ನವದೆಹಲಿ, ಮೇ 5: ಭಾರತದ ಪ್ರಬಲ ಆಸ್ತವಾಗಿರುವ ರಫೇಲ್ ಯುದ್ಧ ವಿಮಾನವನ್ನು ಆಟಿಕೆ ಎಂದು ಕರೆಯುವ ಮೂಲಕ ಕಾಂಗ್ರೆಸ್ ನಾಯಕ ಅಜಯ್ ರಾಯ್ ಉದ್ಧಟತನ ಪ್ರದರ್ಶಿಸಿದ್ದಾರೆ.
ಅಜಯ್ ರಾಯ್ ರಫೇಲ್ ಯುದ್ಧ ವಿಮಾನವನ್ನು ಆಟಿಕೆ ಎಂದು ಲೇವಡಿ ಮಾಡಿ. ಅದರ ಮೇಲೆ ನಿಂಬೆ ಮತ್ತು ಮೆಣಸಿನಕಾಯಿ ನೇತುಹಾಕುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು.
ಕಾಂಗ್ರೆಸ್ ಪಕ್ಷವು ಪಾಕಿಸ್ತಾನಿ ಭಯೋತ್ಪಾದನೆಯ ಅಧಿಕೃತ ವಕ್ತಾರ, ರಾಹುಲ್ ಗಾಂಧಿ ಮುಂದೆ ಬಂದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ.
ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದಾಗಲೆಲ್ಲಾ, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಬಂದು ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡುತ್ತಾರೆ ಎಂದು ಬಿಜೆಪಿ ಲೇವಡಿ ಮಾಡಿದೆ. 24 ಗಂಟೆಗಳ ಹಿಂದೆ ಚರಣ್ ಜಿತ್ ಸಿಂಗ್ ಚನ್ನಿ ಸರ್ಜಿಕಲ್ ಸೈಕ್‌ಗೆ ಪುರಾವೆ ಕೇಳುತ್ತಿದ್ದರು.
ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು. ನಂತರ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಯುಪಿ ಕಾಂಗ್ರೆಸ್ ಅಧ್ಯಕ್ಷರು ನಮ್ಮ ಸಶಸ್ತ್ರ ಪಡೆಗಳನ್ನು ಅಣಕಿಸಿ ಆಟಿಕೆ ವಿಮಾನವನ್ನು ತೋರಿಸುತ್ತಾರೆ ಎಂದು ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಹೇಳಿದ್ದಾರೆ.
ಪಹಲ್ಲಾಮ್ ಭಯೋತ್ಪಾದಕ ದಾಳಿಯ ಆರೋಪಿಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಕೇವಲ ದೊಡ್ಡ ಮಾತುಗಳನ್ನಾಡಿದೆ ಎಂದು ಅಜಯ್ ರಾಯ್ ಭಾನುವಾರ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಸರ್ಕಾರ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ, ಆದರೆ ಅವು ಹ್ಯಾಂಗರ್‌ನಲ್ಲಿ ಬಿದ್ದಿವೆ ಮತ್ತು ಅವುಗಳ ಮೇಲೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳು ನೇತಾಡುತ್ತಿವೆ ಎಂದ ರಾಯ್ ರಫೇಲ್ ಎಂದು ಬರೆದು ನಿಂಬೆ-ಮೆಣಸಿನಕಾಯಿ ತೂಗು ಹಾಕಿರುವ ಆಟಿಕೆ ವಿಮಾನವನ್ನು ತೋರಿಸಿದರು.
ಶಹಜಾದ್ ಪೂನಾವಾಲಾ ಮಾತನಾಡಿ, ರಫೇಲ್ ಆಟಿಕೆ ವಿಮಾನದ ಮೂಲಕ ಕಾಂಗ್ರೆಸ್ ಪಕ್ಷವು ಭಾರತದ ಸಶಸ್ತ್ರ ಪಡೆಗಳ ನೈತಿಕ ನೈರ್ಯದ ಜೊತೆ ಆಟವಾಡುತ್ತಿದೆ ಎಂದು ಹೇಳಿದರು. ರಾಹುಲ್ ಗಾಂಧಿಯವರ ಆಜ್ಞೆಯ ಮೇರೆಗೆ ಇದನ್ನು ಮಾಡಲಾಗುತ್ತಿದೆ.
ಅಜಯ್ ರಾಯ್ ಅವರನ್ನು ರಾಹುಲ್ ಗಾಂಧಿಯ ಅತ್ಯಂತ ಆಪ್ತ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಸರ್ವಪಕ್ಷ ಸಭೆಯಲ್ಲಿ ರಾಹುಲ್ ಗಾಂಧಿ ಅವರು ದೇಶ ಮತ್ತು ಸೈನ್ಯದೊಂದಿಗೆ ನಿಲ್ಲುವುದಾಗಿ ಹೇಳುತ್ತಾರೆ. ಸರ್ವಪಕ್ಷ ಸಭೆಯಿಂದ ಹೊರಬಂದ ತಕ್ಷಣ, ವರಸೆ ಬದಲಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.