ಥಾಣೆ, ಅ.18 – ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ನವಿ ಮುಂಬೈ ಸೈಬರ್ ಪೊಲೀಸರು 32 ಕೋಟಿ ರೂ ಗೂ ಹೆಚ್ಚು ಮೌಲ್ಯದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. ನವಿ ಮುಂಬೈನ ಸೈಬರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ಗಜಾನನ್ ಕದಮ್ ಅವರು ಕಳೆದ ಆಗಸ್ಟ್‍ನಲ್ಲಿ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್‍ನಲ್ಲಿ 6.6 ಕೋಟಿ ರೂಪಾಯಿಗಿಂತ ಹೆಚ್ಚು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿರುವ ಬಗ್ಗೆ ವ್ಯಕ್ತಿಯೊಬ್ಬರು ನೀಡಿದ್ದ ದೂರು ಬಗ್ಗೆ ಪ್ರಕರಣ ದಾಖಲಿಸಿದ್ದರು
ಮಹಿಳೆಯೊಬ್ಬರು ತನ್ನೊಂದಿಗೆ ಸ್ನೇಹ ಬೆಳೆಸಿ ನಂತರ ಕ್ರಿಪ್ರೋಕರೆನ್ಸಿ ಟ್ರೇಡಿಂಗ್‍ನಲ್ಲಿ ಹೂಡಿಕೆ ಮಾಡುವಂತೆ ಕೇಳಿದರು ಮತ್ತು ಉತ್ತಮ ಆದಾಯವನ್ನು ಖಾತರಿಪಡಿಸಿದರು ವಿವಿಧ ಸಂದರ್ಭಗಳಲ್ಲಿ ಒಟ್ಟು 75 ಲಕ್ಷ ರೂಪಾಯಿಗಳನ್ನು ರಿಟನ್ರ್ಸ್‍ನಲ್ಲಿ ಸ್ವೀಕರಿಸಿದರು, ಆದರೆ ನಂತರ ಅದನ್ನು ಅದನ್ನು ನಿಲ್ಲಿಸಿದರು ಎಂದು ಅಕಾರಿಯೊಬ್ಬರು ಹೇಳಿದರು.
ಬೆಳಗಾವಿಗೆ ಡಿಕೆಶಿ ಆಗಮನ, ಸ್ವಾಗತಕ್ಕೆ ಲಕ್ಷ್ಮಿ-ಸತೀಶ್ ಗೈರು
ಈ ಸಂಬಂಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಸೈಬರ್ ಪೆÇಲೀಸ್‍ನಲ್ಲಿ ಅಪರಾಧವನ್ನು ದಾಖಲಿಸಿದ್ದಾರೆ. ಪೆÇಲೀಸ್ ತನಿಖಾ ತಂಡವು ದೂರುದಾರರಿಂದ ಹಣವನ್ನು ಪಾವತಿಸಿದ ವಿವಿಧ ಬ್ಯಾಂಕ್‍ಗಳೊಂದಿಗೆ ವಿಚಾರಣೆ ನಡೆಸಿತು ಮತ್ತು ಮೊದಲ ಹಂತವಾಗಿ, ಕಳೆದ ಕೆಲವು ವಾರಗಳಲ್ಲಿ 32,66,12,091 ರೂ ಮೌಲ್ಯದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಾಲು ಸಖಾರಾಮ್ ಖಂಡಗಾಲೆ (42) ಮತ್ತು ರಾಜೇಂದ್ರ ರಾಮಖಿಲವನ್ ಪಟೇಲ್ (52) ಎಂಬುವವರನ್ನು ಬಂಸಲಾಗಿದೆ. ಬಂಧಿತರು ಅಪರಾಧದಲ್ಲಿ ಭಾಗಿಯಾಗಿರುವ ಇತರರಿಗೆ ಮೊಬೈಲ್ ಸಂಖ್ಯೆಗಳು, ಬ್ಯಾಂಕ್ ಖಾತೆ ವಿವರಗಳು, ಚೆಕ್ ಪುಸ್ತಕಗಳು ಮತ್ತು ವಿವಿಧ ವ್ಯಕ್ತಿಗಳ ಎಟಿಎಂ ಕಾರ್ಡ್‍ಗಳನ್ನು ಹಸ್ತಾಂತರಿಸಿರುವುದು ತನಿಖೆಯ ವೇಳೆ ತಿಳಿದುಬಂದಿದೆ.
ಅಪರಾಧದಲ್ಲಿ ಭಾಗಿಯಾದ ಇತರರನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ