ಹೈದರಾಬಾದ್,ಅ. 29 (ಪಿಟಿಐ) ಮನೆಯಲ್ಲಿ ಇಟ್ಟಿದ್ದ ಪಟಾಕಿ ಸ್ಪೋಟಿಸಿ ದಂಪತಿ ಮೃತಪಟ್ಟಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಇಲ್ಲಿನ ಮನೆಯಲ್ಲಿ ಇರಿಸಲಾಗಿದ್ದ ಪಟಾಕಿಗಳಿಗೆ ಬೆಂಕಿ ತಗುಲಿದ ಪರಿಣಾಮ ಬೆಂಕಿ ಅವಘಡದಲ್ಲಿ ಓರ್ವ ವ್ಯಕ್ತಿ ಮತ್ತು ಆತನ ಪತ್ನಿ ಉಸಿರುಗಟ್ಟಿ ಸಾವನ್ನಪ್ಪಿದ್ದು, ಮತ್ತೊಬ್ಬ ಕುಟುಂಬದ ಸದಸ್ಯ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಡರಾತ್ರಿ ದೀಪಾವಳಿ ಹಬ್ಬಕ್ಕೆ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದಾಗ ಗ್ಯಾಸ್ ಸ್ಟೌವ್‌ನಿಂದ ಕಿಡಿಗಳು ಸಿಡಿದ ಪಟಾಕಿ ಪೆಟ್ಟಿಗೆಯ ಮೇಲೆ ಬಿದ್ದು ಹೊಗೆ ಎರಡು ಕೋಣೆಗಳ ಮನೆಗೆ ವ್ಯಾಪಿಸಿ ದಂಪತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮನೆಯಲ್ಲಿದ್ದ ಮತ್ತೊಬ್ಬ ಬಾಲಕಿ ಉಸಿರುಗಟ್ಟಿದ್ದು ಅಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ರೇನ್ ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರು 50ರ ಆಸುಪಾಸಿನವರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ