Monday, September 8, 2025
Homeಕ್ರೀಡಾ ಸುದ್ದಿ | Sportsವೈಲ್ಡ್ ಆದ ಕೂಲ್‌ ಕ್ಯಾಪ್ಟನ್‌ ಧೋನಿ

ವೈಲ್ಡ್ ಆದ ಕೂಲ್‌ ಕ್ಯಾಪ್ಟನ್‌ ಧೋನಿ

Cool Captain Dhoni

ನವದೆಹಲಿ, ಸೆ.8- ಕ್ರಿಕೆಟ್‌ ಮೈದಾನದ ಒಳಗೆ ಅಥವಾ ಹೊರಗೆ ಸದಾ ಕೂಲ್‌ ಆಗಿರುವ ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್‌ ಧೋನಿ ಅವರು ವೈಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅದು ಯಾವುದೇ ಕ್ರಿಕೆಟ್‌ ಮೈದಾನದಲ್ಲಿ ಅಲ್ಲ, ಬದಲಿಗೆ ಅವರು ನಟಿಸುತ್ತಿರುವ ಚಿತ್ರದ ಟೀಸರ್‌ನ ದೃಶ್ಯದಲ್ಲಿ.

ನಟ ಮಾಧವನ್‌ ಹಾಗೂ ಮಹೇಂದ್ರಸಿಂಗ್‌ ಧೋನಿ ಅವರು ನಟಿಸುತ್ತಿರುವ ಹೊಸ ಚಿತ್ರದಲ್ಲಿ ಇಬ್ಬರೂ ಟಾಸ್ಕ್‌ ಪೋರ್ಸ್‌ ಆಫೀಸರ್‌ಗಳಾಗಿ ನಟಿಸುತ್ತಿದ್ದು , ಈ ಚಿತ್ರದ ಟೀಸರ್‌ ಅನ್ನು ಮಾಧವನ್‌ ಅವರು ತಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದಾರೆ.

ಈಗ ಬಿಡುಗಡೆಗೊಂಡಿರುವ ಟೀಸರ್‌ನಲ್ಲಿ ಎಂ.ಎಸ್‌‍.ಧೋನಿ ಅವರು ಕೈಯಲ್ಲಿ ಗನ್‌ ಹಿಡಿದು ವೈರಿಗಳ ಮೇಲೆ ಫೈರಿಂಗ್‌ ಮಾಡುತ್ತಿದ್ದು, ಈ ದೃಶ್ಯವನ್ನು ಕಂಡಿರುವ ಎಂಎಸ್‌‍ಡಿ ಅಭಿಮಾನಿಗಳು ಈ ಸಿನಿಮಾ ಯಾವುದು ಹಾಗೂ ಚಿತ್ರ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕುತ್ತಿದ್ದಾರೆ. ಒಟ್ಟಾರೆ ಎಂಎಸ್‌‍ಡಿ ಕ್ರಿಕೆಟಿಗೂ ಸೈ ನಟನೆಗೂ ಜೈ ಎಂದು ತೋರಿಸಲು ಹೊರಟಿದ್ದಾರೆ.

RELATED ARTICLES

Latest News