Friday, November 22, 2024
Homeಜಿಲ್ಲಾ ಸುದ್ದಿಗಳು | District Newsಉತ್ತರಾಖಂಡ ಚಾರಣ ದುರಂತದಲ್ಲಿ ಹುಟ್ಟಿದ ದಿನವೇ ಸಾವನ್ನಪ್ಪಿದ ಹುಬ್ಬಳ್ಳಿಯ ದಂಪತಿ

ಉತ್ತರಾಖಂಡ ಚಾರಣ ದುರಂತದಲ್ಲಿ ಹುಟ್ಟಿದ ದಿನವೇ ಸಾವನ್ನಪ್ಪಿದ ಹುಬ್ಬಳ್ಳಿಯ ದಂಪತಿ

ಹುಬ್ಬಳ್ಳಿ,: ಉತ್ತರಾಖಂಡದ ಸಹಸ್ರತಾಲ್ ಶಿಖರಕ್ಕೆ ಟ್ರಕ್ಕಿಂಗ್ ತೆರಳಿದ್ದ ರಾಜ್ಯದ 22 ಜನರಲ್ಲಿ 9 ಮಂದಿ ಮೃತಪಟ್ಟಿದ್ದು, ಇದರಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ದಂಪತಿಯೂ ಸೇರಿದ್ದಾರೆ. ಹುಬ್ಬಳ್ಳಿಯ ವಿನಾಯಕ ಮುಂಗರವಾಡಿ ಹಾಗೂ ಸುಜಾತಾ ಮುಂಗರವಾಡಿ ಮೃತ ದುರ್ದೈವಿಗಳು. ವಿಶೇಷವೆಂದರೆ, ಇವರಿಬ್ಬರ ಹುಟ್ಟಿದ ದಿನಾಂಕವೂ ಒಂದೇ. ಆದರೆ, ಹುಟ್ಟಿದ ವರ್ಷ ಬೇರೆ ಇದೆ. ವಿನಾಯಕ ಜನ್ಮ ದಿನಾಂಕ 03-10-1969 ಆದರೆ, ಸುಜಾತಾ ಮುಂಗರವಾಡಿ ಜನ್ಮ ದಿನಾಂಕ 03-10-1972 ಆಗಿದೆ. ಇಬ್ಬರೂ ಒಂದೇ ದಿನ ಮೃತಪಟ್ಟಿದ್ದು ಕಾಕತಾಳೀಯ.

ಚಾರಣಕ್ಕೆ ಹೋದ 22 ಮಂದಿಯ ಪೈಕಿ ಹುಬ್ಬಳ್ಳಿಯಲ್ಲಿ ವಾಸವಿದ್ದ ದಂಪತಿ ಜೂನ್ ನಾಲ್ಕರಂದು ಮೃತಪಟ್ಟಿದ್ದಾರೆ. ಮೃತ ದಂಪತಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್‌ನಲ್ಲಿ 1994ರಲ್ಲಿ ಇಂಜಿನೀಯರಿಂಗ್ ಪದವಿ ಪಡೆದಿದ್ದರು‌. ಇಬ್ಬರೂ 1996 ರಲ್ಲಿ ಉದ್ಯೋಗ ಅರಿಸಿಕೊಂಡು ಬೆಂಗಳೂರಿಗೆ ಹೋಗಿದ್ದರು.

ಸಮಾಜ ಸೇವೆಯಲ್ಲೂ ಮುಂದುಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ಎಂಬ ಸಂಸ್ಥೆ ಹುಟ್ಟು ಹಾಕಿದ್ದ ವಿನಾಯಕ ಮುಂಗರವಾಡಿ, ಸುಜಾತಾ ಮುಂಗರವಾಡಿ ದಂಪತಿ ಸಮಾಜ ಸೇವೆಯಲ್ಲಿಯೂ ಮುಂದಿದ್ದರು. ಪ್ರತಿ ವರ್ಷ ಚಾರಣಕ್ಕೆ ಹೋಗುತ್ತಿದ್ದರು.

ದೊರೆಯದ ಟಿಕೆಟ್, ಮಕ್ಕಳು ಜೀವ ಉಳಿಯಿತು :
ಈ ಬಾರಿ ಮಕ್ಕಳನ್ನು ಕೂಡ ಚಾರಣಕ್ಕೆ ಕರೆದೊಯ್ಯಲು ದಂಪತಿ ಯೋಜನೆ ಹಾಕಿಕೊಂಡಿದ್ದರು. ಆದರೆ, ಅವರಿಗೆ ಕೇವಲ 2 ಟಿಕೆಟ್ ಮಾತ್ರ ದೊರೆತಿತ್ತು. ಹೀಗಾಗಿ ದಂಪತಿ ಮಾತ್ರ ಚಾರಣಕ್ಕೆ ಹೋಗಿದ್ದರು.

ಚಾರಣದ ವೇಳೆ ಸಾವಿಗೀಡಾದವರ ಪಾರ್ಥಿವ ಶರೀರವನ್ನು ತವರಿಗೆ ತರುವ ಪ್ರಕ್ರಿಯೆ ಮುಂದುವರಿದಿದೆ. ಸದ್ಯ, ಪತ್ತೆಯಾಗಿರುವ 9 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈಗಾಗಲೇ ದೆಹಲಿಯಿಂದ ಎರಡು ಪ್ರತ್ಯೇಕ ಇಂಡಿಗೋ ವಿಮಾನಗಳಲ್ಲಿ 4 ಮೃತದೇಹಗಳನ್ನು ಬೆಂಗಳೂರಿಗೆ ತರಲಾಗಿದೆ. ಇನ್ನು ಅಂತ್ಯಕ್ರಿಯೆನ್ನ ಯಾವಾಗ ಮಾಡತಾರ ಎಂಬಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಬೇಕಾಗಿದೆ

RELATED ARTICLES

Latest News