Friday, November 22, 2024
Homeರಾಷ್ಟ್ರೀಯ | Nationalಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ : ಕಾರ್ಮಿಕ ಸಾವು

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ : ಕಾರ್ಮಿಕ ಸಾವು

ಬನಿಹಾಲ್/ಜಮ್ಮು, ಫೆ.22 (ಪಿಟಿಐ)- ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತತ ನಾಲ್ಕನೇ ದಿನವೂ ಬಂದ್ ಆಗಿರುವ ಭೂಕುಸಿತದಲ್ಲಿ ನಿರ್ಮಾಣ ಕಂಪೆನಿಯೊಂದರ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡ ಕಾರ್ಮಿಕನನ್ನು ಉತ್ತರ ಪ್ರದೇಶದ ನಿವಾಸಿ ದೇಶಪಾಲ್ (31) ಎಂದು ಗುರುತಿಸಲಾಗಿದ್ದು, ಬೆಳಿಗ್ಗೆ 8.30ರ ಸುಮಾರಿಗೆ ರಾಂಬನ್ ಜಿಲ್ಲೆಯ ಸೆರಿ ಬಳಿಯ ತನ್ನ ಕಂಪೆನಿಯ ಪ್ರಧಾನ ಕಚೇರಿಯ ಹೊರಗೆ ಭೂಕುಸಿತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಸಂಭವಿಸಿದಾಗ ಮೃತರು ಉಪಹಾರಕ್ಕಾಗಿ ಕಂಪೆನಿಯ ಮೆಸ್‍ಗೆ ತೆರಳುತ್ತಿದ್ದರು ಎಂದು ಅವರು ಹೇಳಿದರು. ಅವರ ದೇಹವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. 270 ಕಿಮೀ ಉದ್ದದ ಹೆದ್ದಾರಿ, ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಎಲ್ಲಾ ಹವಾಮಾನ ರಸ್ತೆಯಾಗಿದ್ದು, ಬನಿಹಾಲ್ ಬಳಿಯ ಕಿಶ್ತ್ವಾರಿ ಪಥೆರ್‍ನಲ್ಲಿ ಹೊಸ ಭೂಕುಸಿತದ ನಂತರ ನಾಲ್ಕನೇ ದಿನವೂ ಮುಚ್ಚಲಾಗಿದೆ ಎಂದು ಸಂಚಾರ ವಿಭಾಗದ ಅಕಾರಿಯೊಬ್ಬರು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರೇ ಬಿಜೆಪಿಗೆ ಬರುವ ಸಾಧ್ಯತೆ ಇದೆ : ಯತ್ನಾಳ್

ಮರುಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಮತ್ತು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ರಾಂಬನ್ ಮತ್ತು ಬನಿಹಾಲ್ ನಡುವಿನ 12 ಸ್ಥಳಗಳಲ್ಲಿ ಭಾರೀ ಮಳೆಯಿಂದ ಉಂಟಾದ ಅನೇಕ ಭೂಕುಸಿತಗಳ ನಂತರ ಆಯಕಟ್ಟಿನ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು.

RELATED ARTICLES

Latest News