Friday, November 22, 2024
Homeರಾಷ್ಟ್ರೀಯ | Nationalಪೊಲೀಸರಿಗೆ ಶರಣಾದ ನಕ್ಸಲಿಯ

ಪೊಲೀಸರಿಗೆ ಶರಣಾದ ನಕ್ಸಲಿಯ

ಲಾಟೇಹರ್, ಫೆ.11 (ಪಿಟಿಐ) ಕಟ್ಟಾ ಮಾವೋವಾದಿ ನಕ್ಸಲನೊಬ್ಬ ಜಾರ್ಖಂಡ್‍ನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರಿಗೆ ಬೇಕಾಗಿದ್ದ ಜಾರ್ಖಂಡ್‍ನ ಲಾಟೇಹಾರ್ ಜಿಲ್ಲೆಯಲ್ಲಿ ಸ್ವಯಂಘೋಷಿತ ಸಿಪಿಐ (ಮಾವೋವಾದಿ) ಝೋನಲ್ ಕಮಾಂಡರ್ ಲಾಲ್‍ದೀಪ್ ಗಂಜು ಅಲಿಯಾಸ್ ಕಲ್ತು ಶರಣಾದ ನಕ್ಸಲಿಯ. ಈತನ ತಲೆಯ ಮೇಲೆ ಪೊಲೀಸರು 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದರು ಎನ್ನುವುದು ಉಲ್ಲೇಖಾರ್ಹ.

ಕಲ್ತು ಎಂದು ಗುರುತಿಸಲಾದ ಮಾವೋವಾದಿ ಶನಿವಾರ ಸಂಜೆ ಲತೇಹರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ) ಅಂಜನಿ ಅಂಜನ್ ಅವರ ಕಚೇರಿಯಲ್ಲಿ ಶರಣಾದರು. ಲಾಟೆಹಾರ್‍ನ ಎರಡು ಮತ್ತು ಬಿಹಾರದ ಒಂದು ಪೊಲೀಸ್ ಠಾಣೆಗಳಲ್ಲಿ ಎಂಟು ಪ್ರಕರಣಗಳಲ್ಲಿ ಲಾಲ್‍ದೀಪ್ ಬೇಕಾಗಿದ್ದಾರೆ ಎಂದು ಎಸ್‍ಪಿ ಹೇಳಿದರು. ಇವರು 2004 ರಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಗೆ ಸೇರಿದ್ದರು ಮತ್ತು 20 ವರ್ಷಗಳಿಂದ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ಅಂಜನ್ ಹೇಳಿದರು.

“ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಮಕ್ಕಳೇ 2 ದಿನ ಊಟ ಬಿಡಿ” ಎಂದ ಶಾಸಕ

ಜಿಲ್ಲೆಯ ವಿವಿಧೆಡೆ ಪೊಲೀಸರು ನಡೆಸುತ್ತಿರುವ ಮಾವೋವಾದಿ ವಿರೋಧಿ ಕಾರ್ಯಾಚರಣೆಯಿಂದ ಮಾವೋವಾದಿ ಸಂಘಟನೆ ದುರ್ಬಲಗೊಂಡಿದೆ ಎಂದು ಎಸ್ಪಿ ತಿಳಿಸಿದರು. ಲಾಟೇಹರ್‍ನಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 10 ಮಂದಿ ಮಾವೋವಾದಿ ನಾಯಕರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಮತ್ತು 19 ಮಂದಿಯನ್ನು ಬಂಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News