Monday, May 19, 2025
Homeಮನರಂಜನೆಜೈಲುವಾಸಿ ನಟ ದರ್ಶನ್‌ಗೆ ಮನೆ ಊಟ ನೀಡಲು ನಿರಾಕರಿಸಿದ ಕೋರ್ಟ್‌

ಜೈಲುವಾಸಿ ನಟ ದರ್ಶನ್‌ಗೆ ಮನೆ ಊಟ ನೀಡಲು ನಿರಾಕರಿಸಿದ ಕೋರ್ಟ್‌

ಬೆಂಗಳೂರು,ಜು.25- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರನಟ ದರ್ಶನ್‌ಗೆ ಮನೆ ಊಟ ನೀಡಲು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಿರಾಕರಿಸಿದೆ.

ಮನೆ ಊಟ, ಹಾಸಿಗೆ, ದಿಂಬು, ಪುಸ್ತಕಗಳನ್ನು ನೀಡಬೇಕೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ದರ್ಶನ್‌ ಮನವಿಯನ್ನು ವಜಾಗೊಳಿಸಿದೆ.

ಇದರಿಂದ ನಟ ದರ್ಶನ್‌ ಜೈಲೂಟವನ್ನೇ ಮಾಡಬೇಕಾಗಿದೆ. ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಸಾಮಾನ್ಯ ಖೈದಿಗಳಂತೆ ಜೈಲೂಟವನ್ನೇ ಸವಿಯಬೇಕಾಗಿದೆ. ದರ್ಶನ್‌ ಮನೆ ಊಟದ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ದರ್ಶನ್‌ ಪರ ವಕೀಲರು ಮತ್ತೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ದರ್ಶನ್‌ಗೆ ಮನೆ ಊಟಕ್ಕೆ ಅನುಮತಿ ನೀಡಬೇಕು ಎಂದು ಈ ಹಿಂದೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚನೆ ನೀಡಿತ್ತು.

ಹೈಕೋರ್ಟ್‌ ಸೂಚನೆಯಂತೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆದು ದರ್ಶನ್‌ನ ಅರ್ಜಿಯನ್ನು ಇಂದು ವಜಾಗೊಳಿಸಲಾಗಿದ್ದು, ದರ್ಶನ್‌ ಅವರ ಮನೆ ಊಟದ ಕನಸು ಭಗ್ನವಾಗಿದೆ.

RELATED ARTICLES

Latest News