ಬೆಂಗಳೂರು,ಅ.7-ರಾಹುಲ್‍ಗಾಂಧಿಯವರನ್ನು ರಾವಣನಿಗೆ ಹೋಲಿಕೆ ಮಾಡಿದ ಬಿಜೆಪಿಯ ವಿವಾದಿತ ಪೋಸ್ಟರ್ ಅನ್ನು ಖಂಡಿಸಿ ಕಾಂಗ್ರೆಸ್ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೆಂಗಳೂರಿನ ಎಲ್ಲಾ ಕಾಂಗ್ರೆಸ್ ಘಟಕಗಳೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್, ಹಿರಿಯ ನಾಯಕರಾದ ಎಚ್.ಎಂ.ರೇವಣ್ಣ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಬಿಜೆಪಿಯವರಿಗೆ ರಾಹುಲ್‍ಗಾಂಧಿಯವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಆಕ್ಷೇಪಾರ್ಹ ಪೋಸ್ಟರ್‍ಗಳನ್ನು ಪ್ರಕಟಿಸಿ ಅವಹೇಳನ ಮಾಡುವ ಪ್ರಯತ್ನ ಮಾಡಿದೆ. ಇದು ರಾಹುಲ್ ಗಾಂಧಿಯವರ ಜನಪ್ರಿಯತೆ ತಗ್ಗಿಸಲು ಸಾಧ್ಯವಿಲ್ಲ.
ಈ ಹಿಂದೆ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನ ನೀಡಿದ ಬಿಜೆಪಿಯವರು ಕಪ್ಪುಹಣವನ್ನು ವಿದೇಶದಿಂದ ತಂದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಿರುವುದಾಗಿ ಹೇಳಿದರು.
ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳ ಸೆಂಚುರಿ ಭಾರಿಸಿದ ಭಾರತ, ಪ್ರಧಾನಿ ಅಭಿನಂದನೆ
ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಯುವಕರಲ್ಲಿ ಆಸೆ ಹುಟ್ಟಿಸಿದರು. ಅದ್ಯಾವುದೂ ಈಡೇರಿಲ್ಲ. ಕಳೆದ 9 ವರ್ಷಗಳಲ್ಲಿ ದೇಶದ ಅಭಿವೃದ್ಧಿಯನ್ನು ಹಿಮ್ಮುಖವಾಗಿ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಮರೆಮಾಚಲು ವಿವಾದಿತ ಕಾನೂನುಗಳನ್ನು ಜಾರಿಗೆ ತರುತ್ತಾರೆ. ಭಾವನಾತ್ಮಕ ರಾಜಕಾರಣದ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಾರೆ. ಈಗ ವಿವಾದಿತ ಪೋಸ್ಟರ್‍ಗಳ ಮೂಲಕ ಅವಹೇಳನ ಮಾಡುವ ಪ್ರವೃತ್ತಿಗೆ ಕೈ ಹಾಕಿದ್ದಾರೆ. ಇದಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.