Friday, August 15, 2025
Homeರಾಜ್ಯಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರ ಮುಂದಿನ ದಿನಗಳಲ್ಲಿ ಹೊರಬರಲಿದೆ : ಡಿಕೆಶಿ

ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರ ಮುಂದಿನ ದಿನಗಳಲ್ಲಿ ಹೊರಬರಲಿದೆ : ಡಿಕೆಶಿ

Conspiracy against Dharmasthala will come out in the coming days: DK Shivakumar

ಬೆಂಗಳೂರು, ಆ.15– ತಪ್ಪು ಮಾಡಿದವರನ್ನು ರಕ್ಷಿಸುವುದಿಲ್ಲ. ಧರ್ಮಸ್ಥಳ ವಿಚಾರದಲ್ಲಿ ಪರವಿರೋಧ ಎನ್ನುವುದಕ್ಕಿಂತಲೂ ನ್ಯಾಯ ದೊರೆಯಬೇಕೆಂಬುದು ಸರ್ಕಾರದ ಆಶಯವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಭಕ್ತಿ ಹಾಗೂ ಶ್ರದ್ಧೆಗಳ ಬಗ್ಗೆ ಅರಿವಿದೆ. ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರ ಮುಂದಿನ ದಿನಗಳಲ್ಲಿ ಹೊರಬರಲಿದೆ ಎಂದರು.

ವಿಧಾನಸಭೆಯಲ್ಲಿ ನಡೆದಿರುವ ಚರ್ಚೆಗೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಸೋಮವಾರ ಉತ್ತರ ನೀಡಲಿದ್ದು, ನಾಡಿನ ಜನರಿಗೆ ಸತ್ಯ ತಿಳಿಸಲಿದ್ದಾರೆ. ನಾನು ಅವರೊಂದಿಗೆ ಚರ್ಚೆ ಮಾಡಿ ಒಂದಿಷ್ಟು ವಿಚಾರಗಳನ್ನು ಹೇಳಿದ್ದೇನೆ ಎಂದರು.

ಧಾರ್ಮಿಕ ಸ್ಥಳಗಳ ಬಗ್ಗೆ ಸುಳ್ಳು, ಷಡ್ಯಂತ್ರ, ಅಪಮಾನ, ಅಪಚಾರಗಳ ವಿರುದ್ಧ ಮುಖ್ಯಮಂತ್ರಿ ಅವರು ನಿಲುವು ಹೊಂದಿದ್ದಾರೆ. ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ತಮಗೆಲ್ಲ ಮುಖ್ಯಮಂತ್ರಿ ಅವರು ಸೂಚನೆ ನೀಡಿದ್ದಾರೆ.

ಆರೋಪಗಳು ಸುಳ್ಳಾಗಿದ್ದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ದೊಡ್ಡ ಚಿಂತನೆಯಾಗಿದೆ. ಕಾನೂನಿಕ್ಕಿಂತ ಯಾರೂ ದೊಡ್ಡವರಲ್ಲ. ಕಾನೂನು ಪಾಲನೆ ನಮೆಲ್ಲರ ಹೊಣೆಗಾರಿಕೆ. ಆದರೆ ಅನಗತ್ಯವಾಗಿ ಅರೋಪ ಮಾಡಿದರೆ ಸಹಿಸುವುದಿಲ್ಲ. ಇಲ್ಲಿ ಯಾರನ್ನೂ ರಕ್ಷಿಸುವುದಿಲ್ಲ ಎಂದು ಹೇಳಿದರು.

RELATED ARTICLES

Latest News