ಬೆಂಗಳೂರು,ಜು.29-ಗಾಂಜಾ ಕಳ್ಳ ಸಾಗಣೆ ಮಾಡುತ್ತಿದ್ದ ಆರು ಮಂದಿ ಅಂತರ ರಾಜ್ಯಚೋರರನ್ನು ಬಂಽಸಿರುವ ಕಾಟನ್‌ಪೇಟೆ ಠಾಣೆ ಪೊಲೀಸರು 42 ಲಕ್ಷ ವೌಲ್ಯದ 53.5 ಕೆ.ಜಿ ಗಾಂಜಾ, 9ಮೊಬೈಲ್, 10ಸಿಮ್‌ಕಾರ್ಡ್, 1ಲ್ಯಾಪ್‌ಟಾಪ್, 1 ಗೂಡ್ಸ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ಬಿಹಾರದ ದೀಪಕ್‌ಕುಮಾರ್(22), ಅಮರನಾಥ್(61), ರಾಜಸ್ಥಾನದ ಶಂಕರ್ ಲಾಲ್(36) ಮತ್ತು ಒಡಿಸ್ಸಾದ ನೂರುದ್ದೀನ್ ದುಲೈ(38), ಜಾರ್ಖಂಡ್ ನಿವಾಸಿಗಳಾದ ಬಸಂತ್‌ಕುಮಾರ್(35) ಮತ್ತು ಅಜಿತ್ ಸಿಂಗ್(43) ಬಂ ತ ಆರೋಪಿಗಳು.
ಕಳೆದ ಜು.12 ರಂದು ಠಾಣೆ ಸರಹದ್ದಿನ ಪಶುವೈದ್ಯ ಆಸ್ಪತ್ರೆಯ ಹಿಂಭಾಗದಲ್ಲಿ ಗೂಡ್‌್ಸ ಆಟೋವೊಂದರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಕಾರ್ಯಾಚರಣೆ ಕೈಗೊಂಡ ಕಾಟನ್ ಪೇಟೆ ಪೊಲೀಸರು ರಾಜಸ್ಥಾನ ಮತ್ತು ಒಡಿಸ್ಸಾ ಮೂಲದ ಇಬ್ಬರನ್ನು ವಾಹನ ಸಮೇತ ವಶಕ್ಕೆ ಪಡೆದಿದ್ದರು.
ಗೂಡ್‌್ಸ ಆಟೋವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ 53.5 ಕೆ.ಜಿ ಗಾಂಜಾ ಪತ್ತೆಯಾಗಿತ್ತು ನಂತರ ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ, ಗಾಂಜಾವನ್ನು ಆಂದ್ರಪ್ರದೇಶದ ಶಾಖಪಟ್ಟಣಂನಿಂದ ಬಸ್ ಮತ್ತು ಕಾರ್ಗೋ ಸೇವೆಗಳ ಮೂಲಕ ಬೆಂಗಳೂರಿಗೆ ತರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ದೆಹಲಿ, ಪುಣೆ ಮತ್ತು ಹೈದರಾಬಾದ್ ನಗರಗಳಿಗೆ ಇತರೆ ನಾಲ್ವರು ಸಹಚರರ ಜೊತೆ ಸೇರಿಕೊಂಡು, ಸಾಗಾಣೆ ಮತ್ತು ಮಾರಾಟ ಮಾಡುತ್ತಿರುವುದು ತನಿಖೆಯ ವೇಳೆಯಲ್ಲಿ ತಿಳಿದು ಬಂದಿದೆ.
ತನಿಖೆಯನ್ನು ಮುಂದುವರೆಸಿ ಜು.17 ರಂದು ಮತ್ತೊಬ್ಬನನ್ನು ವೈಟ್‌ಫೀಲ್‌್ಡನಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ಇನ್ನೂಮೂವರು ವ್ಯಕ್ತಿಗಳ ಬಗ್ಗೆ ಮಾತಿಯನ್ನು ನೀಡಿದ್ದ.
ಕಾರ್ಯಾಚರಣೆ ಕೈಗೊಂಡು ಜು.18ರಂದು ಮುಂಬೈನಲ್ಲಿ ಒಬ್ಬನನ್ನು,ನವದೆಹಲಿಯಲ್ಲಿ ಮತ್ತೊಬ್ಬನನ್ನು ವಶಕ್ಕೆ ಪಡೆಯಲಾಯಿತು.ಈ ಪ್ರಕರಣದ ಪ್ರಮುಖ ಆರೋಪಿಯನ್ನು ಜು.26 ರಂದು ಬಿಹಾರದ ಹಾಜಿಪುರದಲ್ಲಿ ವಶಕ್ಕೆ ಪಡೆಯಲಾಯಿತು ಎಂದು ಪೊಲೕಸರು ಮಾಹಿತಿ ನೀಡಿದ್ದಾರೆ.
ಈತನು ತನ್ನ ಸಹಚರರನ್ನು ವಿವಿಧ ರಾಜ್ಯದ ಕಾರ್ಗೋ ಕಂಪನಿಗಳಲ್ಲಿ ನೇಮಿಸಿದ್ದು, ವಿಶಾಖಪಟ್ಟಣಂನ ತನ್ನ ಸಹಚರರಿಂದ ಗಾಂಜಾವನ್ನು ಖರೀದಿಸಿ, ಬಸ್‌ಗಳ ಮುಖಾಂತರ ಬೆಂಗಳೂರಿಗೆ ಸಾಗಿಸುತ್ತಿದ್ದರು.
ಮುಂದುವರೆದು ಬೆಂಗಳೂರಿಗೆ ತಲುಪಿದ ಬಸ್‌ನ ಕಾರ್ಗೋ ಸೇವಾ ಕಛೇರಿಯಿಂದ ಇತರೆ ಇಬ್ಬರು ಸಹಚರರು ಪಾರ್ಸೆಲ್‌ಗಳನ್ನು ಸ್ವೀಕರಿಸಿದ ನಂತರ ಬೇರೊಂದು ಕಾರ್ಗೋ ಅಥವಾ ರೈಲಿನ ಮೂಲಕ ದೆಹಲಿಗೆ ನಕಲಿ ಜಿ.ಎಸ್.ಟಿ ಬಿಲ್‌ಗಳ ಮೂಲಕ ಕಳುಸುತ್ತಿದ್ದರು. ದೆಹಲಿ ಮೂಲದ ಸಹಚರನು ಈ ಗಾಂಜಾವನ್ನು ಪಡೆದು ಮಾರಾಟ ಮಾಡುತ್ತಿರುವುದಾಗಿ ಗೊತ್ತಾಗಿದೆ.ಮತ್ತು ತನಿಖೆ ಪ್ರಗತಿಯಲ್ಲಿದೆ.
ಬೆಂಗಳೂರು ನಗರದ ಪೊಲೀಸರು ದೆಹಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಜಾರ್ಖಂಡ್ ಪೊಲೀಸರೊಂದಿಗೆ ಹಾಗೂ ನಾರ್ಕೋಟಿಕ್‌್ಸ ಕಂಟ್ರೋಲ್ ಬ್ಯೂರೋ (ಎನ್.ಸಿ.ಬಿ) ರವರೊಂದಿಗೆ ಮಾಹಿತಿಯನ್ನ ವಿನಿಮಯ ಮಾಡಿಕೊಂಡು, ಈ ಜಾಲವನ್ನು ಸಂಪೂರ್ಣವಾಗಿ ಭೇದಿಸಲು ಕ್ರಮ ಕೈಗೊಳ್ಳುತ್ತಿದೆ.
ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಾಣೆ, ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಮತ್ತು ಸಮನ್ವಯತೆಯನ್ನು ಸಾಽಸಿರುವುದು ಕಂಡುಬರುತ್ತದೆ. ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತರ ವಂಶಿಕೃಷ್ಣ ಅವರ ಉಸ್ತುವಾರಿಯಲ್ಲಿ ಪಶ್ಚಿಮ ವಿಭಾದ ಡಿಸಿಪಿ ಎನ್. ಗಿರೀಶ್ ಅವರ ಮಾರ್ಗದರ್ಶನದಲ್ಲಿ ಎಸಿಪಿ ಕೆ.ಎಂ. ರಮೇಶ್, ಕಾಟನ್‌ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಯರ್ರಿಸ್ವಾಮಿ ಹಾಗೂ ಅವರ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-07-2025)
- ಬೆಂಗಳೂರಿನಾದ್ಯಂತ ನಾಗರ ಪಂಚಮಿ ಸಂಭ್ರಮ
- ರಾಷ್ಟ್ರಪತಿ ಅಧಿಕಾರ ಕುರಿತ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ
- ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ ಖರ್ಗೆ ಹೇಳಿಕೆ
- ನಟಿ ರಮ್ಯಾ ದೂರಿನ ಬಗ್ಗೆ ಡಿಸಿಪಿ ನೇತೃತ್ವದಲ್ಲಿ ತನಿಖೆ