Sunday, November 24, 2024
Homeಅಂತಾರಾಷ್ಟ್ರೀಯ | Internationalಬಾಂಗ್ಲಾದೇಶದಲ್ಲಿ ಮೋದಿ ನೀಡಿದ್ದ ಕಿರೀಟವನ್ನು ಕದ್ದ ದುಷ್ಕರ್ಮಿಗಳು

ಬಾಂಗ್ಲಾದೇಶದಲ್ಲಿ ಮೋದಿ ನೀಡಿದ್ದ ಕಿರೀಟವನ್ನು ಕದ್ದ ದುಷ್ಕರ್ಮಿಗಳು

Crown for Goddess Kali Gifted by PM Modi Stolen from Bangladesh's Jeshoreshwari Temple

ಢಾಕಾ, ಅ.11– ಬಾಂಗ್ಲಾದೇಶದ ಸತ್ಖಿರಾದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಸ್ಥಾನದ ಕಾಳಿ ದೇವಿಗೆ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ.ಕಳೆದ 2021ರ ಮಾರ್ಚ್ ನಲ್ಲಿ ಬಾಂಗ್ಲಾದೇಶಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗ ಢಾಕಾದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಡುಗೊರೆಯಾಗಿ ಈ ಕಿರೀಟ ನೀಡಿದ್ದರು.

ದೇವಾಲಯದ ಅರ್ಚಕ ದಿಲೀಪ್ ಮುಖರ್ಜಿ ಅವರು ದಿನದ ಪೂಜೆ ಮಾಡಿ ಹೊರಟ ನಂತರ ಕಳ್ಳತನ ನಡೆದಿದೆ. ಕಳ್ಳರನ್ನು ಪತ್ತೆಹಚ್ಚಲು ನಾವು ದೇವಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಶ್ಯಾಮನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತೈಜುಲ್ ಇಸ್ಲಾಂ ತಿಳಿಸಿದ್ದಾರೆ

51 ಶಕ್ತಿಪೀಠಗಳಲ್ಲಿ ಜೇಜೋಶ್ವರಿ ದೇವಸ್ಥಾನವೂ ಒಂದು ಕಳವಾದ ಕಿರೀಟವು ಬೆಳ್ಳಿ ಮತ್ತು ಚಿನ್ನದ ಲೇಪಿತದಿಂದ ಮಾಡಿದ ಗಮನಾರ್ಹ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಹಿಂದೂ ಪುರಾಣಗಳ ಪ್ರಕಾರ, ಜೆಶೋರೇಶ್ವರಿ ದೇವಾಲಯವುಭಾರತ ಮತ್ತು ನೆರೆಯ ದೇಶಗಳಲ್ಲಿ ಹರಡಿರುವ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ.

RELATED ARTICLES

Latest News