ಬೆಂಗಳೂರು : ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮುಲ್) ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬಮುಲ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಕಣದಲ್ಲಿ ಡಿ.ಕೆ.ಸುರೇಶ್ ಒಬ್ಬರೇ ಉಳಿದಿದ್ದರು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನಕಪುರ ತಾಲ್ಲೂಕು ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ ಸುರೇಶ್‌ರವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಬಮುಲ್‌ನ 14 ನಿರ್ದೇಶಕರ ಪೈಕಿ ಕಾಂಗ್ರೆಸ್ ಬೆಂಬಲಿತ 11 ನಿರ್ದೇಶಕರಿದ್ದರು. ಹೀಗಾಗಿ ಬೇರೆ ಯಾರೂ ಕೂಡ ಸ್ಪರ್ಧೆ ಮಾಡಿರಲಿಲ್ಲ.