Friday, August 29, 2025
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಕಡಿಮೆ ದರದಲ್ಲಿ ಸಿಮೆಂಟ್‌-ಕಬ್ಬಿಣ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ಹಣದೊಂದಿಗೆ ದಂಪತಿ ಎಸ್ಕೇಪ್

ಕಡಿಮೆ ದರದಲ್ಲಿ ಸಿಮೆಂಟ್‌-ಕಬ್ಬಿಣ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ಹಣದೊಂದಿಗೆ ದಂಪತಿ ಎಸ್ಕೇಪ್

Couple escapes with crores of rupees by promising to provide cement and iron at low prices

ಮೈಸೂರು,ಆ.29- ಕಡಿಮೆ ದರದಲ್ಲಿ ಸಿಮೆಂಟ್‌ ಹಾಗೂ ಕಬ್ಬಿಣ ಕೊಡಿಸುವುದಾಗಿ 16 ಮಂದಿಯನ್ನು ನಂಬಿಸಿದ ದಂಪತಿ 2,30,85,000 ವಂಚಿಸಿ ಪರಾರಿಯಾದ ಘಟನೆ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿ ನಡೆದಿದೆ.ಈ ಸಂಬಂಧ ವಂಚನೆಗೆ ಒಳಗಾದ 16 ಮಂದಿ ಕುವೆಂಪುನಗರ ಪೊಲೀಸ್‌‍ ಠಾಣೆಯಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾತ್ರೋ ರಾತ್ರಿ ದಂಪತಿ ಮನೆ ಹಾಗೂ ಮಳಿಗೆ ಬೀಗ ಹಾಕಿ ಎಸ್ಕೇಪ್‌ ಆಗಿದ್ದಾರೆ.
ಶ್ರೀರಾಂಪುರದಲ್ಲಿರುವ ಶುಭಂ ಸ್ಟೀಲ್ಸ್ ಅಂಡ್‌ ಸಿಮೆಂಟ್‌್ಸಮತ್ತು ಬಿಲ್ಡರ್ಸ್‌ ಸಂಸ್ಥೆಯ ಮಾಲೀಕ ಮೇನಕ ಪ್ರಿಯಾ ಹಾಗೂ ಪತಿ ಶಣುಖ ಮುತ್ತುಸ್ವಾಮಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಸದ್ಯ ದಂಪತಿ ತಲೆ ಮರೆಸಿಕೊಂಡಿದ್ದಾರೆ.

ಕೆ.ಆರ್‌.ಮೊಹಲ್ಲ ಬಸವೇಶ್ವರ ರಸ್ತೆಯ ನಿವಾಸಿ ಬಿಲ್ಡರ್‌ ಶರತ್‌ ಸೇರಿದಂತೆ 16 ಮಂದಿ ವಂಚನೆಗೆ ಒಳಗಾಗಿದ್ದಾರೆ.ಶಣುಖ ಮುತ್ತುಸ್ವಾಮಿ ಆಕಸಿಕವಾಗಿ ಶರತ್‌ಗೆ ಪರಿಚಯ ಆಗಿದ್ದಾರೆ. ಶುಭಂ ಸ್ಟೀಲ್ಸ್ ಮತ್ತು ಸಿಮೆಂಟ್‌್ಸ ನನ್ನ ಪತ್ನಿ ಮೇನಕಾ ಪ್ರಿಯಾ ಮಾಲೀಕಳು ಎಂದು ತಿಳಿಸಿದ್ದಾರೆ.

ಕಬ್ಬಿಣ ಹಾಗೂ ಸಿಮೆಂಟ್‌ ಗಳನ್ನ ಕಡಿಮೆ ಬೆಲೆಗೆ ತಮಿಳುನಾಡಿನಿಂದ ತರಿಸಿಕೊಡುವುದಾಗಿ ಶರತ್‌ಗೆ ನಂಬಿಸಿದ್ದಾನೆ. ಶಣುಖಸ್ವಾಮಿ ಮಾತನ್ನು ನಂಬಿದ ಶರತ್‌ ಹಂತ ಹಂತವಾಗಿ ಲಕ್ಷಾಂತರ ಹಣ ಕೊಟ್ಟಿದ್ದಾರೆ. ನಂತರ ಇವರ 15 ಸ್ನೇಹಿತರಿಂದಲೂ ಹಂತಹಂತವಾಗಿ 2,30,85,000 ರೂಗಳನ್ನ ಕೊಡಿಸಿದ್ದಾರೆ.

ಹಣ ಕೊಟ್ಟು ತಿಂಗಳುಗಳು ಉರುಳಿದರೂ ಕಬ್ಬಿಣ, ಸಿಮೆಂಟ್‌ ಬಂದಿಲ್ಲ. ತಮಿಳುನಾಡಿನ ಕಂಪನಿಯಲ್ಲಿ ಬುಕ್‌ ಮಾಡಿರುವುದಾಗಿ ಸುಳ್ಳು ಹೇಳಿಕೊಂಡೇ ಷಣುಖಮುತ್ತುಸ್ವಾಮಿ ನಂಬಿಸಿದ್ದಾರೆ. ಮೂರು ದಿನಗಳ ಹಿಂದೆ ಷಣುಖ ಮುತ್ತುಸ್ವಾಮಿ ಮನೆಗೆ ಶರತ್‌ ಹೋದಾಗ ರಾತ್ರೋ ರಾತ್ರಿ ಮನೆ ಖಾಲಿ ಮಾಡಿರುವುದು ಗೊತ್ತಾಗಿದೆ. ಅಂಗಡಿಗೂ ಬೀಗ ಬಿದ್ದಿದೆ. ತಾವು ವಂಚನೆಗೆ ಒಳಗಾಗಿರುವುದು ಖಚಿತವಾದ ನಂತರ ಶರತ್‌ ಹಾಗೂ 15 ಸ್ನೇಹಿತರು ಕುವೆಂಪುನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Latest News