Monday, November 25, 2024
Homeಅಂತಾರಾಷ್ಟ್ರೀಯ | Internationalಪನ್ನುನ್ ಹತ್ಯೆ ಸಂಚಿನ ಆರೋಪಿ ನಿಖಿಲ್‍ಗುಪ್ತಾ ಹಸ್ತಾಂತರಕ್ಕೆ ಜೆಕ್ ನ್ಯಾಯಾಲಯ ಸಮ್ಮತಿ

ಪನ್ನುನ್ ಹತ್ಯೆ ಸಂಚಿನ ಆರೋಪಿ ನಿಖಿಲ್‍ಗುಪ್ತಾ ಹಸ್ತಾಂತರಕ್ಕೆ ಜೆಕ್ ನ್ಯಾಯಾಲಯ ಸಮ್ಮತಿ

ನವದೆಹಲಿ,ಜ.20- ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್‍ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಅಮೆರಿಕ ಆರೋಪಿಸಿರುವ 52 ವರ್ಷದ ಭಾರತೀಯ ನಿಖಿಲ್ ಗುಪ್ತಾನನ್ನು ಹಸ್ತಾಂತರಿಸಲು ಜೆಕ್ ನ್ಯಾಯಾಲಯ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಜೂನ್‍ನಲ್ಲಿ ಪ್ರೇಗ್‍ನಲ್ಲಿ ಜೆಕ್ ಅಧಿಕಾರಿಗಳಿಂದ ಬಂಧನಕ್ಕೊಳಗಾದ ಗುಪ್ತಾ ಅವರು ಅಮೆರಿಕ ಮತ್ತು ಕೆನಡಾದ ಎರಡು ಪೌರತ್ವ ಹೊಂದಿರುವ ಸಿಖ್ ಪ್ರತ್ಯೇಕತಾವಾದಿ ಪನ್ನುನ್ ಅವರನ್ನು ಕೊಲ್ಲುವ ಯೋಜನೆಯಲ್ಲಿ ಭಾರತೀಯ ಸರ್ಕಾರಿ ಅಧಿಕಾರಿಯೊಂದಿಗೆ ಸಹಕರಿಸಿದ್ದಾರೆ ಎಂದು ಯುಎಸ್ ಫೆಡರಲ್ ಪ್ರಾಸಿಕ್ಯೂಟರ್‍ಗಳು ಆರೋಪಿಸಿದ್ದಾರೆ.

ರಾಜೀವ್ ಬದುಕಿದ್ದರೆ ಬಾಬ್ರಿ ಮಸೀದಿ ಉಳಿಯುತ್ತಿತ್ತು : ಅಯ್ಯರ್

ಜೆಕ್ ನ್ಯೂಸ್ ವೆಬ್‍ಸೈಟ್ ಪ್ರಕಾರ, ತಪ್ಪಾದ ಗುರುತಿನ ಪ್ರಕರಣವಿದೆ ಎಂದು ಗುಪ್ತಾ ವಾದಿಸಿದರು ಮತ್ತು ಯುನೈಟೆಡ್ ಸ್ಟೇಟ್ಸ ಹುಡುಕುತ್ತಿರುವ ವ್ಯಕ್ತಿ ನಾನಲ ಎಂದು ವಾದಿಸಿದ್ದರು. ಅವರು ಪ್ರಕರಣವನ್ನು ರಾಜಕೀಯ ಸ್ವರೂಪದಲ್ಲಿ ನಿರೂಪಿಸಿದರು, ಸುದೀರ್ಘ ಕಾನೂನು ಹೋರಾಟಕ್ಕೆ ವೇದಿಕೆಯನ್ನು ಸಿದ್ಧಪಡಿಸಿದ್ದರು. ರಾಯಿಟರ್ಸ್ ಉಲ್ಲೇಖಿಸಿದಂತೆ, ಸಚಿವರ ನಿರ್ಧಾರದ ಸಮಯದ ಚೌಕಟ್ಟನ್ನು ಈ ಹಂತದಲ್ಲಿ ಊಹಿಸಲಾಗುವುದಿಲ್ಲ ಎಂದು ಜೆಕ್ ನ್ಯಾಯ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಕೆಳ ನ್ಯಾಯಾಲಯದ ನಿರ್ಧಾರಗಳ ಬಗ್ಗೆ ಯಾವುದೇ ಸಂದೇಹಗಳು ಉದ್ಭವಿಸಿದರೆ ಜೆಕ್ ಸುಪ್ರೀಂ ಕೋರ್ಟ್‍ನ ಅಭಿಪ್ರಾಯವನ್ನು ಪಡೆಯಲು ನ್ಯಾಯ ಸಚಿವರು ಮೂರು ತಿಂಗಳ ಕಾಲಾವಕಾಶವನ್ನು ಹೊಂದಿದ್ದಾರೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಪ್ರೇಗ್ ಹೈಕೋರ್ಟ್ ಈ ಹಿಂದೆ ಕೆಳ ನ್ಯಾಯಾಲಯದ ಡಿಸೆಂಬರ್ ತೀರ್ಪಿನ ವಿರುದ್ಧ ಗುಪ್ತಾ ಅವರ ಮನವಿಯನ್ನು ವಜಾಗೊಳಿಸಿತ್ತು, ಅದು ಹಸ್ತಾಂತರಕ್ಕೆ ಅನುಮತಿ ಇದೆ ಎಂದು ತೀರ್ಪು ನೀಡಿತು.

ಜೆಕ್ ರಿಪಬ್ಲಿಕ್ ಐತಿಹಾಸಿಕವಾಗಿ ಅಮೆರಿಕದ ಹಸ್ತಾಂತರ ವಿನಂತಿಗಳನ್ನು ಅನುಮತಿಸಿದೆ. ಗುಪ್ತಾ ಅವರ ವಕೀಲರು ಹಸ್ತಾಂತರಕ್ಕೆ ಅಧಿಕಾರ ನೀಡದಂತೆ ಜೆಕ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

RELATED ARTICLES

Latest News