ಹಾಸನ, ಆ.31- ಧರ್ಮಸ್ಥಳದ ವಿಚಾರದಲ್ಲಿ ಹಲವು ದಿನಗಳಿಂದ ಅಪ ಪ್ರಚಾರ ವ್ಯವಸ್ಥಿತವಾಗಿ ನಡೆಯುತ್ತಿರುವುದರ ಹಿಂದೆ ಸಮಾಜಘಾತುಕ ಶಕ್ತಿಗಳು ಷಡ್ಯಂತ್ರವಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಕಂದಲಿಯಲ್ಲಿ ಧರ್ಮಸ್ಥಳ ಸತ್ಯ ಯಾತ್ರೆ ಕೈಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರದಲ್ಲಿ ಇಲ್ಲಿಯವರೆಗೆ ಎಳ್ಳಷ್ಟು ಸತ್ಯ ಹೊರಗೆ ಬಂದಿಲ್ಲ. ದೊಡ್ಡ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ವಿಧಾನಸಭೆಯಲ್ಲೇ ಮಾತನಾಡಿದ್ದರು. ನಮಗೆ ಈ ಬಗ್ಗೆ ಅನುಮಾನ ಶುರುವಾಗಿದೆ. ಅದನ್ನೆಲ್ಲಾ ನಾವು ಹೊರ ತರಬೇಕಾದ ಅವಶ್ಯಕತೆ ಇದೆ ಎಂದರು.
ಧರ್ಮಸ್ಥಳದ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪಸ್ವಾಮಿ ದರ್ಶನ ಪಡೆಯಲು ಹೊರಟಿದ್ದೇವೆ. ಧರ್ಮಸ್ಥಳ ಮತ್ತು ಅಣ್ಣಪ್ಪನ ಮೇಲೆ ಅಪ ಪ್ರಚಾರ ನಡೆಯುತ್ತಿದೆ. ಧರ್ಮಸ್ಥಳದ ವಿರುದ್ಧ ನಿರಂತರ ಷಡ್ಯಂತರ, ಪಿತೂರಿ ನಡೆದಿದೆ ಎಂದು ಆಪಾದಿಸಿದರು. ನಾವು ರಾಜಕಾರಣ ಮಾಡಲು ಈ ಯಾತ್ರೆ ಕೈಗೊಂಡಿಲ್ಲ. ಪಕ್ಷಾತೀತವಾಗಿ ಧರ್ಮಸ್ಥಳದ ಬೆಂಬಲಿಕಿದ್ದಾರೆ. ನಾನೂ ಕೂಡ ಮಂಜುನಾಥಸ್ವಾಮಿಯ ಪರಮ ಭಕ್ತ. ನಮ ಧರ್ಮವನ್ನು ಉಳಿಸಲು ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ. ಹೀಗಾಗಿ ಪಕ್ಷಾತೀತವಾಗಿ ರಾಜಕೀಯ ಹೊರತುಪಡಿಸಿ ಧರ್ಮಸ್ಥಳಕ್ಕೆ ಹೊರಟಿದ್ದೇವೆ. ರಾಜ್ಯದ ಹಲವು ಜಿಲ್ಲೆ, ತಾಲ್ಲೂಕುಗಳಿಂದ ಭಕ್ತರು ಬಂದಿದ್ದಾರೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಇಂದು ಇಡೀ ದಿನ ನಮಗೆ ಸಮಯ ನೀಡುವ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ. ಈ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರಿಗೆ ನೋವಾಗಿದ್ದರೂ ತುಂಬಾ ತಾಳೆಯಿಂದ ವರ್ತಿಸಿರುವುದು ಎಲ್ಲರೂ ಮೆಚ್ಚುವ ವಿಚಾರ. ನಾವು ಇಂದು ನೈತಿಕವಾಗಿ ಧರ್ಮಸ್ಥಳಕ್ಕೆ ಬೆಂಬಲವನ್ನು ನೀಡುತ್ತೇವೆ ಎಂದು ಅವರು ಹೇಳಿದರು.
ಕಳೆದ ಎರಡು ವರ್ಷದಿಂದ ಆಯಾ ಸಂದರ್ಭಕ್ಕೆ ಸರ್ಕಾರ ಎಸ್‌ಐಟಿಯನ್ನು ಹೇಗೆ ನಡೆಸಿಕೊಂಡಿದೆ ಎನ್ನುವುದನ್ನು ನೋಡಿದ್ದೇವೆ. ಆ ಎಲ್ಲಾ ಪ್ರಕರಣಗಳನ್ನು ಒಂದು ಕಡೆ ಒಬ್ಬ ವ್ಯಕ್ತಿ ಕೊಟ್ಟ ದೂರು ನೀಡಿದ್ದರು ಎಂಬ ಕಾರಣಕ್ಕೆ ಎಸ್‌ಐಟಿ ರಚನೆ ಆಗಿದೆ. ಆದರೆ, ಕೆಲ ಯೂಟ್ಯೂಬ್ ಚಾನೆಲ್‌ರವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಿದವರ ವಿರುದ್ಧ ಇಲ್ಲಿಯವರೆಗೂ ಯಾವುದೇ ಕ್ರಮ ಆಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
- ರಷ್ಯಾ ತೈಲ ಖರೀದಿಸಿ ಬ್ರಾಹಣರು ಲಾಭ ಮಾಡಿಕೊಳ್ಳುತ್ತಿದ್ದಾರೆ : ಅರ್ಥವಿಲ್ಲದ ಆರೋಪ ಮಾಡಿದ ಅಮೆರಿಕ
- ಡ್ರ್ಯಾಗನ್ ಎದುರು ಶರಣಾದ ಮೋದಿ : ಚೀನಾ ಓಲೈಕೆಯನ್ನು ಖಂಡಿಸಿದ ಕಾಂಗ್ರೆಸ್
- ಬೆಂಗಳೂರು : ಗಂಡನ ಕಿರುಕುಳದಿಂದ ನೊಂದು ಗೃಹಿಣಿ ಆತ್ಮಹತ್ಯೆ
- ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ವಾರಾಂತ್ಯದವರೆಗೆ ಮಳೆ ಮುಂದುವರಿಕೆ
- ಫೇಸ್ಬುಕ್ ಗೆಳೆಯನ ಕಿರುಕುಳಕ್ಕೆ ನೊಂದು ಯುವತಿ ಆತ್ಮಹತ್ಯೆ