ಬೆಂಗಳೂರು,ಸೆ.7- ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ಇಡುವ ಬಾಂಬ್‌ಗಳು ಕಾಂಗ್ರೆಸ್ ಪಕ್ಷದೊಳಗೆ ಸಿಡಿಯುತ್ತವೆಯೇ ಹೊರತು ಹೊರಗೆ ಸ್ಫೋಟವಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ಗಾಂಧಿಯೇ ಸ್ವತಃ ಒಬ್ಬ ದೊಡ್ಡ ಹೈಡ್ರೋಜನ್ ಬಾಂಬ್. ಅವರು ಯಾರಿಗೆ ಬಾಂಬ್ ಇಡುತ್ತಾರೋ, ಅವು ಎಲ್ಲಿ ಸಿಡಿಯುತ್ತವೆಯೋ, ಸ್ವತಃ ದೇವರಿಗೂ ಗೊತ್ತಾಗುವುದಿಲ್ಲ ಎಂದು ಕುಹಕವಾಡಿದರು. ವಾಸ್ತವವಾಗಿ ರಾಹುಲ್‌ಗಾಂಧಿ ಭಾರತದ ರಾಜಕೀಯದಲ್ಲಿ ದೊಡ್ಡ ಹೈಡ್ರೋಜನ್ ಬಾಂಬ್. ಅವರ ಪ್ರತಿಯೊಂದು ಬಾಂಬ್‌ಗಳು ಕಾಂಗ್ರೆಸ್ ಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.
ಹೈಡ್ರೋಜನ್ ಬಾಂಬ್ ಮತ್ಯಾವ ಮುಜುಗರ ಸೃಷ್ಟಿಸಲಿದೆಯೋ? ಎಂದು ಪ್ರಶ್ನಿಸಿದರು. ಪ್ರತಿಯೊಂದು ವಿಷಯದಲ್ಲೂ ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವುದೇ ರಾಹುಲ್‌ಗಾಂಧಿಯ ಅಜೆಂಡಾ. ತರ್ಕಬದ್ಧವಲ್ಲದ ಪ್ರಶ್ನೆಗಳು, ಆಧಾರರಹಿತ ಆರೋಪಗಳು, ಸುಳ್ಳು ಆಪಾದನೆಗಳು ಜನರಲ್ಲಿ ವಿಷಯಾಂತರ ಮಾಡುವ ವಿದ್ಯೆಯನ್ನು ಚೆನ್ನಾಗಿ ಕಲಿತುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಶ್ನೆ ಮಾಡುವುದನ್ನು ನಾವು ಎಂದಿಗೂ ವಿರೋಧಿಸುವುದಿಲ್ಲ. ಇದು ಪ್ರಜಾಪ್ರಭುತ್ವದ ಸೌಂದರ್ಯವೂ ಹೌದು. ಆದರೆ ವಿರೋಧಕ್ಕೋಸ್ಕರ ವಿರೋಧ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಈಗ ರಾಹುಲ್‌ಗಾಂಧಿ ಮಾಡುತ್ತಿರುವುದು ಇದನ್ನೇ ಎಂದು ತಿರುಗೇಟು ನೀಡಿದರು.ವಾಸ್ತವವಾಗಿ ರಾಹುಲ್‌ಗಾಂಧಿ ಏನು ಆರೋಪ ಮಾಡುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ. ಇದನ್ನು ನಂಬಿ ಅವರ ಪಕ್ಷದ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲದ ಕಾಂಗ್ರೆಸ್ ಪಕ್ಷ ಯಾವ ಸಂವಿಧಾನವನ್ನು ನಂಬುತ್ತದೆ ಎಂದು ಗೌರವ್ ಭಾಟಿಯಾ ಪ್ರಶ್ನೆ ಮಾಡಿದರು.
- ಮತಪತ್ರ ಬಳಕೆ ಸ್ವಾಗತಾರ್ಹ : ಖರ್ಗೆ
- ಅಮೆರಿಕ ರೈಲಿನಲ್ಲಿ ಉಕ್ರೇನ್ ಮಹಿಳೆ ಹತ್ಯೆ
- ಬ್ಯಾಲೆಟ್ ಪೇಪರ್ ವಿರುದ್ಧ ಕಾನೂನು ಸಮರ : ವಿಜಯೇಂದ್ರ
- ತಲೆ ಬುರುಡೆ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾದ ಎಸ್ಐಟಿ ಅಧಿಕಾರಿಗಳು
- ರಾಹುಲ್ ಗಾಂಧಿ ಬಾಂಬ್ ಠುಸ್