ಭೋಪಾಲ್,ಅ.5-ಮಧ್ಯಪ್ರದೇಶದಲ್ಲಿ 14 ಮಕ್ಕಳು ಸಾವಿನ ಬಗ್ಗೆ ತನಿಖೆ ವೇಳೆ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಲ್ಲಿ ಹೆಚ್ಚು ವಿಷಕಾರಿ ವಸ್ತು ಇರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಸುಮಾರು 6 ರಾಜ್ಯಗಳಲ್ಲಿ ಸಿರಪ್‌ಗಳು,ಮಾತ್ರೆ ಸೇರಿದಂತೆ 19 ಔಷಧಿಗಳ ಉತ್ಪಾದನಾ ಘಟಕಗಳಲ್ಲಿ ಅಪಾಯ ಆಧಾರಿತ ತಪಾಸಣೆಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ಪರೀಕ್ಷಿಸಿದ ಸಿರಪ್‌ನ ಮಾದರಿಯನ್ನು ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯವು ಪ್ರಮಾಣಿತ ಗುಣಮಟ್ಟದಲ್ಲಿಲ್ಲ ಎಂದು ಘೋಷಿಸಿದೆ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ.
ಈ ಸಿರಪ್ ಕುಡಿದು ಮೂತ್ರಪಿಂಡ ವೈಫಲ್ಯದಿಂದಾಗಿ ಚಿಂದ್ವಾರ ಜಿಲ್ಲೆಯಲ್ಲಿ 14 ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿದೆ.
ಇನ್ನು ನಾಗ್ಪುರದಲ್ಲಿ ದಾಖಲಾಗಿರುವ ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.
ಮೃತ ಮಕ್ಕಳ ಪೋಷಕರಿಗೆ ತಲಾ 4 ಲಕ್ಷ ರೂ ತಾತ್ಕಾಲಿಕ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುನ್ನೆಚ್ಚರಿಕೆ ಕ್ರಮವಾಗಿ, ಸ್ಥಳೀಯ ಆಡಳಿತವು ಈಗಾಗಲೆ ಕೋಲ್ಡ್ರಿಫ್ ಮತ್ತು ಇನ್ನೊಂದು ಕೆಮ್ಮಿನ ಸಿರಪ್ ನೆಕ್ಸಾ-ಡಿಎಸ್‌ಮಾರಾಟವನ್ನು ನಿಷೇಧಿಸಿದೆ ಎಂದು ಎಸ್‌ಡಿಎಂ ಯಾದವ್ ಹೇಳಿದರು. ಕೋಲ್ಡ್ರಿಫ್‌ನ ಪರೀಕ್ಷಾ ವರದಿ ಬಂದಿದ್ದು ಆದರೆ ನೆಕ್ಸಾ-ಡಿಎಸ್‌ನ ವರದಿಗಾಗಿ ಕಾಯಲಾಗಿದೆ.
ತಮಿಳುನಾಡು ಔಷಧ ನಿಯಂತ್ರಣ ಅಧಿಕಾರಿಗಳು, ಅ.2 ರಂದು ತಮ್ಮ ವರದಿಯಲ್ಲಿ, ಕಾಂಚೀಪುರಂನ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಕೋಲ್ಡ್ರಿಫ್ ಸಿರಪ್ ಮಾದರಿಯನ್ನು (ಬ್ಯಾಚ್ ಸಂಖ್ಯೆ -13; : ಮೇ 2025; ಅವಧಿ: ಏಪ್ರಿಲ್ 2027) ಕಲಬೆರಕೆ ಮಾಡಲಾಗಿದೆ ಎಂದು ಘೋಷಿಸಿದರು
ಲಭ್ಯವಿರುವ ಯಾವುದೇ ಸ್ಟಾಕ್ ಅನ್ನು ತಕ್ಷಣವೇ ವಶಪಡಿಸಿಕೊಳ್ಳಲು ಸೂಚನೆಗಳನ್ನು ನೀಡಿತು. ಸ್ರೆಸನ್ ಫಾರ್ಮಾಸ್ಯುಟಿಕಲ್‌್ಸ ತಯಾರಿಸಿದ ಇತರ ಉತ್ಪನ್ನಗಳನ್ನು ಪರೀಕ್ಷೆಯ ಬಾಕಿ ಇರುವಾಗ ಮಾರಾಟದಿಂದ ತೆಗೆದುಹಾಕುವಂತೆಯೂ ಆದೇಶಿಸಿತು. ಮಧ್ಯಪ್ರದೇಶವಲ್ಲದೆ ಮತ್ತು ರಾಜಸ್ಥಾನದಲ್ಲಿ ಮೂರು ಮಕ್ಕಳುಇದೇ ರೀತಿಯ ಸಾವುಗಳು ವರದಿಯಾಗಿದೆ. ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ, ಆದರೆ ಸಿರಪ್‌ನ ಕಲಬೆರಕೆ ಮತ್ತು ಮಾಲಿನ್ಯದ ಕುರಿತು ಹೆಚ್ಚಿನ ಪರೀಕ್ಷೆಗಳು ನಡೆಯುತ್ತಿವೆ.