ಬೆಂಗಳೂರು, ಜೂ.4- ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದರೂ ಆಡಳಿತಾರೂಢ ಕಾಂಗ್ರೆಸ್ ಮತಗಳಿಕೆಯಲ್ಲಿ ಮುಂದಿದೆ. ಬಿಜೆಪಿಗಿಂತಲೂ ಸರಿಸುಮಾರು ಶೇ.0.50 ರಷ್ಟು ಕಾಂಗ್ರೆಸ್ ಹೆಚ್ಚು ಮತ ಗಳಿಸಿದೆ. ಆದರೆ ಮತ ಕ್ರೋಡೀಕರಣದಲ್ಲಿ ವಿಫಲವಾಗಿದ್ದು, ಗೆಲುವಿನಲ್ಲಿ ಮುಗ್ಗರಿಸಿದೆ.
ಪ್ರಕಟಿತ ಫಲಿತಾಂಶಗಳ ಪ್ರಕಾರ, ಬಿಜೆಪಿ ಶೇ.45.01 ರಷ್ಟು ಮತ ಗಳಿಸಿತ್ತು. ಕಾಂಗ್ರೆಸ್ ಶೇ.45.45 ರಷ್ಟು ಮತ ಗಳಿಸಿದೆ. ಜೆಡಿಎಸ್ ಶೇ.6.67 ರಷ್ಟು ಮತ ಪಡೆದಿದೆ.ರಾಷ್ಟ್ರಮಟ್ಟದಲ್ಲಿ ಬಿಜೆಪಿ ಶೇ.38.40 ರಷ್ಟು ಮತ ಪಡೆದು ಎಲ್ಲಾ ಪಕ್ಷಗಳಿಗಿಂತಲೂ ಸಿಂಹಪಾಲು ಹೊಂದಿದೆ. ಕಾಂಗ್ರೆಸ್ ಶೇ.24.11 ರಷ್ಟು ಮತ ಪಡೆದು ಎರಡನೇ ಸ್ಥಾನದಲ್ಲಿದೆ.
ಅತೀ ಹೆಚ್ಚು ಮತ ಪಡೆದ ಮೂರನೇ ಪಕ್ಷದ ಸ್ಥಾನದಲ್ಲಿ ಸಮಾಜವಾದಿ ಪಕ್ಷವಿದ್ದು, ಶೇ.4.05 ರಷ್ಟು ಮತ ಗಳಿಸಿದೆ.ಟಿಡಿಪಿ, ವೈಎಸ್‌ಆರ್, ಇಐಟಿಸಿ, ಸಿಪಿಐಎಂ, ಡಿಎಂಕೆ ಪಕ್ಷಗಳೂ ಗಮನಾರ್ಹ ಮತಗಳಿಕೆ ಮಾಡಿವೆ.