Wednesday, February 28, 2024
Homeರಾಷ್ಟ್ರೀಯಸುಪ್ರೀಂ ಕೋರ್ಟ್‍ನಲ್ಲೀಗ ಮೂವರು ದಲಿತ ನ್ಯಾಯಮೂರ್ತಿಗಳು

ಸುಪ್ರೀಂ ಕೋರ್ಟ್‍ನಲ್ಲೀಗ ಮೂವರು ದಲಿತ ನ್ಯಾಯಮೂರ್ತಿಗಳು

ನವದೆಹಲಿ,ಜ.20- ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರಿಗೆ ಬಡ್ತಿ ನೀಡಲು ಶಿಫಾರಸು ಮಾಡಿದೆ. ಹೀಗಾಗಿ ಸುಪ್ರೀಂ ಕೋರ್ಟ್‍ಗೆ ಮತ್ತೊಬ್ಬ ನ್ಯಾಯಾೀಧಿಶರು ಸಿಗುವ ಸಾಧ್ಯತೆ ಇದೆ.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರ ನೇಮಕಾತಿ ದೃಢಪಟ್ಟರೆ ನ್ಯಾಯಮೂರ್ತಿ ವರಾಳೆ ಅವರು ಸುಪ್ರೀಂ ಕೋರ್ಟ್‍ನಲ್ಲಿ ಮೂರನೇ ದಲಿತ ನ್ಯಾಯಮೂರ್ತಿಯಾಗಲಿದ್ದಾರೆ. ಈಗಾಗಲೇ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್ ಅವರು ಸುಪ್ರೀಂ ಕೋರ್ಟ್‍ನಲ್ಲಿ ಇರುವ ಇಬ್ಬರು ದಲಿತ ನ್ಯಾಯಮೂರ್ತಿಗಳಾಗಿದ್ದಾರೆ.

ಅಂದಹಾಗೆ ಸುಪ್ರೀಂ ಕೋರ್ಟ್‍ನಲ್ಲಿ ಮೂವರು ದಲಿತ ನ್ಯಾಯಮೂರ್ತಿಗಳು ಇರುವುದು ಇದೇ ಮೊದಲು. ನ್ಯಾಯಮೂರ್ತಿ ಗವಾಯಿ ಅವರು ಮೇ ತಿಂಗಳಿಂದ ನವೆಂಬರ್ 2025 ರವರೆಗೆ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿರುತ್ತಾರೆ. 61 ವರ್ಷದ ನ್ಯಾಯಮೂರ್ತಿ ವರಾಳೆ ಅವರು ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಸಿವಿಲ್, ಕ್ರಿಮಿನಲ್, ಕಾರ್ಮಿಕ ಮತ್ತು ಆಡಳಿತ ವಿಷಯಗಳಲ್ಲಿ ಪ್ರತ್ಯೇಕವಾಗಿ ಕಾನೂನು ಅಭ್ಯಾಸ ಮಾಡಿದ್ದಾರೆ.

ನ್ಯಾಯಮೂರ್ತಿ ವರಾಳೆ ಅವರು ಈ ಹಿಂದೆ ಬಾಂಬೆ ಹೈಕೋರ್ಟ್‍ನಲ್ಲಿ ನ್ಯಾಯಾೀಧಿಶರಾಗಿದ್ದರು. ಅವರು ಅಕ್ಟೋಬರ್ 2022 ರಲ್ಲಿ ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಪ್ರಸ್ತುತ ಹೈಕೋರ್ಟ್‍ನ ಅತ್ಯಂತ ಹಿರಿಯ ನ್ಯಾಯಾೀಧಿಶರು ಮತ್ತು ಪರಿಶಿಷ್ಟ ಜಾತಿಯಿಂದ ಬಂದಿರುವ ಏಕೈಕ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.

ಪ್ರಾಣ ಪ್ರತಿಷ್ಠೆವರೆಗೆ ರಾಮಲಲ್ಲಾನ ಕಣ್ಣು ಅಗೋಚರವಾಗಿರಲಿದೆ

ಕಳೆದ ತಿಂಗಳು ರಾಜೀನಾಮೆ ನೀಡಿದ ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರ ಸ್ಥಾನಕ್ಕೆ ಜಸ್ಟಿಸ್ ವರಾಲೆ ನೇಮಕಗೊಂಡಿದ್ದಾರೆ. ಅವರ ನೇಮಕಾತಿಯ ನಂತರ ಸರ್ವೋಚ್ಚ ನ್ಯಾಯಾಲಯವು 34 ನ್ಯಾಯಾೀಧಿಶರ ಸಂಪೂರ್ಣ ಮಂಜೂರಾತಿಯ ಸಾಮಥ್ರ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ತಿಂಗಳ ಆರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ನಾಲ್ಕು ಹೈಕೋರ್ಟ್‍ಗಳಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಐವರನ್ನು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‍ಗಳಿಂದ ಇತರ ಇಬ್ಬರನ್ನು ಶಾಶ್ವತ ನೇಮಕಾತಿಗಾಗಿ ಶಿಫಾರಸು ಮಾಡಿದೆ.

ಕೊಲಿಜಿಯಂ ವ್ಯವಸ್ಥೆಯ ಮೂಲಕ ನ್ಯಾಯಾೀಧಿಶರ ನೇಮಕವು ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರದ ನಡುವೆ ಆಗಾಗ್ಗೆ ನಡೆಯುವ ಸಂಘರ್ಷಕ್ಕೂ ಕಾರಣವಾಗಿದೆ ಅನ್ನೋದು ಗಮನಾರ್ಹ. ನ್ಯಾಯಾೀಧಿಶರ ಆಯ್ಕೆಯಲ್ಲಿ ಪಾರದರ್ಶಕತೆಯ ಕೊರತೆಯ ದೂರುಗಳು ಸೇರಿದಂತೆ ಕೊಲಿಜಿಯಂ ವ್ಯವಸ್ಥೆಯು ವಿವಿಧ ವಲಯಗಳಿಂದ ಟೀಕೆಗೆ ಒಳಗಾಗಿದೆ. ವಿಶೇಷವಾಗಿ ನ್ಯಾಯಾೀಧಿಶರ ನೇಮಕಾತಿಯಲ್ಲಿ ತಾವು ಮೂಗು ತೂರಿಸಿಕೊಳ್ಳಲಾಗದೆ ರಾಜಕೀಯ ವಲಯದಿಂದ ಟೀಕೆಗೆ ಒಳಗಾಗುತ್ತದೆ ಅನ್ನೋದು ಗಮನಾರ್ಹ.

ಜನವರಿ 1 ರಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ನ್ಯಾಯಾೀಶರ ನೇಮಕಾತಿಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿದ್ದರು. ಅನೇಕ ಕಾರಣಗಳಿಂದಾಗಿ ಕೊಲಿಜಿಯಂನ ಚರ್ಚೆಗಳನ್ನು ಸಾರ್ವಜನಿಕ ಡೊಮೇನ್‍ನಲ್ಲಿ ಇರಿಸಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹೇಳಿದ್ದರು.

RELATED ARTICLES

Latest News