Thursday, August 14, 2025
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಟ್ರೀಡಿಂಗ್‌ ಲಿಂಕ್‌ ಒತ್ತಿ 69 ಲಕ್ಷ ರೂ. ಕಳೆದುಕೊಂಡ ದಂಪತಿ

ಟ್ರೀಡಿಂಗ್‌ ಲಿಂಕ್‌ ಒತ್ತಿ 69 ಲಕ್ಷ ರೂ. ಕಳೆದುಕೊಂಡ ದಂಪತಿ

Couple loses Rs 69 lakh by clicking on trading link

ಮೈಸೂರು,ಆ.14– ಶೇರು ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ ತೋರಿಸಿ ವೃದ್ದ ದಂಪತಿಗೆ 69.67 ಲಕ್ಷ ವಂಚಿಸಿರುವ ಪ್ರಕರಣ ಸೆನ್‌ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿದೆ.
ಶ್ರೀರಾಂಪುರ ನಿವಾಸಿ ಮಹದೇವ್‌ ಸಿಂಗ್‌(63) ಹಾಗೂ ಇವರ ಪತ್ನಿ ಹಣ ಕಳೆದುಕೊಂಡ ದಂಪತಿ.

ಫೇಸ್ ಬುಕ್‌ ನಲ್ಲಿ ಶೇರು ಟ್ರೀಡಿಂಗ್‌ ಬಗ್ಗೆ ಬಂದ ಲಿಂಕ್‌ ನಂಬಿದ ದಂಪತಿ ವಂಚಕರು ಸೂಚಿಸಿದಂತೆ ವಿವಿಧ ಹಂತಗಳಲ್ಲಿ ಹಣ ಹೂಡಿದ್ದಾರೆ.ಮಹದೇವ್‌ ಸಿಂಗ್‌ ರವರು ತಮ ಖಾತೆಯಿಂದ 52,27,331 ರೂ. ವರ್ಗಾಯಿಸಿದ್ದಾರೆ. ಇವರ ಪತ್ನಿ ಖಾತೆಯಿಂದ 17,40,000 ರೂ. ವರ್ಗಾಯಿಸಿದ್ದಾರೆ.

ಲಾಭದ ಹಣ ಡ್ರಾ ಮಾಡಲು ಮುಂದಾದಾಗ ತೆರಿಗೆ ಹಾಗೂ ಮಾರ್ಜಿನ್‌ ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ.ಆಗ ವಂಚನೆಗೆ ಒಳಗಾಗಿರುವುದು ಖಚಿತವಾಗಿ ಮಹದೇವ್‌ ಸಿಂಗ್‌ ರವರು ಸೆನ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Latest News