ಹೆಚ್ ಡಿ.ಕೋಟೆ, ಮೇ.25 -ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. ಮಹದೇವಸ್ವಾಮಿ ಅವರ ಪತ್ನಿ ಮಂಜುಳಾ ಹಾಗೂ ಕಿರಿಯ ಮಗಳು ಹರ್ಷಿತಾ ಮೃತ ದುರ್ದೈವಿಗಳು.
ಮೂವರು ಕಾಲುಗಳಿಗೆ ಹಗ್ಗ ಕಟಿಕೊಂಡು ಕೆರೆಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹದೇವಸ್ವಾಮಿ ಅವರಿಗೆ ಅರ್ಪಿತಾ ಹಾಗೂ ಹರ್ಷಿತಾ ಎಂಬ ಇಬ್ಬರು ಹೆಣ್ಣುಮಕ್ಕಳು. ಮೈಸೂರಿನವರಾದ ಮಹದೇವಸ್ವಾಮಿ ಅವರು ಕುಟುಂಬ ಮಕ್ಕಳ ವಿದ್ಯಾಭ್ಯಾಸಕ್ಕಾಗಿ
ಹೆಚ್‌ಡಿ.ಕೋಟೆಯಲ್ಲಿ ವಾಸವಿದ್ದರು.
ಸ್ವಂತ ಮನೆ ಖರೀದಿ ಸುಖಿ ಸಂಸಾರ ನಡೆಸುತ್ತಿದ್ದರು. ಹಿರಿಯ ಮಗಳು ಅರ್ಪಿತಾ ಮೈಸೂರಿನಲ್ಲಿ ಕಾನೂನು ಪದವಿ ಓದುತ್ತಿದ್ದಳು. ಎರಡನೇ ಮಗಳು ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದಳು. ಅರ್ಪಿತಾ ಮೈಸೂರಿನಲ್ಲಿ ಅನ್ಯಜಾತಿಯ ಹುಡುಗನ ಜೊತೆ ಪ್ರೀತಿಗೆ ಬಿದ್ದು, ಆತನನ್ನೇ ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದಳು. ತಂದೆ ಮಹದೇವಸ್ವಾಮಿ ಸಮುದಾಯದ ಜನರಿಗೆ ಹೆದರಿ ಮದುವೆ ನಿರಾಕರಿಸಿದ್ದರು.
ಇದರಿಮದಾಗಿ ಅರ್ಪಿತಾ ಮನೆ ಬಿಟ್ಟು ತೆರಳಿದ್ದಳು. ಇದನ್ನು ತಿಳಿದು ಮರ್ಯಾದೆ ಹೋಯಿತು ಎಂದು ಭಾವಿಸಿ ಮಹದೇವಸ್ವಾಮಿ, ಪತ್ನಿ ಹಾಗೂ ಕಿರಿಯ ಮಗಳ ಸಮೇತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ಗ್ರಾಮಸ್ಥರು ಕೆರೆ ಬಳಿ ಜಮಾಯಿಸಿದ್ದರು.ರಾತ್ರಿ ಮೃತ ದೇಹ ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮಗ, ಸೊಸೆ ಹಾಗೂ ಮೊಮ್ಮಗಳ ಸಾವಿನಿಂದ ದಿಕ್ಕೇ ತೋಚದಂತೆ ಕುಳಿತ ವೃದ್ಧ ತಂದೆ- ತಾಯಿ ಕಣ್ಣೀರ ಕೋಡಿ ಹರಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ ಮಹದೇವಸ್ವಾಮಿ ಅವರ ಜಮೀನಲ್ಲೇ ಒಂದೇ ಚಿತೆಯಲ್ಲಿ ಸಾಲಾಗಿ ಮಲಗಿಸಿ ಅಂತ್ಯಸಂಸ್ಕಾರವನ್ನು ಗ್ರಾಮಸ್ಥರು ನೆರವೇರಿಸಿದ್ದಾರೆ. ಹೆಚ್ ಡಿ.ಕೋಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.