Thursday, May 2, 2024
Homeರಾಜ್ಯಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಬಂದಾಗ ಶಿಷ್ಠಾಚಾರ ಪಾಲನೆ ಆಗಿಲ್ಲ : ಹರಿಪ್ರಸಾದ್

ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಬಂದಾಗ ಶಿಷ್ಠಾಚಾರ ಪಾಲನೆ ಆಗಿಲ್ಲ : ಹರಿಪ್ರಸಾದ್

ಬೆಂಗಳೂರು, ಜ.20- ಸಿಸಿಬಿ ಅಧಿಕಾರಿಗಳು ತಮ್ಮನ್ನು ವಿಚಾರಣೆಗೆ ಒಳಪಡಿಸಲು ಬಂದ ವೇಳೆ ಶಿಷ್ಠಾಚಾರ ಪಾಲನೆ ಆಗಿಲ್ಲ ಎಂದು ಗಂಭೀರ ಆರೋಪ ಮಾಡಿರುವ ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್, ಎಲ್ಲಾ ದೂರುಗಳಲ್ಲೂ ರಾಜ್ಯಪಾಲರು ಇಷ್ಟೇ ಕ್ಷಿಪ್ರವಾಗಿ ವಿಚಾರಣೆ ನಡೆಸಲು ಹೇಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಯಾತ್ರಿಕರ ವಿರುದ್ದ ಗೋದ್ರಾ ಹತ್ಯಾಕಾಂಡದಂತಹ ಸಂಚು ನಡೆಸುವ ಸಾಧ್ಯತೆ ಇದೆ. ಹೀಗಾಗಿ ಅಗತ್ಯ ಎಚ್ಚರಿಕೆ ವಹಿಸಬೇಕು ಎಂದು ತಾವು ಹೇಳಿಕೆ ನೀಡಿದ್ದು, ಬಿಜೆಪಿಯವರು ರಾಜ್ಯಪಾಲರಿಗೆ ದೂರು ನೀಡಿದ್ದರು ಎಂದು ಹೇಳಿದ್ದಾರೆ.

ರಾಜ್ಯಪಾಲರ ಕಚೇರಿಗೆ ಬರುವ ಎಲ್ಲಾ ದೂರುಗಳ ಬಗ್ಗೆಯೂ ಇದೇ ರೀತಿ ಕ್ಷಿಪ್ರ ವಿಚಾರಣೆ ನಡೆಯುತ್ತವೆಯೇ? ತಮ್ಮ ಕುರಿತಾದ ದೂರಿಗೆ ಸಂಬಂಧಿಸಿದಂತೆ ಮಾತ್ರ ವಿಶೇಷ ವೇಗ ಇರುವುದಾದರೆ, ಅದನ್ನು ಬೇರೆ ರೀತಿ ಅರ್ಥೈಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‍ನಲ್ಲೀಗ ಮೂವರು ದಲಿತ ನ್ಯಾಯಮೂರ್ತಿಗಳು

ತಮ್ಮನ್ನು ವಿಚಾರಣೆ ನಡೆಸುವಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿತ್ತು ಎಂದು ಪೊಲೀಸರು ಆಯುಕ್ತರು ತಿಳಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ?. ಸಿಸಿಬಿ ಅಧಿಕಾರಿಗಳು ತಮ್ಮ ಹೋದ ನಂತರ ಗೃಹ ಸಚಿವರಿಗೆ ಮಾಹಿತಿ ಸಿಕ್ಕಿದೆ ಎಂದರು. ಒಳ ಮೀಸಲಾತಿ ವಿಷಯವಾಗಿ ಸಂವಿಧಾನ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಕ್ರಮ ಸಮರ್ಥನೀಯವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಸಂವಿಧಾನ?ದ?ವಾಗಿ ಕ್ರಮ ಕೈಗೊಂಡಿರಲಿಲ್ಲ?.

ಮೀಸಲಾತಿ ವರ್ಗೀಕರಣ ಆಗಲು ಸಂವಿಧಾನ ತಿದ್ದುಪಡಿ ಆಗಬೇಕು. ಹಿಂದುಳಿದ ವರ್ಗಗಳಲ್ಲಿನ ಜಾತಿಗಳಲ್ಲೂ ಒಳ ಮೀಸಲಾತಿಗಾಗಿ ದೆಹಲಿಯಲ್ಲಿ ರೋಹಿಣಿ ಆಯೋಗ ರಚಿಸಲಾಗಿದ್ದು?, ಅದು ವರದಿ ನೀಡಿರುವ ಸಾಧ್ಯತೆಗಳಿವೆ ಎಂದರು. ಕಾಂತರಾe? ವರದಿ ಸಲ್ಲಿಕೆಯಾಗುವ ಮುನ್ನವೇ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ?. ವರದಿ ಸಲ್ಲಿಕೆಯಾಗಲಿ. ಚರ್ಚೆಯ ?ಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳ?ಹುದು ಎಂದು ಹೇಳಿದರು.

RELATED ARTICLES

Latest News