Sunday, October 6, 2024
Homeರಾಷ್ಟ್ರೀಯ | Nationalಕೊನೆಯ ಹಂತದ ಲೋಕಸಭಾ ಚುನಾವಣೆ : ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಕೊನೆಯ ಹಂತದ ಲೋಕಸಭಾ ಚುನಾವಣೆ : ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ನವದೆಹಲಿ, ಮೇ 30- ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಪ್ರಮುಖರು ಸ್ಪರ್ಧಿಸಿರುವ ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಬಹಿರಂಗ ಪ್ರಚಾರಕ್ಕೆ ಇಂದು ಅಂತಿಮ ತೆರೆ ಬೀಳಲಿದೆ.

ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, 57 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್‌‍ ನೇತೃತ್ವದ ಇಂಡಿಯಾ ಮೈತ್ರಿಕೂಟ ಹಾಗೂ ಕೆಲವೆಡೆ ಪ್ರಾದೇಶಿಕ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಪಂಜಾಬ್‌ನಲ್ಲಿ 328 ಮತ್ತು ಉತ್ತರ ಪ್ರದೇಶದಲ್ಲಿ 144 ಬಿಹಾರದಲ್ಲಿ 134, ಒಡಿಶಾದಲ್ಲಿ 66, ಜಾರ್ಖಂಡ್‌ದಲ್ಲಿ 52, ಹಿಮಾಚಲ ಪ್ರದೇಶದಲ್ಲಿ 37 ಮತ್ತು ಚಂಡೀಗಢದಲ್ಲಿ ಒಂದು ಸ್ಥಾನಕ್ಕೆ 19 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಿದ್ದು, ಇಡೀ ಚಿತ್ತ ಈ ಕ್ಷೇತ್ರದತ್ತ ಗಮನ ಹರಿಸಿದೆ.ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್‌, ಒಡಿಸ್ಸಾ, ಪಶ್ಚಿಮಬಂಗಾಳ, ಜಾರ್ಖಾಂಡ್‌, ಛತ್ತೀಸ್‌‍ಗಢ ಸೇರಿದಂತೆ ಒಟ್ಟು 57 ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದೆ.

ಉತ್ತರ ಪ್ರದೇಶದ ವಾರಣಾಸಿ, ಮಹರಾಜ್‌ಗಂಜ್‌, ಗೋರಖ್‌ಪುರ, ಕುಶಿನಗರ, ಡಿಯೋರಿಯಾ, ಬನ್ಸ್ಗಾಂವ್‌, ಘೋಸಿ, ಗಾಜಿಪುರ, ಬಲ್ಲಿಯಾ, ಸೇಲಂಪುರ, ಚಂದೌಲಿ, ಮಿರ್ಜಾಪುರ, ರಾಬರ್ಟ್‌್ಸಗಂಜ್‌, ಪಂಜಾಬ್‌ನ ಗುರುದಾಸಪುರ, ಅಮೃತಸರ, ಖಾದೂರ್‌ ಸಾಹಿಬ್‌, ಜಲಂಧರ್‌, ಹೋಶಿಯಾರ್ಪುರ, ಆನಂದಪುರ ಸಾಹಿಬ್‌, ಲುಧಿಯಾನ, ತೇಘರ್‌ ಸಾಹಿಬ್‌, ರೀದ್ಕೋಟ್‌, ಫಿರೋಜ್‌ಪುರ, ಬಟಿಂಡಾ, ಸಂಗ್ರೂರ್‌, ಪಟಿಯಾಲದಲ್ಲಿ ಮತದಾನ ನಡೆಯಲಿದೆ.

ಬಿಹಾರದ ಅರ್ರಾಹ್‌, ಬಕ್ಸರ್‌, ಕರಕಟ್‌, ಜಹಾನಾಬಾದ್‌, ನಳಂದಾ, ಪಾಟ್ನಾ ಸಾಹಿಬ್‌, ಪಾಟಲೀಪುತ್ರ, ಸಸಾರಮ್‌, ಪಶ್ಚಿಮ ಬಂಗಾಳದ ಬರಾಸತ್‌, ಬಸಿರ್ಹತ್‌, ಡೈಮಂಡ್‌ ಹಾರ್ಬರ್‌, ಡಮ್‌ ಡಮ್‌, ಜಯನಗರ, ಜಾದವ್ಪುರ, ಕೋಲ್ಕತ್ತಾ ದಕ್ಷಿಣ, ಕೋಲ್ಕತ್ತಾ ಉತ್ತರ, ಮಥುರಾಪುರ ಹಾಗೂ ಚಂಡೀಗಢದಲ್ಲಿ ಶನಿವಾರ ಮತದಾನ ನಡೆಯಲಿದೆ.

ಹಿಮಾಚಲ ಪ್ರದೇಶದ, ಮಂಡಿ, ಶಿಮ್ಲಾ, ಕಾಂಗ್ರಾ, ಹಮೀಪುರ್‌, ಒಡಿಶಾದ ಬಾಲಸೋರ್‌, ಭದ್ರಕ್‌, ಜಾಜ್ಪುರ್‌, ಜಗತ್ಸಿಂಹಪುರ, ಕೇಂದ್ರಪಾರಾ, ಮಯೂರ್ಭಂಜ್‌ ಹಾಗೂ ಜಾರ್ಖಂಡ್‌ನ ದುಮ್ಕಾ, ಗೊಡ್ಡಾ, ರಾಜಮಹಲ್‌ನಲ್ಲಿ ಮತದಾನ ನಡೆಯಲಿದೆ.

RELATED ARTICLES

Latest News