Friday, November 22, 2024
Homeರಾಜ್ಯರಾಜ್ಯಾದ್ಯಂತ ಕೃಷಿ ಹೊಂಡ ನಿರ್ಮಾಣ

ರಾಜ್ಯಾದ್ಯಂತ ಕೃಷಿ ಹೊಂಡ ನಿರ್ಮಾಣ

ಬೆಂಗಳೂರು,ಜು.19- ಇನ್ನು ಮುಂದೆ ನೀರಾವರಿ ಪ್ರದೇಶ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಕಡೆ ಕೃಷಿ ಹೊಂಡಗಳನ್ನು ತೆರೆಯಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ವಿಧಾನಪರಿಷತ್ನಲ್ಲಿ ತಿಳಿಸಿದರು.

ಸದಸ್ಯ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈವರೆಗೂ ಕೃಷಿ ಹೊಂಡಗಳನ್ನು ನೀರಾವರಿ ಪ್ರದೇಶ ಹೊರತುಪಡಿಸಿ ಬೇರೆ ಬೇರೆ ಕಡೆ ತೆರೆಯಲಾಗುತ್ತಿತ್ತು. ಇನ್ನು ಮುಂದೆ ನೀರಾವರಿ ಪ್ರದೇಶದಲ್ಲೂ ತೆರೆಯಲು ಸಂಬಂಧಪಟ್ಟ ಅಽಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ಮೊದಲು 106 ತಾಲ್ಲೂಕುಗಳಲ್ಲಿ ಮಾತ್ರ ಕೃಷಿ ಹೊಂಡಗಳನ್ನು ತೆರೆಯಲು ಅವಕಾಶವಿತ್ತು. ಇದು ಎಲ್ಲ ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ನೀರಾವರಿ ಪ್ರದೇಶಗಳಲ್ಲೂ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಹೊಸದಾಗಿ ಕೃಷಿ ಹೊಂಡಗಳನ್ನು ತೆರೆಯುವವರು ಕಡ್ಡಾಯವಾಗಿ ತಂತಿಬೇಲಿಗಳನ್ನು ಅಳವಡಿಸಬೇಕು. ಅಲ್ಲದೆ ಅಲ್ಲಿ ಬೋರ್ಡ್ಗಳನ್ನು ಹಾಕಬೇಕು. ಸದ್ಯದಲ್ಲೇ ಇದಕ್ಕಾಗಿ ಹೊಸದೊಂದು ಆ್ಯಪ್ ತೆರೆಯುವುದಾಗಿ ವಿವರಿಸಿದರು.

ಕೃಷಿ ಹೊಂಡ ತೆರೆಯುವ ಪರಿಶಿಷ್ಟ ಜಾತಿ/ ಪಂಗಡದವರಿಗೆ ಶೇ.40ರಿಂದ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ನೀರು ಸಂಗ್ರಹಣೆಯಾಗುವುದರಿಂದ ರೈತರು ಮಳೆಯಿಲ್ಲದ ಸಮಯದಲ್ಲಿ ಬಳಸಿಕೊಳ್ಳಬಹುದು. ಕೆಲವರು ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಅನಾನುಕೂಲವಾಗಿದೆ ಎಂದು ಹೇಳುತ್ತಿದ್ದಾರೆ. ಹೊಸದಾಗಿ ರಸ್ತೆ ನಿರ್ಮಾಣ ಮಾಡಿದಾಗ ಅಪಘಾತಗಳು ಸಂಭವಿಸುತ್ತವೆ. ನಾವು ಎಲ್ಲವನ್ನು ನಕಾರಾತ್ಮಕವಾಗಿ ಯೋಚಿಸುವ ಬದಲು ಸಕಾರಾತ್ಮಕವಾಗಿ ಯೋಚಿಸಬೇಕೆಂದು ಸಲಹೆ ಮಾಡಿದರು.

RELATED ARTICLES

Latest News