Friday, October 3, 2025
Homeರಾಜ್ಯಚುನಾವಣಾ ಆಯೋಗದ ವಿರುದ್ಧ ಅಬ್ಬರಿಸಿ ಸಾಕ್ಷಿ ನೀಡದೆ ಮೌನಕ್ಕೆ ಶರಣಾದ ಕಾಂಗ್ರೆಸ್‌‍ ನಾಯಕರು

ಚುನಾವಣಾ ಆಯೋಗದ ವಿರುದ್ಧ ಅಬ್ಬರಿಸಿ ಸಾಕ್ಷಿ ನೀಡದೆ ಮೌನಕ್ಕೆ ಶರಣಾದ ಕಾಂಗ್ರೆಸ್‌‍ ನಾಯಕರು

Congress leaders remain silent without giving evidence against the Election Commission

ಬೆಂಗಳೂರು, ಆ.10- ಅಸಮರ್ಥ ಮತದಾರರ ಪಟ್ಟಿಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನೀಡಿರುವ ದೂರಿಗೆ ಪೂರಕವಾಗಿ ದಾಖಲಾತಿಗಳನ್ನು ಒದಗಿಸಿ, ಪ್ರಮಾಣ ಪತ್ರ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದ್ದು ಇದಕ್ಕೆ ರಾಜ್ಯ ನಾಯಕರು ಉತ್ತರಿಸದೆ ಮೌನಕ್ಕೆ ಶರಣಾಗಿದ್ದಾರೆ.

ಆ. 8ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಬೆಂಗಳೂರಿಗೆ ಆಗಮಿಸಿ, ಮತದಾರರ ಪಟ್ಟಿಯ ಅಕ್ರಮಗಳ ಬಗ್ಗೆ ಬೃಹತ್‌ ಪ್ರತಿಭಟನೆ ನಡೆಸಿದರು. ಬಳಿಕ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, ಖದ್ದು ದೂರು ನೀಡುವ ಸಾಧ್ಯತೆಯಿತ್ತು. ಕೊನೆಯ ಕ್ಷಣದಲ್ಲಿ ಯೋಜನೆ ಬದಲಿಸಿದ ರಾಹುಲ್‌ಗಾಂಧಿ ಚುನಾವಣಾ ಆಯೋಗಕ್ಕೆ ತಾವು ಭೇಟಿ ನೀಡದೆ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ
ಡಿ.ಕೆ.ಶಿವಕುಮಾರ್‌ ಅವರನ್ನು ಕಳುಹಿಸಿದರು. ಡಿ.ಕೆ.ಶಿವಕುಮಾರ್‌ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ 2 ಪುಟಗಳ ದೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ ಸಹಿ ಮಾಡಿದ್ದಾರೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸುಧೀರ್ಘ ವಿವರಣೆ ನೀಡಿದ್ದಾರೆ. ದೂರಿಗೆ ತಕ್ಷಣವೇ ಸ್ಪಂದಿಸಿರುವ ಚುನಾವಣಾ ಆಯೋಗ ಆ.5 ಮತ್ತು 8ರಂದು ನೀವು ಸಲ್ಲಿಸಿರುವ ಮನವಿಗಳನ್ನು ಗೌರವಿಸುತ್ತಾ, ನಿಮಿಂದ ಸಮರ್ಪಕವಾದ ದಾಖಲೆಗಳು ಮತ್ತು ಸೂಕ್ತವಾದ ಪ್ರಾತಿನಿಧ್ಯ ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದೆ.

ಮುಖ್ಯ ಚುನಾವಣಾಧಿಕಾರಿ ಮತ್ತು ಕರ್ನಾಟಕ ಸರ್ಕಾರದ ಡಿಪಿಎಆರ್‌ನ ಚುನಾವಣಾ ವಿಭಾಗದ ಎಕ್‌್ಸ-ಆಫಿಸಿಯೋ ಕಾರ್ಯದರ್ಶಿಯವರು, ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದು, ಚುನಾವಣಾ ಮತದಾರರ ನೋಂದಣಿ ನಿಯಮಗಳು 1960ರ ಸೆಕ್ಷನ್‌ 20(3)(ಬಿ)ಅಡಿ ಚುನಾವಣಾ ಅಧಿಕಾರಿಗೆ, ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ದೂರು ನೀಡಿದ ವ್ಯಕ್ತಿಗಳಿಂದ ಘೋಷಣೆ ಮತ್ತು ಪ್ರಮಾಣ ಪಡೆಯುವ ಅವಕಾಶಗಳಿವೆ. ಅದರ ಅನುಸಾರ ಪ್ರಮಾಣ ಪತ್ರ ಸಲ್ಲಿಸುವಂತೆ ಡಿ.ಕೆ.ಶಿವಕುಮಾರ್‌ ಅವರಿಗೆ ಆಯೋಗ ಸೂಚಿಸಲಾಗಿದೆ.

1950ರ ಜನ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್‌ 31ರ ಅನುಸಾರ ಸುಳ್ಳು ಘೋಷಣೆ ಮಾಡಿದ್ದರೆ, ಅಂತಹ ವ್ಯಕ್ತಿಗೆ ಒಂದು ವರ್ಷದ ಅವಧಿಗೂ ಗರಿಷ್ಠ ಶಿಕ್ಷೆ ಜೊತೆಗೆ ದಂಡ ವಿಧಿಸುವ ಅವಕಾಶವಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 227ರ ಅಡಿ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶಗಳಿದ್ದು, ಈ ಎರಡು ಸೆಕ್ಷನ್‌ಗಳ ಅನುಸಾರ ಸ್ವಘೋಷಿತ ಪ್ರಮಾಣ ಪತ್ರ ಸಲ್ಲಿಸುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಆದರೆ ಡಿ.ಕೆ.ಶಿವಕುಮಾರ್‌ ಅವರಾಗಲಿ, ಸಿದ್ದರಾಮಯ್ಯ ಅವರಾಗಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಲಿ, ಆಯೋಗದ ನಿರ್ದೇಶನದ ಮೇರೆಗೆ ಈವರೆಗೂ ಯಾವುದೇ ಪ್ರಮಾಣ ಪತ್ರಗಳನ್ನು ಆಯೋಗಕ್ಕೆ ಸಲ್ಲಿಸಿಲ್ಲ. ಬದಲಾಗಿ ಕಾಟಚಾರಕ್ಕೆ ದೂರು ನೀಡಿ ಕೈತೊಳೆದುಕೊಂಡಿದ್ದಾರೆ.

ಕಾಂಗ್ರೆಸ್‌‍ ನಾಯಕರು ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎಂದು ಹೇಳಿರುವ ಚುನಾವಣಾ ಅಕ್ರಮಗಳ ದೂರು ಕ್ರಮಬದ್ಧವಾಗಿಲ್ಲದ ಕಾರಣ ತನಿಖೆಯಾಗಿರುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

RELATED ARTICLES

Latest News