Sunday, May 4, 2025
HomeUncategorized"ಯತ್ನಾಳ್ ಅವರೇ ರಾಜೀನಾಮೆ ನೀಡಿ ಅಪ್ಪನಿಗೆ ಹುಟ್ಟಿದ ಮಗ ಎಂದು ಸಾಬೀತು ಪಡಿಸಿ" : ಕೆಣಕುತ್ತಿರುವ...

“ಯತ್ನಾಳ್ ಅವರೇ ರಾಜೀನಾಮೆ ನೀಡಿ ಅಪ್ಪನಿಗೆ ಹುಟ್ಟಿದ ಮಗ ಎಂದು ಸಾಬೀತು ಪಡಿಸಿ” : ಕೆಣಕುತ್ತಿರುವ ಕೈ ನಾಯಕರು

Congress Leaders challege Yatnal

ಬೆಂಗಳೂರು, ಮೇ 3 – ಬಾಯಿಗೆ ಬಂದಂತೆ ಮಾತನಾಡಿ ಎಲ್ಲರನ್ನೂ ಕೆಣಕುತ್ತಿದ್ದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶಿವಾನಂದ ಪಾಟೀಲ್ ಸವಾಲು ಎಸೆಯುತ್ತಿದ್ದಂತೆ ಕಾಂಗ್ರೆಸ್ ನ ಸಚಿವರು, ಶಾಸಕರು ಲೇವಡಿ ಮಾಡಲಾರಂಭಿಸಿದ್ದಾರೆ.

ವಿಜಯಪುರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಕ್ಫ್ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್, ಸವಾಲು ಸ್ವೀಕರಿಸಿರುವ ಸಚಿವ ಶಿವಾನಂದ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಾವು ಅಪ್ಪನಿಗೆ ಹುಟ್ಟಿದ ಮಗ ಎಂದು ಸಾಬೀತು ಪಡಿಸಿದ್ದಾರೆ. ಈಗ ಯತ್ನಾಳ್ ಅದೇ ಸವಾಲನ್ನು ಸ್ವೀಕರಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಾವು ಕೂಡ ಅಪ್ಪನಿಗೆ ಹುಟ್ಟಿದ ಮಗ ಎಂದು ಸಾಬೀತು ಪಡಿಸಬೇಕು ಎಂದಿದ್ದಾರೆ.

ಯತ್ನಾಳ್ ಅವರು ಶಿವಾನಂದ ಪಾಟೀಲ್ ಸೇರಿದಂತೆ ಎಲ್ಲರನ್ನೂ ಪದೇ ಪದೇ ಕೆಣಕುತ್ತಿರುತ್ತಾರೆ, ದಮ್ಮು, ತಾಕತ್ತು ಇದ್ದರೆ ರಾಜೀನಾಮೆ ನೀಡಿ ಎಂದು ಸವಾಲು ಹಾಕುತ್ತಿರುತ್ತಾರೆ. ಶಿವಾನಂದ ಪಾಟೀಲ್ ಮಂತ್ರಿಯಾಗಿದ್ದು ಓಪನ್ ಆಗಿ ರಾಜೀನಾಮೆ ನೀಡಿದ್ದಾರೆ. ನಾನು ಅಪ್ಪನಿಗೆ ಹುಟ್ಟಿದ್ದೇನೆ. ಯತ್ನಾಳ್ ವಿರುದ್ಧ ಚುನಾವಣೆ ಮಾಡಲು ನಾನು ಸಿದ್ದ ಎಂದು ಹೇಳಿದ್ದಾರೆ. ಇದನ್ನು ಯತ್ನಾಳ್ ಸ್ವೀಕರಿಸಲಿ ಎಂದು ತಿರುಗೇಟು ನೀಡಿದರು.

ಯತ್ನಾಳ್ ಬೆಳಗ್ಗೆಯಿಂದಲೂ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ, ಯಾರಿಗೂ ಸಿಗುತ್ತಿಲ್ಲ. ಎಲ್ಲ ರೂಸ್ ಪಟಾಕಿ ಆಗಿ ಹೋಗಿದೆಯಲ್ಲಾ ಎಂದು ಜಮೀರ್ ಲೇವಡಿ ಮಾಡಿದರು. ಮತ್ತೊಂದೆಡೆ ಶಿವರಾಜ ತಂಗಡಗಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಸಚಿವರು ಯತ್ನಾಳ್ ಸವಾಲು ಸ್ವೀಕರಿಸಬೇಕು ಎಂದು ಕೆಣಕಿದ್ದಾರೆ.

ಶಿವಾನಂದ ಪಾಟೀಲ್ ರಾಜೀನಾಮೆ ಬಳಿಕ ಯತ್ನಾಳ್ ಸಾರ್ವಜನಿಕವಾಗಿ ಕಾಣಿಸಿಕೊಂಡು ಪ್ರತಿಕ್ರಿಯೆ ನೀಡದೆ ಇರುವುದು ಕಾಂಗ್ರೆಸಿಗರಿಗೆ ಹೊಸ ಅಸ್ತ್ರ ಕೊಟ್ಟಂತಾಗಿದೆ. ಯತ್ನಾಳ್ ಬಿಜೆಪಿಯಿಂದ ಉಚ್ಛಾಟಿತರಾಗಿ, ಒಂಟಿಯಾಗಿರುವುದರಿಂದ ಕಾಂಗ್ರೆಸ್ಸಿಗರಿಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ.

RELATED ARTICLES

Latest News