಾಡಿರುವ ಜೆಡಿಎಸ್, ಅಭಿವೃದ್ದಿಯನ್ನೇ ಮರೆತಿರುವ ಕಾಂಗ್ರೆಸ್ ಸರ್ಕಾರದ ನಿಜ ಬಣ್ಣ ಬಯಲಾಗಿದೆ ಎಂದು ಟೀಕಿಸಿದೆ.