ಬೆಂಗಳೂರು,ಏ.17- ಸಂಜಯ್‌ನಗರದ ಡಾಲರ್ಸ್ ಕಾಲೋನಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ದಂಪತಿ ಶವ ಪತ್ತೆಯಾಗಿವೆ.ಮೃತ ದಂಪತಿಯವರನ್ನು ಯಾದಗಿರಿ ತಾಲ್ಲೂಕಿನ ಮೆಹಬೂಬ್ (45) ಮತ್ತು ಪರ್ವಿನ್ (35) ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ಈ ಕಟ್ಟಡದಲ್ಲಿ ದಂಪತಿಗಳಾದ ಮೆಹಬೂಬ್ ಗಾರೆ ಮೇಸಿ ಕೆಲಸ, ಪರ್ವಿನ್ ಗಾರೆ ಕೆಲಸ ಮಾಡುತ್ತಿದ್ದರು.
ಇತ್ತೀಚೆಗೆ ರಂಜಾನ್ ಹಬ್ಬದ ಅಂಗವಾಗಿ ಊರಿಗೆ ಹೋಗಿ ದಂಪತಿ ಬಂದಿದ್ದರು.ಈ ನಡುವೆ ನಿರ್ಮಾಣ ಹಂತದ ಕಟ್ಟಡದಲ್ಲಿ ಕಳೆದ ಮೂರು ದಿನಗಳ ಹಿಂದೆ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.ಅಕ್ಕ ಪಕ್ಕದ ನಿವಾಸಿಗಳಿಗೆ ಕೆಟ್ಟ ವಾಸನೆ ಬರುತ್ತಿರುವುದು ಗಮನಿಸಿ ಇಂದು ಬೆಳಿಗ್ಗೆ ಸಂಜಯ್‌ನಗರ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಮೆಹಬೂಬ್ ಅವರ ಶವ ನೆಲದ ಮೇಲೆ ಕಂಡುಬಂದರೆ, ಪರ್ವಿನ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಅಲ್ಲದೆ ಮೆಹಬೂಬ್ ದೇಹದ ಮೇಲೆ ಗಾಯದ ಗುರುತುಗಳಿವೆ.
ದಂಪತಿ ನಡುವೆ ಜಗಳವಾಗಿ ಹೊಡೆದಾಡಿಕೊಂಡು ಮೆಹಬೂಬ್ ಸಾವನ್ನಪ್ಪಿರಬಹುದು. ನಂತರ ಪರ್ವಿನ್ ಆತಹತ್ಯೆ ಮಾಡಿಕೊಂಡಿರಬಹುದು ಅಥವಾ ದುಷ್ಕರ್ಮಿಗಳು ಮೆಹಬೂಬ್‌ನನ್ನು ಕೊಲೆ ಮಾಡಿ, ಪರ್ವಿನ್‌ನನ್ನು ನೇಣು ಹಾಕಿ ಪರಾರಿಯಾಗಿರಬಹುದೆಂಬ ಶಂಖೆ ವ್ಯಕ್ತವಾಗಿದೆ. ಸ್ಥಳಕ್ಕೆ ಡಿಸಿಪಿ, ಇನ್‌್ಸಪೆಕ್ಟರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಇಬ್ಬರ ಮೃತದೇಹಗಳನ್ನ ರಾಮಯ್ಯ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.