ಚಿಕ್ಕಮಗಳೂರು, ಮೇ 5- ಸೈಬರ್ ಅಪರಾಧದ ಜಾಲಕ್ಕೆ ಸಿಲುಕಿ ಕಾಫಿ ನಾಡಿನ ಚಿಕ್ಕಮಗಳೂರು ನಗರದ ವೈದ್ಯರೊಬ್ಬರು 75 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ವೈದ್ಯರೊಬ್ಬರಿಗೆ ವಿಐಪಿ ಆನಂದ್ ವಂಗಾರ್ಡ್ ಗ್ರೂಪ್ ನಿಂದ ಕರೆ ಮಾಡಿ ನಿಮಗೆ ಸ್ಟಾಕ್ ಎಕ್‌್ಸಚೇಂಜ್ ಕಮಾರ್ಕೆಟ್ ನ ಬಗ್ಗೆ ಆಸಕ್ತಿ ಇದ್ದರೆ ತಮಲ್ಲಿ ಹಣ ತೊಡಗಿಸುವಂತೆ ತಿಳಿಸಿದ್ದಾರೆ.
ಕಂಪನಿಯಲ್ಲಿ ಹಣವನ್ನು ತೊಡಗಿಸಿ ಬೇರೆ ಕಂಪನಿಗಿಂತ ಅಧಿಕ ಆದಾಯ ಪಡೆಯಬಹುದು ಎಂದು ಹೇಳಿದ್ದು, ಇದನ್ನು ನಂಬಿದ್ದಾರೆ. ಬಳಿಕ ವೈದ್ಯರು ವಿವಿಧ ಖಾತೆಗಳಿಗೆ ಮಾ.24 ರಿಂದ ಏ.16ರವರೆಗೆ ಒಟ್ಟು 75 ಲಕ್ಷ ರೂ. ಗಳನ್ನು ಹೂಡಿಕೆ ಮಾಡಿರುತ್ತಾರೆ.
ಅದರೆ ವಿಐಪಿ ಆನಂದ್ ವಂಗಾರ್ಡ್ ಗ್ರೂಪ್ ನವರು ಹೂಡಿಕೆ ಮಾಡಿರುವ ಹಣ, ಅದಕ್ಕೆ ಆದಾಯ ನೀಡದೇ ಇನ್ನು 22 ಲಕ್ಷ ರೂಗಳನ್ನು ಖಾತೆಗೆ ಹಾಕುವಂತೆ ತಿಳಿಸಿದ್ದಾರೆ.ತಾನು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗಿರುವ ಬಗ್ಗೆ ಅರಿವು ಆಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಾಗಿದೆ.
ಸಾರ್ವಜನಿಕರು ಇಂತಹ ಮೋಸದ ಸ್ಟಾಕ್ ಎಕ್‌್ಸಚೇಂಜ್ ಮಾರ್ಕೆಟ್‌ನಲ್ಲಿ ಹಣವನ್ನು ಹೂಡಿಕೆ ಮಾಡಿ ಮೋಸ ಹೋಗಬಾರದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.