Friday, May 23, 2025
Homeರಾಷ್ಟ್ರೀಯ | Nationalತೆಲಂಗಾಣ : ಬಂಧಿತ ಇಬ್ಬರು ಉಗ್ರರು 7 ದಿನ ಪೊಲೀಸ್‌‍ ಕಸ್ಟಡಿಗೆ

ತೆಲಂಗಾಣ : ಬಂಧಿತ ಇಬ್ಬರು ಉಗ್ರರು 7 ದಿನ ಪೊಲೀಸ್‌‍ ಕಸ್ಟಡಿಗೆ

Court in Andhra sends 2 terror suspects to police custody for seven days

ವಿಜಯನಗರಂ, ಮೇ 23 (ಪಿಟಿಐ) ಇಲ್ಲಿನ ನ್ಯಾಯಾಲಯವು ಇಬ್ಬರು ಶಂಕಿತ ಭಯೋತ್ಪಾದಕರನ್ನು ಏಳು ದಿನಗಳ ಪೊಲೀಸ್‌‍ ಕಸ್ಟಡಿಗೆ ಕಳುಹಿಸಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸ್ಫೋಟಕಗಳೊಂದಿಗೆ ಇಬ್ಬರು ಶಂಕಿತರಾದ ಸಿರಾಜ್‌ ಉರ್‌ ರೆಹಮಾನ್‌ (29) ಮತ್ತು ಸೈಯದ್‌ ಸಮೀರ್‌ (28) ಅವರನ್ನು ಬಂಧಿಸಲಾಗಿತ್ತು.

ನ್ಯಾಯಾಲಯವು ರೆಹಮಾನ್‌ ಮತ್ತು ಸಮೀರ್‌ ಅವರನ್ನು ಏಳು ದಿನಗಳ ಪೊಲೀಸ್‌‍ ಕಸ್ಟಡಿಗೆ ನೀಡಿದೆ ಎಂದು ವಿಜಯನಗರಂ ಹೆಚ್ಚುವರಿ ಪೊಲೀಸ್‌‍ ವರಿಷ್ಠಾಧಿಕಾರಿ ಸೌಮ್ಯ ಲತಾ ಪಿಟಿಐಗೆ ತಿಳಿಸಿದ್ದಾರೆ.

ಇಬ್ಬರನ್ನು ಪ್ರಸ್ತುತ ವಿಶಾಖಪಟ್ಟಣಂ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.ಗೃಹ ಸಚಿವಾಲಯದಿಂದ ನಮಗೆ ಆದೇಶ ಬಂದರೆ, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗುವುದು. ಅಲ್ಲಿಯವರೆಗೆ, ಪೊಲೀಸರು ಕಸ್ಟಡಿಯಲ್ಲಿ ಅವರನ್ನು ವಿಚಾರಣೆ ನಡೆಸುತ್ತಾರೆ ಎಂದು ಎಎಸ್ಪಿ ಹೇಳಿದರು.

ಖಚಿತ ಸುಳಿವಿನ ಮೇರೆಗೆ ರೆಹಮಾನ್‌ ಅವರನ್ನು ಬಂಧಿಸಲಾಯಿತು ಮತ್ತು ಇಲ್ಲಿ ನಡೆದ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಅವರ ಆವರಣದಿಂದ ಅಮೋನಿಯಾ, ಸಲ್ಫರ್‌ ಮತ್ತು ಅಲ್ಯೂಮಿನಿಯಂ ಪುಡಿಯಂತಹ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬ್‌ ತಯಾರಿಸಿದ್ದಾಗಿ ರೆಹಮಾನ್‌ ತಪ್ಪೊಪ್ಪಿಕೊಂಡ ಆಧಾರದ ಮೇಲೆ, ತೆಲಂಗಾಣ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಹೈದರಾಬಾದ್‌ನ ಬೋಯಿಗುಡದಿಂದ ಸಮೀರ್‌ನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ರೆಹಮಾನ್‌ ಮತ್ತು ಸಮೀರ್‌ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಭಾರತೀಯ ನಾಗರಿಕ್‌ ಸುರಕ್ಷಾ ಸಂಹಿತಾ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Latest News