Saturday, February 22, 2025
Homeಬೆಂಗಳೂರುವೀಸಾ ಕೂಡಿಸುವುದಾಗಿ ಕೋಟ್ಯಾಂತರ ರೂ. ಪಡೆದು ವಂಚಿಸಿದ್ದ ದಂಪತಿ ಸೆರೆ

ವೀಸಾ ಕೂಡಿಸುವುದಾಗಿ ಕೋಟ್ಯಾಂತರ ರೂ. ಪಡೆದು ವಂಚಿಸಿದ್ದ ದಂಪತಿ ಸೆರೆ

Couple who cheated by promising to get visas arrested

ಬೆಂಗಳೂರು,ಫೆ.21- ಹೊರ ದೇಶಗಳಿಗೆ ಹೋಗಲು ವೀಸಾ ಮಾಡಿಸಿಕೊಡುವುದಾಗಿ ನಂಬಿಸಿ, ಹಲವರಿಂದ ಕೋಟ್ಯಂತರ ರೂ. ಪಡೆದು ವಿದೇಶಗಳಲ್ಲಿ ಪ್ರವಾಸ ಮಾಡಿ ವಂಚಿಸಿದ್ದ ದಂಪತಿಯನ್ನು ಆಗ್ನೆಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿ 66 ಲಕ್ಷ ನಗದು ಸೇರಿದಂತೆ 80 ಲಕ್ಷ ಮೌಲ್ಯದ 24 ಗ್ರಾಂ ಚಿನ್ನಾಭರಣ, 2 ಕಾರು ಹಾಗೂ 2 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೋಸ ಮಾಡಿ ಪಡೆದ ಹಣದಲ್ಲಿ ಈ ದಂಪತಿ ಶ್ರೀಲಂಕಾ, ದುಬೈ, ಗೋವಾ, ಊಟಿ ಇನ್ನಿತರ ಕಡೆಗಳಲ್ಲಿ ಪ್ರವಾಸ ಮಾಡಿ ತಮ್ಮ ವಿಲಾಸಿ ಜೀವನಕ್ಕೆ ಬಳಕೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಬೇರೆ ದೇಶದಲ್ಲಿ ಜಾಕಿ ಕೆಲಸವನ್ನು ನಿರ್ವಸಲು ಯಾರಾದರೂ ವರ್ಕ್ ವೀಸಾ ಮಾಡಿಸಿಕೊಡುವವರು ಪರಿಚಯದ್ದಲ್ಲಿ ತಿಳಿಸುವಂತೆ ಪರಿಚಯವಿದ್ದ ಇಬ್ಬರು ವ್ಯಕ್ತಿಯೊಬ್ಬರಿಗೆ ತಿಳಿಸಿದ್ದರು.

ಒಮ್ಮೆ ಫೇಸ್ ಬುಕ್‌ನ್ನು ಬಳಕೆ ಮಾಡುತ್ತಿದ್ದಾಗ ವಿದೇಶಗಳಲ್ಲಿ ಜಾಕಿ ಮತ್ತು ಇತರೆ ಕೆಲಸ ನಿರ್ವಹಿಸುವ ಆಸಕ್ತರಿಗೆ ವೀಸಾ ಮಾಡಿಸಿಕೊಡುತ್ತೇವೆಂದು ಭಿತ್ತರಿಸಿದ್ದ ಜಾಹಿರಾತನ್ನು ಈ ವ್ಯಕ್ತಿ ನೋಡಿ ಫೋನ್ ಕರೆ ಮಾಡಿ ವಿಚಾರಿಸಿದ್ದಾರೆ. ವ್ಯಕ್ತಿಯೊಂದಿಗೆ ಮಾತನಾಡಿದ ಮಹಿಳೆ ಪ್ರತಿ ವೀಸಾ ಮಾಡಿಸಲು 8 ಲಕ್ಷ ಪಾವತಿಸಬೇಕೆಂದು ತಿಳಿಸಿದ್ದು, ಅದಕ್ಕೆ ಒಪ್ಪಿ ಹಣವನ್ನು ಪಾವತಿ ಮಾಡಿದ್ದಾರೆ. ಅದರಂತೆ ಇಬ್ಬರಿಗೂ ಸಹ ವೀಸಾಗಳನ್ನು ಮಾಡಿಸಿಕೊಟ್ಟಿರುತ್ತಾರೆ.

ನಂತರ ಮತ್ತೆ ಮೂವರಿಗೆ ವೀಸಾ ಮಾಡಿಸಿಕೊಡುವಂತೆ ಕೇಳಿದ್ದು, ಅದಕ್ಕೆ ಒಪ್ಪಿದ ದಂಪತಿ 24 ಲಕ್ಷ ಹಣವನ್ನು ಪಡೆದುಕೊಂಡು ವೀಸಾ ಮಾಡಿಸಿಕೊಟ್ಟಿಲ್ಲ. ಈ ಬಗ್ಗೆ ದಂಪತಿಯನ್ನು ವಿಚಾರಿಸಿದಾಗ ಎಂಬಸ್ಸಿಗೆ ಕಳುಸಿದ್ದಾಗಿ ಹೇಳಿದ್ದಾರೆ. ಆಗಾಗಿ ತಮಗೆ ಪರಿಚಯಸ್ಥರಾದ 33 ಜನರಿಂದ 1.78 ಕೋಟಿ ಹಣ ಹಾಗೂ ಪರಿಚಯಸ್ಥರಾದ ಮತ್ತೊಬ್ಬ ವ್ಯಕ್ತಿ 15 ಜನರಿಂದ 86 ಲಕ್ಷ ಹಣವನ್ನು ಪಡೆದುಕೊಂಡು ದಂಪತಿಯ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 2,64,20,000 ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಈ ಹಿಂದೆ ಎಂಬಸ್ಸಿಗೆ ಕಳುಹಿಸಿದ್ದ ವೀಸಾಗಳನ್ನು ಮಾಡಿಕೊಡಲು ತಡ ಮಾಡಿದ ಬಗ್ಗೆ ವಿಚಾರಿಸಿದಾಗ ನಕಲಿ ವೀಸಾ ದಾಖಲೆಗಳನ್ನು ಕಳುಹಿಸಿದ್ದು, ಆ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ದಾಖಲೆಗಳೆಂದು ಗೊತ್ತಾಗಿದೆ.

ತಕ್ಷಣ ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ವಂಚಕ ದಂಪತಿಯನ್ನು ತಿಲಕ್‌ ನಗರದಲ್ಲಿರುವ ಅವರ ವಾಸದ ಮನೆಯಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿ ಭಾಗಿಯಾಗಿರುವುದಾಗಿ ತಿಳಿಸಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.

ಪ್ರಕರಣದ ಆರೋಪಿತೆಯು ಬೆಂಗಳೂರಿನ ರೇಸ್ ಕೋರ್ಸ್‌ನಲ್ಲಿ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾಗ ಹೊರದೇಶದ ಹಾರ್ಸ್ ಜಾಕಿ ಒಬ್ಬರು ಪರಿಚಯವಾಗಿದ್ದು ಅವರು ವಿದೇಶಗಳಲ್ಲಿ ಹಾರ್ಸ್ ಜಾಕಿ ಮತ್ತು ಇತರೆ ಕೆಲಸ ನಿರ್ವಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ವೀಸಾ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದು, ಆಸಕ್ತ ವ್ಯಕ್ತಿಗಳನ್ನು ತಮಗೆ ಪರಿಚಯಿಸಿದಲ್ಲಿ ಒಂದು ವೀಸಾಗೆ 50 ಸಾವಿರ ಹಣ ಕಮಿಷನ್ ರೂಪದಲ್ಲಿ ಕೊಡುವುದಾಗಿ ತಿಳಿಸಿದ್ದರಿಂದ, ಅದಕ್ಕೆ ಒಪ್ಪಿ ಪ್ರಾರಂಭದಲ್ಲಿ ಇಬ್ಬರಿಗೆ ವೀಸಾ ಮಾಡಿಸಿಕೊಟ್ಟಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾರೆ.

ಅಲ್ಲದೇ ಹಲವರಿಗೆ ನಂಬಿಕೆ ಬರುವಂತೆ ನಟಿಸಿ ಒಟ್ಟು 51 ಜನರಿಂದ 2,64,20,000 ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದು, ಈ ರೀತಿ ಬಂದ ಹಣದಲ್ಲಿ 2 ಕಾರು, 2 ಬೈಕ್ ಖರೀದಿಸಿ, 50 ಲಕ್ಷ ಹಣವನ್ನು ನೀಡಿ ಮನೆ ಭೋಗ್ಯಕ್ಕೆ ಪಡೆದುಕೊಂಡು, ಇನ್ನುಳಿದ ಹಣದಲ್ಲಿ ಶ್ರೀಲಂಕಾ, ದುಬೈ, ಗೋವಾ, ಊಟಿ ಇನ್ನಿತರ ಕಡೆಗಳಲ್ಲಿ ಹೆಚ್ಚಿನ ಹಣವನ್ನು ತಮ್ಮ ವಿಲಾಸಿ ಜೀವನಕ್ಕೆ ಬಳಕೆ ಮಾಡಿದ್ದಾಗಿ ಆರೋಪಿ ದಂಪತಿ ತಿಳಿಸಿರುತ್ತಾರೆ.

ಈ ಕಾರ್ಯಾಚರಣೆಯನ್ನು ಅನ್ನೇಯ ಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ ಮಾರ್ಗದರ್ಶನದಲ್ಲಿ, ಸಿಇಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಗೋವರ್ಧನ್ ಗೋಪಾಲ್ ರವರ ನೇತೃತ್ವದಲ್ಲಿ, ಇನ್ಸ್ ಪೆಕ್ಟರ್ ಈಶ್ವರಿ ಮತ್ತು ಸಿಬ್ಬಂದಿ ಪ್ರಕರಣವನ್ನು ಪತ್ತೆ ಮಾಡಿ ವಂಚಕ ದಂಪತಿಯನ್ನು ಬಂಧಿಸಿ ಹಣ, ಆಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News