ಬೆಂಗಳೂರು,ಅ.21-ಬಿಜೆಪಿ ಸರ್ಕಾರ ಕಾರ್ಕಳದಲ್ಲಿ ನಿರ್ಮಿಸಿದ್ದ ಪರಶುರಾಮನ ಕಂಚಿನ ಪ್ರತಿಮೆಯನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಕೇಳಿಬರುತ್ತಿದ್ದ ಆರೋಪಗಳಿಗೆ ತಿರುಗೇಟು ನೀಡಲಾಗುತ್ತಿದ್ದು, ಬಿಜೆಪಿಯ ಭ್ರಷ್ಟಾಚಾರ ಪರಶುರಾಮನನ್ನೂ ಬಿಡಲಿಲ್ಲ, ಧರ್ಮ ದ್ರೋಹಿ ಬಿಜೆಪಿ ಸರ್ಕಾರ 14 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಪರಶುರಾಮನ ಮೂರ್ತಿ ಕಾಣೆಯಾಗಿದೆ! ಕಂಚಿನ ಪ್ರತಿಮೆ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಪೈಬರ್ ಪ್ರತಿಮೆ ತೋರಿಸಿ ಕಂಚಿನ ಪ್ರತಿಮೆ ಎಂದು ಒಪ್ಪಲಾಗದು ಎಂದು ತಿರುಗೇಟು ನೀಡಿದೆ.
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಆಖಿಲೇಶ್ ಯಾದವ್
ಭ್ರಷ್ಟ ಜನತಾ ಪಾರ್ಟಿಯ ಹಿಂದುತ್ವ ಜಪದ ಹಿಂದಿರುವುದು ಭ್ರಷ್ಟಾಚಾರದ ಉದ್ದೇಶವೇ ಹೊರತು ಅಸಲಿ ದೈವಭಕ್ತಿಯಲ್ಲ. ಪರಶುರಾಮನ ಮೂರ್ತಿ ಕಂಚಿನದ್ದು ಎಂದು ಸರ್ಕಾರದ 14 ಕೋಟಿ ಹಣಕ್ಕೆ ಬಿಜೆಪಿ ಉಂಡೆ ನಾಮ ತಿಕ್ಕಿದೆ. ಬಿಜೆಪಿಯ ನಕಲಿ ಹಿಂದುತ್ವದ ಅಸಲಿತನ ಬಯಲಾಗಿದೆ, ದೇವರು, ಪುರಾಣ ಪುರುಷರನ್ನೂ ಬಿಡದೆ ಲೂಟಿ ಹೊಡೆಯುವಷ್ಟು ಬಿಜೆಪಿ ಬರಗೆಟ್ಟ ಪರಿಸ್ಥಿತಿ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯ ಈ ಮಹಾಮೋಸದ ಹಗರಣವನ್ನು ತನಿಖೆಗೆ ವಹಿಸಿ, ತಿಂದು ತೆಗಿದ ಜನರ ಹಣವನ್ನು ಹೊರಗೆ ಕಕ್ಕಿಸುವುದು ನಿಶ್ಚಿತ. ಸತ್ಯ ಹರಿಶ್ಚಂದ್ರದ ವಂಶಸ್ಥನಂತೆ ಮಾತನಾಡುವ ಶಾಸಕ ಸುನೀಲ್‍ಕುಮಾರ್ ಅವರೇ ಫೈಬರ್‍ಗೆ ಬಂಗಾರದ ಬಣ್ಣ ಬಳಿದು ಕಂಚು ಎಂದು ಇಡೀ ರಾಜ್ಯಕ್ಕೆ ಮಂಕುಬೂದಿ ಎರಚಿದ್ದೀರಿ, ಈಗ ನಿಮ್ಮ ಹಾಗೂ ನಿಮ್ಮ ಪ್ರತಿಮೆಯ ಬಣ್ಣ ಬಯಲಾಗಿದೆ. ಲೂಟಿ ಮಾಡಿ ತಿಂದಿದ್ದನ್ನು ಹೊರಗೆ ಕಕ್ಕಲು ಸಿದ್ದರಾಗಿರಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.