ನವದೆಹಲಿ,ಏ.24- ಇಡೀ ದೇಶದ ಆಸಿತೆಯನ್ನೇ ಬಡಿದೆಬ್ಬಿಸಿರುವ ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಭೀಭತ್ಸ ನರಮೇಧಕ್ಕೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಪಾಪಿ ಪಾಕಿಸ್ತಾನದ ಮೇಲೆ ಕೇಂದ್ರ ಸರ್ಕಾರ ಮುಟ್ಟು ನೋಡಿಕೊಳ್ಳುವಂತಹ ಪೆಟ್ಟು ನೀಡಬೇಕೆಂದು ಆಗ್ರಹಿಸಿದ್ದಾರೆ.
ದೇಶದ ಗಡಿ, ಜನ, ಜೀವನ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ ಜೋರಾಗಿದೆ. ದೇಶದ ಆರ್ಥಿಕತೆಗೆ ಹೊಡೆದ ಬಿದ್ದರೂ ಪರವಾಗಿಲ್ಲ. ವೈರಿಗಳನ್ನು ನಿರ್ನಾಮ ಮಾಡಿ, ಒಳ ಹೊಕ್ಕು ಹೊಡೆದು ಭಾರತವು ಧೈರ್ಯ ಸಾಹಸ ಮೆರೆಯಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ದೇಶವನ್ನೇ ತಲ್ಲಣಗೊಳಿಸಿದ ಉಗ್ರರ ಹೇಯ ಕೃತ್ಯ, ಪ್ರವಾಸಿಗರ ಸಾವುನೋವು ದೇಶದ ಜನರ ನಿದ್ದೆಗೆಡಿಸಿದೆ. ಹಿಂದೂಗಳನ್ನಷ್ಟೇ ಟಾರ್ಗೆಟ್ ಮಾಡಿ ಪಾಯಿಂಟ್ ಬ್ಲಾಂಕ್ ರೇಂಜ್ನಿಂದ ಹೊಡೆದು ಹಾಕಿರುವುದು ಅಸಹನೀಯ. ಭಾರತ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿ ಬಂದಿದೆ.
ಯುದ್ಧಕ್ಕೆ-ಯುದ್ಧ, ರಕ್ತಕ್ಕೆ-ರಕ್ತವಾದ ಎಂಬಂತಾದರೆ ದೇಶದ ಸ್ಥಿತಿಗತಿ, ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು ಎಂಬ ಅಂದಾಜಿದ್ದರೂ ಸಹಿತ, ಅದೆಲ್ಲ ಆಮೇಲೆ ನೋಡಿಕೊಳ್ಳೋಣ ಎಂಬ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರಿನ ಐಟಿ ವಾಸ್ತುಶಿಲ್ಪಿ, ಡಾ.ರಾಜ್‌ಕುಮಾರ್ ಅಭಿಮಾನಿಯಾಗಿರುವ ಅಮರನಾಥ್ ಶಿವಶಂಕರ್ ಅವರು ಸಹ ವೈಯಕ್ತಿಕವಾಗಿ, ಭಾರತದ ಗಡಿಗಳನ್ನು ಭದ್ರಗೊಳಿಸುವ ಪ್ರಕ್ರಿಯೆಯಲ್ಲಿ ಭಾರತ ಯುದ್ಧ ಸಾರಿ ವೈರಿಗಳ ಸಂಹಾರ ಮಾಡಬೇಕು. ಭಾರತದ ಆರ್ಥಿಕ ಸ್ಥಿತಿ ತಾತ್ಕಾಲಿಕ ಹೊಡೆತ ತಿಂದರೂ ನಾನು ಅದನ್ನು ಜೀರ್ಣಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಹಾಗೆಯೇ ಬೆಂಗಳೂರಿನ ಅಭಿವೃದ್ಧಿಗೆ ಕಡಿವಾಣ ಹಾಕಿ ಬೆಂಗಳೂರಿನ ರಿಯಲ್ ಎಸ್ಟೇಟ್ ಬೆಲೆ ಕುಸಿದರೆ, ಅದೂ ಆಗಲಿ. ನನ್ನ ರಿಯಲ್ ಎಸ್ಟೇಟ್ ಹೂಡಿಕೆಯ ಲಾಭದ ಪ್ರಮಾಣ ಕುಗ್ಗಿದರೂ ಸರಿ. ಜನರ ಬದುಕು ಹಸನಾಗಲಿ. ನೆಮದಿ ಮತ್ತು ಆರೋಗ್ಯ ಇದ್ದರೆ ಹಣ ಗಳಿಸಬಹುದು ಎಂದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕ ಹಿಂದೂಗಳಿಗೆ ಕಷ್ಟ ಎದುರಾದರೂ ಪರವಾಗಿಲ್ಲ. ಶತ್ರುಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ಆಶಿಸಿದ್ದಾರೆ.
ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣಗಳಲ್ಲಿ ಮಹತ್ವದ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಪಹಲ್ಗಾಮ್ ಘಟನೆಯಲ್ಲಿ ಕನ್ನಡಿಗರು ಮೃತಪಟ್ಟಿದ್ದಾರೆ. ಯಾರೆಲ್ಲ ಕನ್ನಡಪರ ಹೋರಾಟಗಾರರು ಏನು ಮಾಡುತ್ತಿದ್ದೀರಿ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದರು. ಅದಕ್ಕೆ ಉತ್ತರಿದ ಅಮರನಾಥ್ ಶಿವಶಂಕರ್ ಅವರು, ಭಯೋತ್ಪಾದಕ ಕೃತ್ಯ ಹೀನಾಯವಾದದ್ದು. ನಮವರೆಲ್ಲರೂ ಸತ್ತಿದ್ದಾರೆ. ಬಹಳ ದುಃಖವಾಗಿದೆ. ಆದರೆ ಸಿಟ್ಟು ರೋಷ-ಆವೇಶ ಅಸಹಾಯಕತೆ ತಾತ್ವಿಕವಾಗಿರಬೇಕು. ಕನ್ನಡ ಹೋರಾಟಗಾರರು ಈ ಪ್ರಸಂಗವನ್ನು ತಡೆಯಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದ್ದಾರೆ.
ದೇಶದ ರಕ್ಷಣೆಯ ಹೊಣೆ ಯಾರದ್ದು?:
ಗುಪ್ತಚರ ವೈಫಲ್ಯ ಆಗಿದ್ಯಾಕೆ?, ದೇಶದ ಒಳಗಿರುವ ಶತ್ರುಗಳ ಪಾತ್ರವೇನು? ಸೇನೆಯಲ್ಲಿ ಜನಬಲ ಹೆಚ್ಚಿಸಬೇಕಿದೆಯೇ?, ಸೇನೆಯಲ್ಲಿ ಹೊಸತಲೆಮಾರಿನ ಶಸಾ್ತ್ರಸ್ತ್ರಗಳನ್ನು ಕೊಳ್ಳಬೇಕೆ?, ಇದೆಲ್ಲ ಮಾಡಲು ನಮ ತೆರಿಗೆಯಲ್ಲಿ ಮತ್ತಷ್ಟು ಪಾಲು ತೆಗೆದುಕೊಳ್ಳಲಿ, ಬೇಸರವಿಲ್ಲ ಎನ್ನುವ ಮೂಲಕ ದೇಶದ ರಕ್ಷಣೆಗೆ ಆರ್ಥಿಕ ಹೊರೆ ಎದುರಿಸಲು ಜನ ಸಿದ್ಧ ಎಂಬಂತೆ ಹೇಳಿದ್ದಾರೆ.
ರಾಜಕೀಯ ಪಕ್ಷಗಳ ಬಾಲಂಗೋಚಿ ಆಗಬಾರದು ಇಂತಹ ಪ್ರಶ್ನೆಗಳನ್ನು ನಾವುಗಳು ಎತ್ತಲೇಬೇಕು. ರಾಜಕೀಯ ಪಕ್ಷಗಳ ಬಾಲಂಗೋಚಿಯಾಗುವ ಬದಲು ನಮ ದೇಶವನ್ನು ಹೇಗೆ ಸದೃಢವಾಗಿ ಕಾಣಬೇಕು ಅನ್ನುವುದು ಎಲ್ಲಕ್ಕಿಂತ ಮುಖ್ಯ. ಪಕ್ಷಗಳು, ರಾಜಕಾರಣಿಗಳು ಯಾವುದು ಶಾಶ್ವತವಲ್ಲ.
ಭಾರತ ಮತ್ತು ಭಾರತೀಯರ ಬದುಕು ಅಷ್ಟೇ ಶಾಶ್ವತ. ಅದನ್ನು ಕಾಪಾಡಿಕೊಳ್ಳಬೇಕು ಎನ್ನುವ ಮೂಲಕ ಪಹಲ್ಗಾಮ್ ಘಟನೆ ಬೆನ್ನಲ್ಲೆ ದೇಶ, ಗಡಿ ಭದ್ರತೆ, ಜನರ ಹಿತ ಮುಖ್ಯ. ಅದರ ಯಾವುದು ಮುಖ್ಯವಲ್ಲ ಎಂದಿದ್ದಾರೆ. ಅಮರನಾಥ್ ಅವರಂತೇ ದೇಶದ ಅನೇಕರು ಸಹ ಉಗ್ರರು ನೀಡಿದ ಸಂದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ರಾಜಕೀಯ ಬದಿಗಿಟ್ಟು ಹಿಂದೂಗಳು ಒಂದಾಗಬೇಕು. ಕೇಂದ್ರ ಸರ್ಕಾರ ಅಗತ್ಯ ಕ್ರಮ ಜರುಗಿಸಬೇಕು.
ಪಹಲ್ಗಾಮ್‌ನಲ್ಲಿ ಮೃತಪಟ್ಟ ಪ್ರವಾಸಿಗರ ಜೀವಕ್ಕೆ ನ್ಯಾಯ ಒದಗಿಸಲೇಬೇಕು ಎಂಬ ಮಹತ್ತರ ಬೇಡಿಕೆಯನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಉಗ್ರರ ದಾಳಿ ಖಂಡಿಸಿ ಪೋಸ್ಟ್ ಹಂಚಿಕೊಳ್ಳಲಾಗಿದೆ.
ದೇಶದ ನಾನಾ ಭಾಗಗಳಲ್ಲಿ ಈಗಾಗಲೇ ಪ್ರತಿಭಟನೆ ಆರಂಭವಾಗಿದೆ. ಸರ್ಕಾರ ಸುಮನೆ ಕೂರದೇ ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರರನ್ನು ಮಟ್ಟ ಹಾಕುವಂತೆ ಮನವಿ ಮಾಡಿದ್ದಾರೆ. ಪಾಕಿಸ್ತಾನ ಹಾಗೂ ಉಗ್ರರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.