Tuesday, January 21, 2025
Homeರಾಜ್ಯಸಂವಿಧಾನಕ್ಕೆ ಅಪಾಯವಿದೆ, ರಕ್ಷಣೆ ಹೊಣೆ ಕಾಂಗ್ರೆಸ್ ಮೇಲಿದೆ : ಖರ್ಗೆ

ಸಂವಿಧಾನಕ್ಕೆ ಅಪಾಯವಿದೆ, ರಕ್ಷಣೆ ಹೊಣೆ ಕಾಂಗ್ರೆಸ್ ಮೇಲಿದೆ : ಖರ್ಗೆ

ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇಲ್ಲದೇ ಹೋಗಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು.

ಬೆಳಗಾವಿ,ಜ.21- ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇಲ್ಲದೇ ಹೋಗಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು. ಸುವರ್ಣ ಸೌಧದ ಮುಂದೆ ಮಹಾತಗಾಂಧೀಜಿಯವರ ಪ್ರತಿಮೆ ಅನಾವರಣ ಮಾಡಿದ ಬಳಿಕ ಮಾತನಾಡಿದ ಅವರು, ಮಹಾತ ಗಾಂಧೀಜಿ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ್ದು, ಸಮಾಜ ಸುಧಾರಣೆ ಸೇರಿದಂತೆ ಹಲವಾರು ವಿಚಾರಗಳು ಆದರ್ಶಪ್ರಾಯವಾಗಿವೆ.

ಸ್ವಾತಂತ್ರ ನಂತರ ನೆಹರೂ ಅವರ ಆಡಳಿತದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇಂದು ಅದಕ್ಕೆ ಅಪಾಯ ಬಂದಿದ್ದು ರಕ್ಷಣೆ ಮಾಡುವ ಹೊಣೆಗಾರಿಕೆ ಕಾಂಗ್ರೆಸ್ಸಿಗರ ಮೇಲಿದೆ ಎಂದರು.

ಗಾಂಧೀಜಿಯವರ ತ್ಯಾಗ, ಕೊಡುಗೆಗಳು ವಿಶ್ವಮಾನ್ಯವಾಗಿವೆ. ಎಲ್ಲರಿಂದ ಹೊಗಳಿಕೆಗೆ ಪಾತ್ರವಾಗಿವೆ. 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿ ಅಧ್ಯಕ್ಷರಾಗಿದ್ದರು. ಅದೇ ಕೊನೆ. ಮತ್ತೆ ಅವರು ಅಧ್ಯಕ್ಷತೆಯನ್ನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಬೆಳಗಾವಿ ಹೆಮೆಯ ಸ್ಥಳವಾಗಿದೆ ಎಂದು ಹೇಳಿದರು.

ಎರಡು ದಿನದ ಹಿಂದೆ ನೊಯಿಡಾದಲ್ಲಿ ವಾಸ್ತುಶಿಲ್ಪಿ ಸುತಾರ ಅವರೊಂದಿಗೆ ಚರ್ಚೆ ನಡೆಸಿದ್ದು, ಗಾಂಧೀಜಿ ಅವರು ಇಬ್ಬರು ಮಕ್ಕಳ ಜೊತೆ ನಿಂತಿರುವ ಪ್ರತಿಮೆ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ಪ್ರತಿಮೆಯ ಮಾದರಿ ಫೋಟೊವನ್ನು ಪ್ರಿಯಾಂಕ ಗಾಂಧಿ ಅನುಮೋದಿಸಿದ್ದು ಆ ಪ್ರತಿಮೆಯನ್ನು ಕಲಬುರಗಿಯಲ್ಲಿ ಸ್ಥಾಪನೆಯಾಗಲಿದೆ.

RELATED ARTICLES

Latest News